ಪಿರಿಯಾಪಟ್ಟಣ: ಕರ್ನಾಟಕ ದಲಿತ ನವನಿರ್ಮಾಣ ವೇದಿಕೆ ವತಿಯಿಂದ ನಮ್ಮ ಭೂಮಿ ನಮ್ಮದು ಭೂಮಿ ಹಕ್ಕಿಗಾಗಿ ಭೂ ಹೋರಾಟ ಎಂಬ ಘೋಷವಾಕ್ಯದೊಂದಿಗೆ ಶನಿವಾರ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು.
ಪಟ್ಟಣದ ಬಿ.ಎಂ ರಸ್ತೆ ಸಮೀಪ ಜಮಾಯಿಸಿದ ನೂರಾರು ಕಾರ್ಯಕರ್ತರು ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಗಾಂಧಿವಾದಿ ಮೇಲುಕೋಟೆ ಸಂತೋಷ ಕೌಲಗಿ ಮಾತನಾಡಿ, ರೈತ, ದಲಿತ ವಿರೋಧಿ ಆಡಳಿತ ಹಾಗೂ ಅಧಿಕಾರಿಗಳ ವಿರುದ್ಧ ನಾವು ಸದಾ ಜಾಗೃತರಾಗಿರಬೇಕು ಎಂದರು.
ಇದನ್ನೂ ಓದಿ:- ಗೋವಾ ಚುನಾವಣಾ : ಕಾಂಗ್ರೇಸ್ ನಾಯಕರಿಗೆ ಕೋಟ್ಯಂತರ ರೂ. ಆಮಿಷ : ದಿನೇಶ್ ಗುಂಡೂರಾವ್ ಆರೋಪ
ಮುಖಂಡ ಹರಿಹರ ಆನಂದ ಸ್ವಾಮಿ ಮಾತನಾಡಿ, ಪ್ರಸ್ತುತ ಸಂಘಟನೆಗಳಲ್ಲಿ ಒಗ್ಗಟ್ಟು ಇಲ್ಲದ ಕಾರಣ ಇತರರು ನಮ್ಮ ಮೇಲೆ ದಾಳಿ ಮಾಡಲು ಅನುವು ಮಾಡಿಕೊಟ್ಟಿದ್ದೇವೆ ಎಂದರು. ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿರುವ ಸ್ಥಳಕ್ಕೆ ಶಾಸಕ ಕೆ.ಮಹದೇವ್ ಹಾಗೂ ಮಾಜಿ ಶಾಸಕ ಕೆ ವೆಂಕಟೇಶ್ ಆಗಮಿಸಿ ಪ್ರತಿಭಟನಾನಿರತರಲ್ಲಿ ಸಮಸ್ಯೆ ಆಲಿಸಿದರು.
ಈ ವೇಳೆ ಮುಖಂಡರಾದ ಪ್ರೊ.ಗೋವಿಂದಯ್ಯ, ಕೃಷ್ಣಯ್ಯ, ಡಾ.ಎಸ್.ಶ್ರೀಕಾಂತ್, ಬಂಗವಾದಿ ನಾರಾಯಣಪ್ಪ, ಟಿ.ಈರಯ್ಯ, ಸೀಗೂರು ವಿಜಯ್ ಕುಮಾರ್, ಎಚ್.ಡಿ.ರಮೇಶ್, ಪಿ.ಪಿ.ಮಹದೇವ್, ಜಯಪ್ಪ, ಮಾದೇಶ ಕುಮಾರ, ಧರ್ಮ ಕೊಪ್ಪ, ಪಿ.ಪಿ.ಪುಟ್ಟಯ್ಯ, ಶಿವಣ್ಣ, ಕೆ.ಬಿ.ಮೂರ್ತಿ, ಕರಡಿಪುರ ಕುಮಾರ್, ನೇರಳಕುಪ್ಪೆ ನವೀನ, ಚಿಕ್ಕೇಗೌಡ, ಮಹಮ್ಮದ್ ಮುನಾವರ್, ಉತ್ತೆನಳ್ಳಿ ವೆಂಕಟೇಶ್, ಆರ್.ಡಿ.ಚಂದ್ರು ಇತರರಿದ್ದರು.