Advertisement

ಭೂಮಿ ಉಳಿಸಿಕೊಳ್ಳಲು ಅನ್ನದಾತರ ಪ್ರತಿಭಟನೆ

04:38 PM Nov 18, 2020 | Suhan S |

ಮಧುಗಿರಿ: ದಶಕಗಳಿಂದಲೂ ಉಳುಮೆ ಮಾಡುತ್ತಿದ್ದ ರೈತರ ಭೂಮಿಯನ್ನು ಕಿತ್ತುಕೊಂಡು ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೆ ನೀಡಿದ ಕೊರಟಗೆರೆ ತಾಲೂಕು ಆಡಳಿತವನ್ನು ರೈತ ಸಂಘ ಅಣಕು ಹರಾಜು ಪ್ರದರ್ಶಿಸಿ ಆಕ್ರೋಶವನ್ನು ಹೊರಹಾಕಿತು.

Advertisement

ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಯ ಮುಂಭಾಗ ಜಿಲ್ಲಾ ರೈತಸಂಘ ಹಾಗೂ ಹಸಿರುಸೇನೆಯ ಅಧ್ಯಕ್ಷ ಆನಂದ ಪಟೇಲ್‌ ನೇತೃತ್ವದಲ್ಲಿ ರೈತರು ಪ್ರತಿಭಟನೆನಡೆಸಿ ತಾಲೂಕು ಆಡಳಿತ ಹಾಗೂ ತಹಶೀಲ್ದಾರ್‌ ವಿರುದ್ಧ ಧಿಕ್ಕಾರ ಕೂಗಿದರು. ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಆನಂದಪಟೇಲ್‌, ಬೆಂಗಳೂರಿನಲ್ಲಿರುವ ರಿಯಲ್‌ ಎಸ್ಟೇಟ್‌ ಜನರಿಗೆ ಕೊರಟಗೆರೆ ರೈತರ ಸಾಗುವಳಿ ಭೂಮಿಯನ್ನು ಹಂಚುವ ಅಧಿಕಾರವನ್ನು ತಹಶೀಲ್ದಾರ್‌ ಗೋವಿಂದರಾಜುಗೆ ಕೊಟ್ಟವರಾರು ಎಂದು ಪ್ರಶ್ನಿಸಿದರು.

ಕೊರಟಗೆರೆಯ ಅಕ್ಕಾಜಿಹಳ್ಳಿ ಗ್ರಾಮದ ರೈತರ ಭೂಮಿಯನ್ನು 35-40 ವರ್ಷದಿಂದ ಸಾಗುವಳಿ ಮಾಡಿಕೊಂಡು ಬಂದಿದ್ದು, ಇದಕ್ಕೆ ಪೂರಕ ದಾಖಲೆಯನ್ನೂ ಹೊಂದಿದ್ದಾರೆ. ಸರ್ವೆ ಇಲಾಖೆ 2003 ರಲ್ಲಿ ಜಮೀನು ಗುರುತಿಸಿ ಕೊಟ್ಟಿದೆ. ಸರ್ಕಾರದ ಆದೇಶದಂತೆ ಎಲ್ಲ ಸಾಗುವಳಿಗೂ ಟಿಟಿ ಯನ್ನು ಕಟ್ಟಿದ್ದು, ಕೊರಟಗೆರೆ ತಹಶೀಲ್ದಾರರುಈಭೂಮಿಗೆ ಇದುವರೆ ವಿಗೂಸಾಗುವಳಿಚೀಟಿನೀಡಿಲ್ಲ.ಇದಕ್ಕೆವಿರುದ್ಧವಾಗಿ ಬೆಂಗಳೂರ ಒಂದೇ ಕುಟುಂಬದ ಹಲವು ಮಂದಿಗೆ 2017 ರಲ್ಲಿ ಮಂಜೂರು ಮಾಡಿ ಸಾಗುವಳಿ ಚೀಟಿ ನೀಡಿದ್ದಾರೆ. ಇದು ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಕಸಬಾ,ಕೋಳಾಲ, ಹಾಗೂ ಹೊಳವನಹಳ್ಳಿ ಹೋಬಳಿಯಲ್ಲಿ 40 ವರ್ಷದಿಂದ ಕೃಷಿ ಮಾಡುವ ರೈತರಿಗೂ ಸಾಗುವಳಿ ಚೀಟಿ ನೀಡದೆ ವಂಚಿಸಿದ್ದಾರೆ. ಶೀಘ್ರವಾಗಿ ಇಲ್ಲಿನ ತಹಶೀಲ್ದಾರ್‌ ಮೇಲೆ ಸೂಕ್ತ ಕಾನೂನು ಕ್ರಮಕೈಗೊಂಡು ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು. ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್‌ 1 ತಹಶೀಲ್ದಾರ್‌ವರದರಾಜುರವಿಗೆ ಒತ್ತಾಯ ಪೂರ್ವಕ ಮನವಿಯನ್ನು ಸಲ್ಲಿಸಲಾಯಿತು.

ಜಿಲ್ಲಾ ಕಾರ್ಯದರ್ಶಿ ರುದ್ರೇಶ್‌ಗೌಡ, ಕೊರಟಗೆರೆ ತಾಲೂಕು ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷ ಪುಟ್ಟರಾಜು, ಕಾರ್ಯದರ್ಶಿ ವೆಂಕಟೇಶ್‌, ಪ್ರಸನ್ನ ಕುಮಾರ್‌,ಮಂಜುನಾಥ್‌, ಲೋಕಣ್ಣಇತರರಿದ್ದರು.

Advertisement

ಬೆಂಗಳೂರಿನ ರಿಯಲ್‌ ಎಸ್ಟೇಟ್‌ಮಂದಿಗಾಗಿ ರೈತ ಬೆಳೆದ ಜೋಳದ ಬೆಳೆಯನ್ನು ಜೆಸಿಬಿಯಿಂದನಾಶಪಡಿಸಿ ರಾತ್ರೋರಾತ್ರಿ ಮನೆ ನಿರ್ಮಿಸಲು ಮುಂದಾದಕೊರಟಗೆರೆ ಆಡಳಿತಕ್ಕೆ ನೈತಿಕತೆಯಿಲ್ಲ. ನ.19 ರಂದುಕೊರಟಗೆರೆಗೆ ಉಪವಿಭಾಗಾಧಿಕಾರಿಭೇಟಿ ನೀಡುವುದಾಗಿ ತಿಳಿಸಿದ್ದು, ಅಂದು ರೈತರ ನೋವಿಗೆ ಪರಿಹಾರಕೊಡಬೇಕು. ಇಲ್ಲವಾದರೆ ಮುಂದಿನ ಹೋರಾಟ ಉಗ್ರ ಸ್ವರೂಪ ತಾಳುವುದು. ಆನಂದ ಪಟೇಲ್‌, ರೈತ ಸಂಘದ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next