Advertisement

ಫೆ. 26ರ ಗೋ- ಸತ್ಯಾಗ್ರಹಕ್ಕೆ ಬೆಳ್ತಂಗಡಿ ಬಿಜೆಪಿ ಬೆಂಬಲ

03:06 PM Feb 24, 2017 | Team Udayavani |

ಬೆಳ್ತಂಗಡಿ : ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಫೆ. 26 ರಂದು ವಿಶ್ವಹಿಂದೂ ಪರಿಷದ್‌ ನೇತೃತ್ವದಲ್ಲಿ ಜರಗುವ ಗೋ- ಸತ್ಯಾಗ್ರಹ ಕಾರ್ಯಕ್ರಮವನ್ನು ಬೆಳ್ತಂಗಡಿ ಬಿಜೆಪಿ ಬೆಂಬಲಿಸುತ್ತದೆ.  

Advertisement

ಗೋ- ಹತ್ಯ ನಿಷೇಧ ಕಾಯ್ದೆಯ ಆಗ್ರಹಕ್ಕಾಗಿ, ಗೋ-ಹಂತಕರಿಗೆ ಕಠಿನ ಶಿಕ್ಷೆ ಮತ್ತು ಕಳವಾದ ಗೋವಿಗೆ ಪರಿಹಾರ ಧನ ನೀಡುವಂತೆ ಆಗ್ರಹಿಸಿ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಗೋ-ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬೆಳ್ತಂಗಡಿ ಬಿಜೆಪಿ ಅಧ್ಯಕ್ಷ ರಂಜನ್‌ ಜಿ. ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಸೀತಾರಾಮ್‌ ಬಿ.ಎಸ್‌., ಪ್ರಭಾಕರ ಶೆಟ್ಟಿ ಉಪ್ಪಡ್ಕ, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಶಾರದಾ ರೈ, ಜಿಲ್ಲಾ ಕಾರ್ಯದರ್ಶಿ ಕೊರಗಪ್ಪ ನಾಯ್ಕ  ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next