Advertisement

ಕಾಯ್ದೆ ತಿದ್ದುಪಡಿಗೆ ರೈತ ಸಂಘ ಆಕ್ರೋಶ

07:12 AM Jun 20, 2020 | Team Udayavani |

ಕೊಪ್ಪಳ: ಭೂ ಸುಧಾರಣೆ ಕಾಯ್ದೆಯಡಿ ಕಲಂ 79ಎ ಮತ್ತು ಬಿ ಯನ್ನು ತೆಗೆದು ಹಾಕುವುದರೊಂದಿಗೆ ಕಾಯ್ದೆಯ ತಿದ್ದುಪಡಿ ಮಾಡಿರುವ ಸರಕಾರದ ವಿರುದ್ಧ ಹೋರಾಟ ರೂಪಿಸಲು ಶುಕ್ರವಾರ ನಗರ ಸಮೀಪದ ಭಾಗ್ಯನಗರದಲ್ಲಿ ರೈತಪರ ಸಂಘಟನೆಗಳ ಸಭೆ ನಡೆಸಿ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿತು.

Advertisement

ಸಭೆಯಲ್ಲಿ ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ವಿದ್ಯುತ್‌ ಖಾಸಗೀಕರಣ ತಿದ್ದುಪಡಿ ಕುರಿತು ಚರ್ಚೆ ನಡೆಸಿ ಸಭೆ ತೀವ್ರವಾದ ವಿರೋಧ ವ್ಯಕ್ತಪಡಿಸಿತು. ಸಭೆಯಲ್ಲಿ ರೈತ ಸಂಘಟನೆಗಳ ಸಮನ್ವಯ ಸಮಿತಿ ರಚಿಸಲಾಯ್ತು. ಸಮಿತಿಯ ಪ್ರಧಾನ ಸಂಚಾಲಕರಾಗಿ ವಿಠಪ್ಪ ಗೋರಂಟಿ ಹಾಗೂ ಅಲ್ಲಮಪ್ರಭು ಬೆಟ್ಟದೂರು ಅವರನ್ನು ಆಯ್ಕೆ ಮಾಡಲಾಯಿತು.

ಸಂಚಾಲಕರಾಗಿ ಜೆ.ಭಾರದ್ವಾಜ, ನಜೀರಸಾಬ ಮೂಲಿಮನಿ, ಡಿ.ಎಚ್‌. ಪೂಜಾರ್‌, ಮದ್ದಾನಯ್ಯ ಹಿರೇಮಠ, ಶಿವಣ್ಣ ಭೀಮನೂರ, ಮರಿಯಪ್ಪ ಸಾಲೋಣಿ, ಫಕೀರರೆಡ್ಡಿ ಹ್ಯಾಟಿ, ಭೀಮಸೇನ ಕಲಕೇರಿ, ತಿಪ್ಪಯ್ಯ ಹಿರೇಮಠ, ಗಣೇಶರೆಡ್ಡಿ ಕನಕಗಿರಿ, ಸುಂದರರಾಜ ಕಾರಟಗಿ, ಶರಣಯ್ಯ ಮುಳ್ಳೂರ ಮಠ, ಬಸವರಾಜ ಶೀಲವಂತರ, ಕೆ.ಬಿ.ಗೋನಾಳ, ಖಾಸೀಂ ಸರದಾರ, ಬಾಳಪ್ಪ ಕೊಡದಾಳ, ಮಹಾಂತೇಶ ಕೊತಬಾಳ, ಹನುಮಂತಪ್ಪ ಎಳೆನೀರು, ಮಮತಾಜಬೇಗಂ, ಪುಷ್ಪಾಮೇಸ್ತಿ ಅವರನ್ನು ಆಯ್ಕೆ ಮಾಡಲಾಯಿತು. ಜೂ.24ರಂದು ಸಭೆ ನಡೆಸಲು ಮತ್ತೆ ನಿರ್ಧರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next