Advertisement

ರೈತರು ತಮ್ಮ ಆದಾಯ ದ್ವಿಗುಣದತ್ತ ಆಲೋಚನೆ ಮಾಡಬೇಕು: ಕೃಷಿ ಸಚಿವ ಬಿ.ಸಿ.ಪಾಟೀಲ್‌

06:35 PM May 14, 2022 | Team Udayavani |

ಬೆಂಗಳೂರು: ರೈತರು ಕೇವಲ ಕೃಷಿಯಲ್ಲಿ ತೊಡಗಿಕೊಂಡರೆ ಸಾಲದು ಬದಲಾಗಿ ತಮ್ಮ ಆದಾಯ ದ್ವಿಗುಣದತ್ತ ಆಲೋಚನೆ ಮಾಡಬೇಕಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದರು.

Advertisement

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕೃಷಿ ಮಾರಾಟ ಸಹಕಾರ ಮತ್ತು ಮತ್ತು ವ್ಯವಹಾರ ನಿರ್ವಾಹಣೆ ವಿಭಾಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕೃಷಿ ಉದ್ಯಮ ನಾವೀನ್ಯತೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಕೇವಲ ಕೃಷಿಯಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವತ್ತ ಗಮನಹರಿಸಿದರೆ ಸಾಲದು.ಇದರ ಜತೆಗೆ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಿ ಹೆಚ್ಚಿನ ಆದಾಯ ಗಳಿಸುವತ್ತ ಗಮನವಹಿಸಬೇಕು ಎಂದು ಮನವಿ ಮಾಡಿದರು. ಮುಖ್ಯಮಂತ್ರಿಗಳ ಕನಸಿನ ಕೂಸಾದ ಮಾಧ್ಯಮಿಕ ಕೃಷಿಯತ್ತ ಯೋಚಿಸಿ ಆಲೋಚಿಸಿ ಮುಂದುವರೆಯುವುದು ಅತ್ಯಂತ ಅವಶ್ಯಕ. ಇದರಿಂದಾಗಿ ಮಧ್ಯವರ್ತಿಗಳ ಆವಳಿ ತಪ್ಪಿಸಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಗ್ಗೆಯಿಡಲು ಸಾದ್ಯವಾಗುತ್ತದೆ ಎಂದು ಹೇಳಿದರು.

ಬೆಂಗಳೂರು ಕೃಷಿ ವಿವಿಯ ಕುಲಪತಿ ಡಾ.ಎಸ್‌.ರಾಜೇಂದ್ರ ಪ್ರಸಾದ್‌, ಕೃಷಿ ಪದವಿಧರರು ಸರ್ಕಾರಿ ಉದ್ಯೋಗಕ್ಕಾಗಿ ಕಾಯದೆ ಸ್ವಯಂ ಉದ್ಯೋಗಿಗಳಾಗಲು ದೃಢ ಹೆಜ್ಜೆಯಿಸಬೇಕು ಎಂದು ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಸ್ವಯಂ ಉದ್ಯೋಗಿಗಳಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿವೆ. ಸಾಲದ ಸೌಕರ್ಯ ಮತ್ತು ಸಹಾಯ ಧನ ಸೌಲಭ್ಯವನ್ನು ನೀಡಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಅಗ್ರಿಕ್ಲಿನಿಕ್‌ ಮತ್ತು ಅಗ್ರಿಬಿಸಿನೆಸ್‌ ಕೋರ್ಸ್‌ಗೆ ನೊಂದಣಿ ಮಾಡಿಕೊಂಡು ಕೃಷಿಯಲ್ಲಿ ನೂತನ ಆವಿಷ್ಕಾರ ಮಾಡುವಂತೆ ಮನವಿ ಮಾಡಿದರು.

ಇದೇ ವೇಳೆ ಅಂತಿಮ ವರ್ಷದ ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯ ಮತ್ತು ವ್ಯವಹಾರ ಪ್ರೌಡಿಮೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗಿತ್ತು. ಕೃಷಿ ಮಾರುಕಟ್ಟೆ, ಅಗ್ರಿಟೆಕ್‌, ಡಿಜಿಟಲ್‌ ಮಾರ್ಕೆಟಿಂಗ್‌ನಲ್ಲಿ ನೂತನ ಎಂಟು ಅವಿಷ್ಕಾರಗಳನ್ನು ಪ್ರದರ್ಶಿಸಲಾಯಿತು. ಕುಲಸಚಿವ ಡಾ.ಬಸವೇಗೌಡ,ಡೀನ್‌ (ಕೃಷಿ)ಡಾ.ಎನ್‌.ಬಿ. ಪ್ರಕಾಶ್‌, ಪ್ರಾಧ್ಯಾಪಕ , ಡಾ. ಎಂ.ಎಸ್‌.ಗಣಪತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next