Advertisement

ಬೇಡಿಕೆ ಈಡೇರಿಕೆಗೆ ರೈತರ ಒತ್ತಾಯ

05:03 PM Nov 21, 2021 | Shwetha M |

ಸಿಂದಗಿ: ಕಬ್ಬಿನ ಬೆಲೆ ನಿಗದಿಗೊಳಿಸಲು ಸಕ್ಕರೆ ಕಾರ್ಖಾನೆಗಳ ಮಾಲಿಕರು, ಜಿಲ್ಲಾಡಳಿತ, ಸಕ್ಕರೆ ಮಂತ್ರಾಲಯ ಸಭೆ ಕರೆಯುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕ ಹಾಗೂ ಸಿಂದಗಿ ಘಟಕದ ಪದಾ ಧಿಕಾರಿಗಳು ತಹಶೀಲ್ದಾರ್‌ ಸಂಜೀವಕುಮಾರ ದಾಸರಗೆ ಮನವಿ ಸಲ್ಲಿಸಿದರು.

Advertisement

ಪ್ರತಿ ಟನ್‌ ಕಬ್ಬಿಗೆ 3 ಸಾವಿರ ರೂ. ನಿಗದಿಗೊಳಿಸಬೇಕು. ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಅಲ್ಲಿನ ರೈತರಿಗೆ ಪ್ರತಿ ಟನ್‌ಗೆ 2800 ರೂ. ಕಟಾವು ಹೊರತು ಪಡಿಸಿ 2800 ರೂ. ನೀಡಿದ್ದಾರೆ. ಆದರೆ ವಿಜಯಪುರ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು 2300 ರೂ. ಕೊಟ್ಟು ಕೈ ತೊಳೆದುಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ 10 ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‌ಗೆ 500 ರೂ. ರೈತರ ಖಾತೆಗೆ ಕೊಡಲು ಕೂಡಲೇ ಸರಕಾರ ಒತ್ತಾಯಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ಜಿಲ್ಲೆಯಲ್ಲಿ ಸರಿಯಾಗಿ ಮಳೆಯಾಗದ ಕಾರಣ ಕಬ್ಬು, ತೊಗರಿಗೆ ಗೊನ್ನಿ ಹುಳುಗಳು ಹತ್ತಿ, ಕಬ್ಬು, ತೊಗರಿ, ಸೂರ್ಯಕಾಂತಿ, ಹೆಸರು ಹಾಳಾಗಿ ರೈತರು ಬಹಳ ತೊಂದರೆಗಿಡಾಗಿದ್ದಾರೆ. ಕೂಡಲೇ ಸರಕಾರ ಸಮೀಕ್ಷೆ ಮಾಡಿ ರೈತರಿಗೆ ಪರಿಹಾರ ನೀಡಬೇಕು. ಪ್ರತಿ ಎಕರೆಗೆ 8 ಸಾವಿರದಿಂದ 10 ಸಾವಿರ ರೂ. ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ರಂಜುಣಗಿ, ತಾಲೂಕಾಧ್ಯಕ್ಷ ಶಿವಶರಣಪ್ಪಗೌಡ ಬಿರಾದಾರ, ಉಪಾಧ್ಯಕ್ಷ ಚನ್ನಪಗೌಡ ಪಾಟೀಲ, ಕಾರ್ಯದರ್ಶಿ ಅಶೋಕ ಅಲ್ಲಾಪುರ, ಬಾಬು ಕೂಡಿ, ಅಮೋಘಿ ಹರವಾಳ, ಲಕ್ಷ್ಮಣ ಹೂಗಾರ, ಹನುಮಂತ ಗೊಬ್ಬೂರ, ಕುಲ್ಲಣ್ಣ ಹರವಾಳ, ರವಿ ಹಿರೇಕುರುಬರ, ಸಿದ್ದು ಉಪ್ಪಾರ, ಭಾಸ್ಕರ ಪೂಜಾರಿ, ಗೊಲ್ಲಾಳಪ್ಪ ಚೌಧರಿ ಸೇರಿದಂತೆ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next