Advertisement

ಮುಂಗಾರು ಚಟುವಟಿಕೆಯಲ್ಲಿ ರೈತರು ತಲ್ಲೀನ; ಉತ್ತಮ ಬೆಳೆ ನಿರೀಕ್ಷೆಯಲ್ಲಿ ಅನ್ನದಾತರು

05:50 PM Aug 25, 2021 | Team Udayavani |

ಆಲೂರು: ತಾಲೂಕಿನಲ್ಲಿ ಮಳೆ ಪ್ರಮಾಣ ವಾಡಿಕೆಗಿಂತ 113 ಮಿ.ಮೀ. ಮಳೆ ಜಾಸ್ತಿಯಾಗಿದ್ದು, ಮುಂಗಾರು ಕೃಷಿ ಚಟುವಟಿಕೆ ಉತ್ತಮವಾಗಿದೆ. ರೈತರು ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದಾರೆ.

Advertisement

ತಾಲೂಕಿನ ಕಸಬಾ, ಕೆಂಚಮ್ಮನ ಹೊಸ ಕೋಟೆ, ಕುಂದೂರು ಮತ್ತು ಪಾಳ್ಯ ಹೋಬಳಿಗಳಲ್ಲಿ ಭತ್ತಿ ಬೆಳೆಯುವುದು ಸಾಮಾನ್ಯವಾಗಿದೆ.
ಇದೂವರೆಗೂ ಸುರಿದ ಮಳೆಯಿಂದ ಶುಂಠಿ, ಆಲೂಗಡ್ಡೆ, ಜೋಳ, ರಾಗಿ ಬೆಳೆಗೆ ಆಡುಮಳೆಯಾದ ಪರಿಣಾಮ ಅನುಕೂಲವಾಗಿದೆ. ಉತ್ತಮ ಇಳುವರಿ ಸಿಗುವುದೆಂದು ರೈತರುಭರವಸೆಯಲ್ಲಿದ್ದಾರೆ.ಕಸಬಾಹೋಬಳಿ ಹೊರತುಪಡಿಸಿದರೆ,ಮೂರುಹೋಬಳಿಗಳಲ್ಲಿ ಕಾಡಾನೆ ಹಾವಳಿ ಇರುವುದರಿಂದ, ಆಕಸ್ಮಾತ್‌ ಲಾಕ್‌ಡೌನ್‌ಪರಿಣಾಮ ಎದುರಾದರೆ ರೈತರು ಸಂಕಷ್ಟಕ್ಕೀಡಾಗುತ್ತಾರೆ.

ಸಾಮಾನ್ಯವಾಗಿ ಮೇ 15ರ ವೇಳೆಗೆ ಜೋಳ, ಆಲೂಗಡ್ಡೆ, ಶುಂಠಿ ಬಿತ್ತನೆ ಮಾಡಲಾಗಿತ್ತು. ಜುಲೈ ಅಂತ್ಯದ ವೇಳೆಗೆ ಭತ್ತ ನಾಟಿ ಕಾರ್ಯ ಮುಗಿದಿದೆ. ಕೊಳವೆ ಬಾವಿ ಹೊಂದಿರುವ ರೈತರು ಗದ್ದೆಗಳಿಗೆ 15 ದಿನ ಮುಂಚಿತವಾಗಿ ನಾಟಿ ಮಾಡಿದ್ದಾರೆ ಮತ್ತು ಶುಂಠಿಗೆ ನೀರು ಸಿಂಪಡಿಸದ್ದಾರೆ. ತುಂತುರು ಮಳೆಯಾಗುತ್ತಿರುವುದರಿಂದ ಜೋಳ, ಭತ್ತದ ಗದ್ದೆಗೆ ಅನುಕೂಲವಾಗಿದೆ.

