ಗದಗ (ಮುಳಗುಂದ); ಜಿಲ್ಲಾ ಪಂಚಾಯತಿ ಅಡಿಯಲ್ಲಿ ಎನ್ ಆರ್ ಎಲ್ ಎಂ ಸಂಜೀವಿನಿ ಒಕ್ಕೂಟದಿಂದ ರೈತರ ಕಡಲೆ ಮಾರಾಟದ ಬಾಕಿ ಮೊತ್ತ 6.50 ಕೋಟಿ ರೂಗಳ ಹಣವನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಸಮೀಪದ ಅಂತೂರ ಬೆಂತೂರ ಗ್ರಾಮದಿಂದ ಪಾದಯಾತ್ರೆ ಮೂಲಕ ಅಖಿಲ ಕರ್ನಾಟಕದ ಭ್ರಷ್ಟಾಚಾರ ನಿರ್ಮೂಲನೆ ರೈತ ಸಂಘ, ಮಹಿಳಾ ರೈತ ಸಂಘಟನೆ ಸಹಯೋಗದಲ್ಲಿ ಪಾದಯಾತ್ರೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿಗೆ ಅಂತೂರ ಬೆಂತೂರ ಮಠದಲ್ಲಿ ಜ. ರಾಚೋಟೇಶ್ವರ ಶಿವಾಚಾರ್ಯ ಶ್ರೀಗಳು ರೈತರ ಪರವಾಗಿ ಪಾದಯಾತ್ರೆ ಕೈಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಮಹಿಳಾ ಸಂಜೀವಿನಿ ಯೋಜನೆಯಡಿ ಕಡಲೆ ಖರೀದಿ ಮಾಡಿ ವರ್ಷಗಳೆ ಕಳೆದರು ಈವರೆಗೂ ರೈತರ ಬಾಕಿ ಹಣ ಬಿಡುಗಡೆಗೊಳಿಸಿಲ್ಲ.
ಈ ಕುರಿತು ಕೃಷಿ ಸಚಿವರನ್ನು ಸಂಪರ್ಕಿಸಿದರೆ ಕೇಂದ್ರ ಸರ್ಕಾರದ ಯೋಜನೆ ಎಂದು ಹೇಳುತ್ತಿದ್ದು ರೈತರ ಹಣ ಬಿಡುಗಡೆಯಾಗುವವರೆಗೂ ಗದಗ ಜಿಲ್ಲಾಧಿಕಾರಿ ಕಛೇರಿ ಎದುರು ಉಪವಾಸ ಸತ್ಯಾಗೃಹ ಕೈಗೊಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಚಿದಾನಂದ ಹೆಬ್ಬಾಳ, ಬುದೇಶ್ ಪಲ್ಲೇದ ವೆಂಕಟೇಶ್ ಆಲೂರ, ರಮೇಶ್ ಬಂಕದ, ಬಸಪ್ಪ ರಾಯನಾಯ್ಕರ,, ಬುದಪ್ಪ ಮುಳ್ಳಾಳ, ಶೋಭಾ ಅಂಗಡಿ, ರತ್ನಾ ಅಂಗಡಿ. ವಿಜಯಲಕ್ಷ್ಮಿ ಅಂಗಡಿ. ಸಾವಿತ್ರಿ ಕುರುಬರ, ಶಕುಂತಲಾ ಕರಕನಗೌಡ್ರ, ಮೀನಾಕ್ಷಿ ಹೈಗರ. ಯಲ್ಲಮ್ಮ ಅಂಗಡಿ ಮತ್ತಿತರರು ಇದ್ದರು.
ಇದನ್ನೂ ಓದಿ: Surathkal: ಈಜಾಡಲು ತೆರಳಿದ್ದ ನಾಲ್ವರ ಪೈಕಿ ಮೂವರು ಸಮುದ್ರಪಾಲು