Advertisement
ಅಹಂಕಾರ ಇಲ್ಲದೆ ಜನಸೇವೆಅಭ್ಯರ್ಥಿ ಪ್ರಸಾದ್‌ರಾಜ್ ಮಾತನಾಡಿ, ತಾನು ಸಭ್ಯತೆಯ ಚೌಕಟ್ಟನ್ನು ಮೀರಿ ಯಾವತ್ತೂ ಜೀವನದಲ್ಲಿ ನಡೆದಿಲ್ಲ, ತನ್ನ ತಂದೆ ಬಿ.ಬಿ. ಕಾಂಚನ್,ತಾಯಿ ಸರಳಾ ಕಾಂಚನ್ ಅವರು ನನ್ನಲ್ಲಿ ಉತ್ತಮ ಸಂಸ್ಕಾರವನ್ನು ಬೆಳೆಸಿದ್ದಾರೆ. ಎಲ್ಲ ವರ್ಗಗಳ ಜತೆ ಒಡನಾಟದಿಂದ ಬೆಳೆಯುತ್ತಾ ಬಂದ ತನಗೆ ಎಲ್ಲರ ನೋವು ಗೊತ್ತಿದೆ. ಹಾಗಾಗಿ ಗೆದ್ದು ಬಂದ ನಂತರ ಒಂದಿಷ್ಟು ಅಧಿಕಾರದ ಅಹಂಕಾರ ತನ್ನ ಬಳಿ ಸುಳಿಯಲೂ ಬಿಡದೆ ಜನ ಸೇವೆ ಮಾಡುವೆನು ಎಂದು ಪ್ರಮಾಣ ನೀಡಿದರು.
ರೂ. 3 ಲಕ್ಷ ಎರಡು ಸಾವಿರ ಕೋಟಿ ಈ ಬಾರಿ ಕರ್ನಾಟಕದ ಬಜೆಟ್, ಅದರಲ್ಲಿ ಸುಮಾರು 50 ಸಾವಿರ ಕೋಟಿ ಈ ಯೋಜನೆಗಳಿಗೆ ಖರ್ಚಾಗುವುದು. ಆರ್ಥಿಕ ತಜ್ಞರ ಬಳಿ ಸಮಾಲೋಚನೆ ಮಾಡಿ ಘೋಷಿಸಿದ ಈ ಯೋಜನೆಗಳು ಎಲ್ಲರಿಗೂ ತಲುಪುತ್ತವೆ. ರೂ. 2000 ತಿಂಗಳಿಗೆ ಮನೆಯ ಓರ್ವ ಮಹಿಳೆಗೆ, 200 ಯುನಿಟ್ ಉಚಿತ ವಿದ್ಯುತ್ ಪ್ರತಿ ಮನೆಗೆ ಪ್ರತಿ ತಿಂಗಳು, ಪದವೀಧರರಿಗೆ ರೂ. 3000 ಮಾಸಿಕ ಪ್ರೋತ್ಸಾಹಧನ, ಡಿಪ್ಲೋಮಾದಾರರಿಗೆ ರೂ. 1500, ಇವೆಲ್ಲಾ ಜನ ಮತ್ತೆ ಮಾರುಕಟ್ಟೆಯಲ್ಲಿ ಚಲಾವಣೆ ಮಾಡುವ ಮೂಲಕ ಸರಕಾರಕ್ಕೆ ತೆರಿಗೆ ಹಾಗೂ ಜಿಡಿಪಿ ವೃದ್ದಿಗೆ ಸಹಾಕಾರಿ ಆಗುತ್ತದೆ. ಬಿಜೆಪಿ ಹೇಳಿದ ಕಪ್ಪು ಹಣ ಇನ್ನೂ ಬಂದಿಲ್ಲ, ಉದ್ಯೋಗ ಕೇಳಿದ ಪದವೀಧರರಿಗೆ ಪಕೋಡಾ ಮಾರಿ ಬದುಕಿ ಎಂದು ಒಮ್ಮೆ ಅಮಿತ್ ಶಾ ಹೇಳಿದ್ದನ್ನು ಜನ ಮರೆತಿಲ್ಲ ಎಂದು ಮಾಧ್ಯಮ ಹಾಗೂ ಸಂವಹನ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೃತ್ ಶೆಣೈ ಹೇಳಿದರು. ಬಿಟ್ಟಿ ಭರವಸೆಗಳ ಪ್ರಣಾಳಿಕೆ
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರ ನಡೆಸಿದಾಗ ನೀಡಿದ ಎಲ್ಲಾ ಭರವಸೆಗಳನ್ನು ಪೊರೈಸಿದ್ದು ಈ ಬಾರಿ ಕೂಡ ಅಧಿಕಾರಕ್ಕೆ ಬಂದರೆ ಜನರಿಗೆ ಉತ್ತಮ ಯೋಜನೆಯ ಗ್ಯಾರಂಟಿಯನ್ನು ನೀಡಿದ್ದು ಅದನ್ನು ಪೂರೈಸಲು ಬದ್ಧವಾಗಿದೆ. ಬಿಜೆಪಿಗರು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಲೇವಡಿ ಮಾಡಿಕೊಂಡು ಬಂದಿದ್ದು ಈಗ ಪೂರೈಸಲು ಸಾಧ್ಯವಾಗದ ಸುಳ್ಳು ಭರವಸೆಗಳ ಬಿಟ್ಟಿ ಭಾಗ್ಯಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿದೆ. ಹಿಂದೆ ನೀಡಿದ್ದ ಭರವಸೆಗಳನ್ನು ಈಡೇರಿಸದವರು ಈಗ ನೀಡಿದ ಭರವಸೆಯನ್ನು ಈಡೇರಿಸುವರು ಎಂದು ಯಾವ ಗ್ಯಾರಂಟಿ? ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಪ್ರಶ್ನಿಸಿದರು.