ಶುಂಠಿಗೆ ಕೊಳೆ ರೋಗ: ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ಶುಂಠಿಗೆ ಕೊಳೆ ರೋಗ ಎಡತಾಕಿದೆ. ಕೋವಿಡ್‌ ಸೊಂಕಿನ ಹಿನ್ನೆಲೆಯಲ್ಲಿ ಪಟ್ಟಣ ಅರಸಿ ಹೋಗಿದ್ದ ರೈತ ಕಾರ್ಮಿಕರು, ಲಾಕ್‌ಡೌನ್‌ ಪರಿಣಾಮ ಶೇ. 90 ಜನ ತಮ್ಮ ಊರುಗಳಿಗೆ ವಾಪಾಸು ಬಂದು ಕೃಷಿ ಚಟುವಟಿಕೆ ಯಲ್ಲಿ ತೊಡಗಿಕೊಂಡರು. ರೈತರು ಯಾಂತ್ರಿಕತೆ ಮಾರು ಹೋಗಿದ್ದಾರೆ.

ಇದನ್ನೂ ಓದಿ:ಮೋದಿ ಸರ್ಕಾರದಿಂದ ಭಯೋತ್ಪಾದನೆ ನಿಗ್ರಹ : ದುಷ್ಯಂತ್‌ ಕುಮಾರ್‌ ಗೌತಮ್

Advertisement

4500 ಹೆಕ್ಟೇರ್‌ಭತ್ತ, 6 ಸಾವಿರ ಹೆಕ್ಟೇರ್‌ಜೋಳ, 30ಹೆಕ್ಟೇರ್‌ ರಾಗಿ ಬೆಳೆಯಲಾಗಿದೆ.ಆಲೂಗಡ್ಡೆ ಕಟಾವಾದ ನಂತರ ಎರಡನೆಬೆಳೆ ರಾಗಿ
ಬೆಳೆಯಲು ತಯಾರಿ ನಡೆಯುತ್ತಿದೆ. ಇಲಾಖೆಯಿಂದ ಸಬ್ಸಿಡಿರೂಪದಲ್ಲಿಬಿತ್ತನೆ ಬೀಜ, ಗೊಬ್ಬರವನ್ನು ನೀಡಲಾಗಿದೆ.
-ಎಂ.ಡಿ. ಮನು, ಕೃಷಿ ಇಲಾಖೆ
ಸಹಾಯಕ ನಿರ್ದೇಶಕ

ಕೆಲವೆಡೆ ಅಗತ್ಯವಿರುವ ಪ್ರದೇಶಗಳಲ್ಲಿ ಭತ್ತ ನಾಟಿ ಮಾಡಲುಯಂತ್ರ ಬಳಸಲಾಗಿದೆ. ಆದರೆ ಶುಂಠಿ, ಆಲೂಗಡ್ಡೆ, ಜೋಳ ಬಿತ್ತನೆಕಾರ್ಯಕ್ಕೆ
ಕಾರ್ಮಿಕರನ್ನು ಅವಲಂಬಿಸಬೇಕಾಗಿದೆ. ಶುಂಠಿ ಬೆಳೆಗೆ ಇಡಿ ರಾಷ್ಟ್ರದಲ್ಲಿ ಬೇಡಿಕೆ ಇದೆ.ಕೋಳಿಗೆ ಆಹಾರವಾಗಿ ಜೋಳವನ್ನು ಬಳಸಿಕೊಳ್ಳಲಾಗುತ್ತದೆ. ರೈತರು ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದಾರೆ.
-ಯಾಲಕ್ಕೀಗೌಡ, ಧರ್ಮಪುರಿ ಗ್ರಾಮದ ರೈತ

300 ಹೆಕ್ಟೇರ್‌ ಪ್ರದೇಶದಲ್ಲಿ ಶುಂಠಿ, 57 ಹೆಕ್ಟೇರ್‌ ಆಲೂಗಡ್ಡೆ,ಕೆ. ಹೊಸಕೋಟೆ, ಪಾಳ್ಯ ಹೋಬಳಿಗಳಲ್ಲಿ ಕಾಳುಮೆಣಸು, ಅಡಿಕೆ ಬೆಳೆಯನ್ನು ಬೆಳೆಯಲು ರೈತರು ಆಕರ್ಷಿತರಾಗಿದ್ದಾರೆ. ಸಕಾಲದಲ್ಲಿ ಮಳೆಯೂ ಆಗಿದೆ.
-ಕೇಶವ್‌, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next