Advertisement
ದೇಶದಲ್ಲಿ ಕೋವಿಡ್ ರೂಪಾಂತರಿ ತಂದಿಟ್ಟ ಅವಾಂತರದ ಬಗ್ಗೆ ವಿಶ್ವದಾದ್ಯಂತ ಕಳವಳ ವ್ಯಕ್ತವಾಗುತ್ತಿದೆ. ಒಂದೆಡೆ ಸೋಂಕಿನ ನಿಯಂತ್ರಣಕ್ಕೆ ದೇಶದ ಬಹುತೇಕ ರಾಜ್ಯಗಳು ಕಠಿಣ ಕ್ರಮಗಳನ್ನು ಜಾರಿಗೊಳಿಸಿದರೂ ಕೂಡ ಸೋಂಕಿನ ವೇಗ ಕಡಿಮೆಯಾಗುತ್ತಿಲ್ಲ. ಮತ್ತೆ ದೇಶದಾದ್ಯಂತ ಪ್ರಧಾನಿ ನರೇಂದ್ರ ಮೋದಿ ತಮ್ಮ ‘ಕೊನೆಯ ಅಸ್ತ್ರ’ವನ್ನು ಬಳಕೆ ಮಾಡುತ್ತಾರಾ ಎಂಬ ಚಿಂತೆ ಸಾರ್ಚಜನಿಕರಲ್ಲಿ ಕಾಡಿದೆ.
Related Articles
Advertisement
ವಿಶ್ವದ ಅಗ್ರ ಪಂಕ್ತಿಯ ಸಾಂಕ್ರಾಮಿಕ ರೋಗ ತಜ್ಞ ಫೌಸಿ ಈ ರೀತಿಯ ಸಲಹೆ ನೀಡಿದ್ದು, ಭಾರತದಲ್ಲಿ ಹಠಾತ್ ಏರಿಕೆಯಾಗುತ್ತಿರುವ ಕೋವಿಡ್ ರೂಪಾಂತರಿಯ ಅಲೆಯ ಬಗ್ಗೆ ಕಳವಳ ಪಟ್ಟಿದ್ದಾರೆ.
ಅನೇಕ ಜನರು ಸೋಂಕಿಗೆ ಒಳಗಾದಾಗ, ಚಿಕಿತ್ಸೆ ಮಾಡಲು ವೈದ್ಯಕೀಯ ಸೌಲಭ್ಯಗಳ ಕೊರತೆ, ಆಸ್ಪತ್ರೆಯ ಹಾಸಿಗೆಗಳು ಮತ್ತು ಆಮ್ಲಜನಕದ ಕೊರತೆ ಮತ್ತು ಸರಬರಾಜುಗಳ ಕೊರತೆಯನ್ನು ಹೊಂದಿರುವಾಗ ನಿಜವಾಗಿಯೂ ಹತಾಶ ಪರಿಸ್ಥಿತಿಯಾಗುತ್ತದೆ. ಡಾ. ಫೌಸಿ ಬೇಸರ ವ್ಯಕ್ತ ಪಡಿಸಿದ್ದಾರೆ.
ದೇಶದಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯವನ್ನು ಪೂರೈಸುವಲ್ಲಿ ಅಲ್ಲಿನ ಸರ್ಕಾರ ಕಾರ್ಯ ನಿರ್ವಹಿಸಬೇಕು ಇಲ್ಲವಾದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಂಭವವಿದೆ. ಪರಿಸ್ಥಿತಿ ಹತೋಟಿಗೆ ಬಾರದಿದ್ದಲ್ಲಿ ದೇಶದಾದ್ಯಂತ ಇತರೆ ರಾಷ್ಟ್ರಗಳು ಕಳೆದ ವರ್ಷ ಕಠಿಣ ಲಾಕ್ ಡೌನ್ ಮಾಡಿದಂತೆ ಮಾಡಬೇಕು ಎಂದಿದ್ದಾರೆ.
ಇನ್ನು, ಲಸಿಕೆ ಹಾಕುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ, ಇದು ಹಲವಾರು ವಾರಗಳ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ ಅಷ್ಟೇ ಎಂದು ಅವರು ಹೇಳಿದರು.
“ಭಾರತವು ಈಗಾಗಲೇ ಲಸಿಕೆಯ ಅಭಿಯಾನವನ್ನು ಮಾಡುತ್ತಿದೆ ಎಂದು ನನಗೆ ತಿಳಿದಿದೆ, ಆದ್ದರಿಂದ ನೀವು ಲಸಿಕೆ ಅಭಿಯಾನ ಮಾಡುತ್ತಿಲ್ಲ ಎಂದು ನಾನು ನಿಮಗೆ ಹೇಳುತ್ತಿಲ್ಲ.
ಚೀನಾ ಕಳೆದ ವರ್ಷ ಏನು ಮಾಡಿದೆ, ಏಕಾಏಕಿ ಆಸ್ಟ್ರೇಲಿಯಾ ಏನು ಮಾಡಿತು, ನ್ಯೂಜಿಲೆಂಡ್ ಏನು ಮಾಡಿತು, ಇತರ ದೇಶಗಳು ಏನು ಮಾಡಿದ್ದವು ಎಂಬುದು ತುಲನಾತ್ಮಕವಾಗಿ ಸೀಮಿತ ಅವಧಿಗೆ ಸಂಪೂರ್ಣವಾಗಿ ಲಾಕ್ ಮಾಡುವ ನಿರ್ಧಾರಕ್ಕೆ ಬಂದವು. ಆರು ತಿಂಗಳವರೆಗೆ ಲಾಕ್ ಡೌನ್ ಮಾಡಲು ನಿರ್ಧಾರ ತೆಗೆದುಕೊಂಡವು. ನೀವು ಕೆಲವು ವಾರಗಳವರೆಗೆ ಲಾಕ್ ಡೌನ್ ಮಾಡುವುದು ಉತ್ತಮ. ಇಲ್ಲವಾದಲ್ಲಿ ಸೋಂಕಿನ ಹರಡುವಿಕೆ ಮತ್ತಷ್ಟು ಹೆಚ್ಚಳವಾಗುವುದಕ್ಕೆ ಸಾಧ್ಯವಿದೆ. ಈ ಬಗ್ಗೆ ಗಮನ ಹರಿಸುವುದು ಉತ್ತಮ. ಲಾಕ್ ಡೌನ್ ಮಾತ್ರವಲ್ಲ, ಸೋಂಕಿತರ ಚಿಕಿತ್ಸೆಗೆ ಬೇಕಾದ ಎಲ್ಲಾ ತುರ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದರಲ್ಲಿ ಕಾರ್ಯ ನಿರ್ವಹಿಸಬೇಕಾಗಿರುವುದು ಅಗತ್ಯ ಎಂದು ಡಾ. ಫೌಸಿ ಹೇಳಿದರು.
ಇನ್ನು. ತಾತ್ಕಾಲಿಕ ಆಸ್ಪತ್ರೆಗಳನ್ನು ತಕ್ಷಣ ನಿರ್ಮಿಸಲು ಸಶಸ್ತ್ರ ಪಡೆಗಳ ಸಹಾಯವನ್ನು ತೆಗೆದುಕೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ.
ಓದಿ : 2021 ಆರ್ಥಿಕ ವರ್ಷ: ಹೆಚ್ಚು ಕಾರು ಮಾರಾಟವಾದ ಟಾಪ್ ತ್ರಿ ಸಿಟಿಗಳ ಲಿಸ್ಟ್ ನಲ್ಲಿ ಬೆಂಗಳೂರು!?