Related Articles
ಬಿಜೆಪಿ ಘೋಷಿಸಿದ ವರ್ಷದ ಮೂರು ಹಬ್ಬಗಳಿಗೆ ಮೂರು ಸಿಲಿಂಡರ್ ಉಚಿತ ಎಂಬ ಭರವಸೆಗೆ ಮತದಾರರು ಮರುಳು ಆಗಬಾರದು. ಇದನ್ನು ಉತ್ತರ ಪ್ರದೇಶದಲ್ಲಿ ಘೋಷಿಸಿದ ಯೋಗಿಯವರು ಇನ್ನೂ ಜಾರಿಗೆ ತಂದಿಲ್ಲ, ಒಂದು ವೇಳೆ ಜಾರಿಗೆ ತಂದರೂ ಕ್ರಯಕ್ಕೆ ಪಡೆಯುವ ಸಿಲಿಂಡರ್ ಬೆಲೆ ರೂ. 3000 ಮಾಡಿದರೆ ಜನರ ಪರಿಸ್ಥಿತಿಗೆ ದೇವರೇ ಗತಿ ಎಂದು ಕೊಕ್ಕರ್ಣೆ ಕಾಂಗ್ರೆಸ್ ಮುಖಂಡೆ ಡಾ| ಸುನೀತಾ ಶೆಟ್ಟಿ ಹೇಳಿದರು.
Advertisement
ಮುಖಂಡರಾದ ನರಸಿಂಹ ಮೂರ್ತಿ, ದಿನೇಶ್ ಪುತ್ರನ್, ಹರೀಶ್ ಕಿಣಿ, ಕುಶಲ ಶೆಟ್ಟಿ, ದಿವಾಕರ ಕುಂದರ್, ಸದಾಶಿವ ಅಮೀನ್ ಕಟ್ಟೆಗುಡ್ಡೆ, ವಾಮನ ಬಂಗೇರಾ, ಕೀರ್ತಿ ಶೆಟ್ಟಿ ಅಂಬಪಾಡಿ, ಮಹಾಬಲಕುಂದರ್, ವೆರೋನಿಕಾ ಕರ್ನೇಲಿಯೋ, ಮಮತಾ ಶೆಟ್ಟಿ, ಮಹಮ್ಮದ್ ಶೀಶ್, ಗಣೇಶ್ ನೆರ್ಗಿ, ಪ್ರಶಾಂತ್ ಪೂಜಾರಿ, ಸುಕೇಶ್ ಕುಂದರ್, ಜ್ಯೋತಿ ಹೆಬ್ಟಾರ್, ಶ್ರೀನಿವಾಸ ಹೆಬ್ಟಾರ್, ಹಬೀಬ್ ಅಲಿ, ಪ್ರಭಾಕರ ನಾಯಕ್, ಭಾಸ್ಕರ ರಾವ್ ಕಿದಿಯೂರು, ಅಣ್ಣಯ್ಯ ಸೇರಿಗಾರ, ನಾಸೀರ್, ಹಮ್ಮದ್, ರವಿರಾಜ್, ಜಯಶ್ರೀ ಶೇಟ್, ಶಶಿರಾಜ್ ಕುಂದರ್, ಚಂದ್ರಮೋಹನ್, ಯಾದವ ಆಚಾರ್ಯ, ಆರ್. ಕೆ. ರಮೇಶ್ ಪೂಜಾರಿ, ಹರ್ಮಿಸ್ ನೊರೊನ್ಹಾ, ಜನಾರ್ದನ್ ಶೆಣೈ ತೆಂಕಪೇಟೆ, ಸುರೇಂದ್ರ ಆಚಾರ್ಯ, ವಿಲ್ಸನ್ ಸಿಕ್ವೇರಾ, ಸತೀಶ್ ಕುಮಾರ್ ಮಂಚಿ, ಶರತ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.