Advertisement

ರೈತರು ಸರಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಲಿ

04:52 PM Jul 16, 2018 | Team Udayavani |

ಅಮೀನಗಡ: ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರಿಗೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು, ರೈತರು ಅದರ ಸದುಪಯೋಗ ಮಾಡಿಕೊಂಡು ಆರ್ಥಿಕವಾಗಿ ಬಲಾಡ್ಯರಾಗಬೇಕು ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು. ಪಟ್ಟಣದ ರೈತ ಸಂಪರ್ಕದ ಕೇಂದ್ರ ಆವರಣದಲ್ಲಿ ರವಿವಾರ ನಡೆದ 2018-19 ಸಾಲಿನ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು ಇಂದಿನ ಆಧುನಿಕ ಯುಗಕ್ಕೆ ಹೊಸ ತಂತ್ರಜ್ಞಾನವನ್ನು ಕೃಷಿಯಲ್ಲಿ ಅಳವಡಿಸಿಕೊಂಡು ಇದರ ಪ್ರಯೋಜನ ಪಡೆಯಬೇಕು. ರೈತರಿಗೆ ಅನುಕೂಲವಾಗವಂತ ಕಾರ್ಯಕ್ರಮವನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

Advertisement

ರಾಜ್ಯ ಸರ್ಕಾರ ಮೊನ್ನೆ ಜಾರಿ ಮಾಡಿರುವ ಸಾಲಮನ್ನಾ ಗೊಂದಲಮಯವಾಗಿದೆ. ಸಕಾಲದಲ್ಲಿ ರೈತರಿಗೆ ನೀರು ಮತ್ತು ವಿದ್ಯುತ್‌ ನೀಡಿದರೆ ಯಾವ ರೈತರು ಕೂಡಾ ಸಾಲಮನ್ನಾ ಮಾಡಿ ಎಂದು ಬೇಡಿಕೆ ಇಡುತ್ತಿದ್ದಿಲ್ಲಾ ಹಾಗೂ ಸಾಲಮನ್ನಾ ಮಾಡುವ ಪ್ರಸ್ತಾಪವೇ ನಿರ್ಮಾಣ ಆಗುತ್ತಿದ್ದಿಲ್ಲ. ಅದು ಸರಿಯಾಗಿ ನೀಡಿಲ್ಲ. ಇದರಿಂದ ಸಮಸ್ಯೆ ಉದ್ಬವಿಸಿದೆ. ಇಂತಹ ಸಮಸ್ಯೆಯಲ್ಲೂ ಕೂಡಾ ಕೃಷಿ ನಡಿತಾಯಿದೆ. ಆದರೆ ಈ ಸಮಸ್ಯೆಗಳಿಗೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ರೈತರಿಗೆ ಎರಡು ಅತಿದೊಡ್ಡ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಮುಖ್ಯವಾಗಿ ಫಸಲು ವಿಮಾ ಯೋಜನೆ ಅದರಲ್ಲಿ ಜಿಲ್ಲೆಗೆ 122 ಕೋಟಿ ಬಂದಿದೆ. ಇದರಲ್ಲಿ 78 ಕೋಟಿ ಬಿಡುಗಡೆಯಾಗಿದೆ. ಇನ್ನು ಎರಡನೇ ಕಂತು ಬಿಡುಗಡೆಯಾಗುವ ಹಂತದಲ್ಲಿದೆ ಫಸಲ್‌ ಬಿಮಾ ಯೋಜನೆಯಿಂದ ರೈತರು ಆರ್ಥಿಕವಾಗಿ ಬೆಳವಣಿಗೆಯಾಗಲು ಅನುಕೂಲವಾಗಿದೆ ಎಂದರು.

ಕೇಂದ್ರ ಸರ್ಕಾರ ರೈತರ ಸುಮಾರು ಧಾನ್ಯಗಳ ಬೆಂಬಲ ಬೆಲೆ ಹೆಚ್ಚು ಮಾಡಿದೆ. ಅದು 200 ರೂ.ನಿಂದ 1800 ರೂ.ವರೆಗೆ ಹೆಚ್ಚಿಸಿದೆ. ಅದರಲ್ಲಿ ಕೆಲವು ಧಾನ್ಯಗಳ ಬೆಲೆ ದ್ವಿಗುಣ ಆಗಿದೆ. ಒಟ್ಟಾರೆ 14 ರಿಂದ 18 ಬೆಳೆಗಳ ನಿಗದಿತ ಬೆಂಬಲ ಬೆಲೆ ನಿಗದಿ ಮಾಡಿದ. ಆ ರೀತಿ ಬೆಂಬಲ ಪ್ರಕಾರ ರೈತರ ಬೆಳಗಳನ್ನು ಖರೀದಿ ಮಾಡಿ ಇಟ್ಟರೆ. ಈ ಫಸಲ ವಿಮಾ ಯೋಜನೆ ಸರಿಯಾಗಿ ರೈತರಿಗೆ ಮುಟ್ಟಿದರೆ ಅದು ರೈತರಿಗೆ ಅನುಕೂಲವಾಗಬಹುದು ಎಂಬ ಉದ್ದೇಶದಿಂದ ಇಡೀ ದೇಶದಲ್ಲಿ ಕೇಂದ್ರ ಸರ್ಕಾರ ಗೋದಾಮುಗಳನ್ನು ಹೆಚ್ಚು ಮಾಡುವುದಕ್ಕೆ ರೈತರ ಬೆಳೆಗಳನ್ನು ಖರೀದಿ ಮಾಡಲಾಗುತ್ತಿದೆ. ಆದರಿಂದ ಇಂತಹ ಸೌಲಭ್ಯಗಳನ್ನು ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಕೃಷಿ ಜಂಟಿ ನಿರ್ದೇಶಕರಾದ ರಮೇಶ ಕುಮಾರ ಮಾತನಾಡಿದರು. ತಾಪಂ ಅಧ್ಯಕ್ಷ ಅರವಿಂದ ಈಟಿ, ಕೆಎಂಎಫ್‌ ಅಧ್ಯಕ್ಷ ಸಂಗಣ್ಣ ಹಂಡಿ, ಹುನಗುಂದ ಎಪಿಎಂಸಿ ಅಧ್ಯಕ್ಷ ಶಿವಲಿಂಗಪ್ಪ ನಾಲತ್ತವಾಡ, ತಾಪಂ ಸದಸ್ಯ ಮಂಜುನಾಥ ಗೌಡರ, ಹೊಳಿಯಪ್ಪಗೌಡ ಗೌಡ್ರ, ಎಪಿಎಂಸಿ ನಿರ್ದೇಶಕರಾದ ಮಾನಪ್ಪ ಚಿಗರನ್ನವರ, ಆಶಾದೇವಿ ಚಾಪಿ, ಪಪಂ ಸದಸ್ಯ ವಿಜಯಕುಮಾರ ಕನ್ನೂರ, ಗುರುನಾಥ ಚಳ್ಳಮರದ, ಶೇಖಪ್ಪ ಲಮಾಣಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next