ಕೊರಟಗೆರೆ: ಮಳೆ ಹೆಚ್ಚಾಗಿ ರಾಗಿ ಫಸಲು ಉತ್ತಮವಾಗಿ ಬಂದರೂ ಮೇವು ಖರೀದಿಯಿಲ್ಲದೇ ರೈತರು ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನಲ್ಲಿ ಮಳೆ ಆಶ್ರಿತ ಹಾಗೂ ನೀರಾವರಿಯ ಸುಮಾರು 8418 ಹೆಕ್ಟೇರ್‌ನಲ್ಲಿ ರಾಗಿ ಬೆಳೆಯಲಾಗಿದ್ದು ಕೆಲವೆಡೆ ತೆನೆಯನ್ನು ಕಟಾವು ಮಾಡಲಾಗಿದೆ. ಆದರೆ, ತೆನೆ ಕಟಾವು ಮಾಡಿದ ಬಳಿಕ ಹುಲ್ಲು ಹೊಲದಲ್ಲೇ ಕೊಳೆಯುತ್ತಿದೆ. ಮಧ್ಯ ವರ್ತಿಗಳು ಎಕರೆ ಹುಲ್ಲನ್ನು 2-3 ಸಾವಿರಕ್ಕೆ ಕೇಳುತ್ತಿದ್ದು ರೈತರಿಗೆ ರಾಗಿ ಸಿಕ್ಕರೂ ಹುಲ್ಲಿನ ನಷ್ಟ ಅನುಭವಿಸಬೇಕಾಗಿದೆ. ಹಾಗೆಯೇ ಕೆಲವೊಂದು ಕಡೆ ರೈತರು ರಾಗಿ ಹುಲ್ಲನ್ನು ಮಾರಾಟ ಮಾಡಲು ಆಗದೇ ಕಟಾವು ಮಾಡದೇ ಹೊಲದಲಗಲೇ ಬಿಟ್ಟಿದ್ದಾರೆ. ಇದರಿಂದಾಗಿ ಇಲಿ-ಹೆಗ್ಗಣ, ಹಾವುಗಳ ಕಾಟ ಹೆಚ್ಚಾಗುವ ಆತಂಕವಿದೆ.ಹೀಗಾಗಿರೈತರು ಕಡಿಮೆಬೆಲೆಗೆರಾಗಿಮೇವನ್ನು ಮಾರಾಟ ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ.
ಕಳೆದ ಬಾರಿ 8-12 ಸಾವಿರ ಇತ್ತು: ಪ್ರಸಕ್ತ ವರ್ಷಕ್ಕೆ ಹೋಲಿಸಿದರೆ ಈ ಬಾರಿ ರಾಗಿ ಹುಲ್ಲಿನಿಂದ ನಷ್ಟ ಅನುಭವಿಸುವುದು ಗ್ಯಾರಂಟಿ. ಅಂದರೆ, ಕಳೆದ ವರ್ಷ 8ರಿಂದ 12 ಸಾವಿರಕ್ಕೆ ಮಾರಾಟವಾಗುತ್ತಿದ್ದ ರಾಗಿ ಹುಲ್ಲು ಈ ಬಾರಿ 2 ಸಾವಿರಕ್ಕೆ ಕೇಳುತ್ತಿದ್ದಾರೆ.
ಮಳೆಯಾಗಿದ್ದೇ ಕಾರಣ: ಸಮರ್ಪಕವಾಗಿ ಮಳೆ ಯಾಗದಿದ್ದರೆ ಇಷ್ಟೊತ್ತಿಗಾಗಲೇ ರಾಗಿ ಹುಲ್ಲಿಗೆ ಬೇಡಿಕೆ ಹೆಚ್ಚುತ್ತಿತ್ತು. ಆದರೆ, ಎಲ್ಲೆಡೆ ಜಾನುವಾರುಗಳಿಗೆ ಅಗತ್ಯಕ್ಕೆ ತಕ್ಕಷ್ಟು ಮೇಲು ಲಭ್ಯವಿದೆ. ಹೀಗಾಗಿ ರಾಗಿ ಹುಲ್ಲಿಗೆ ಬೇಡಿಕೆಕಡಿಮೆಯಾಗಿದೆ.
ಜಾನುವಾರುಗಳ ಸಂಖ್ಯೆಯೂ ಕಡಿಮೆ: ತಾಲೂಕಿನಲ್ಲಿ ಜಾನುವಾರುಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಕಳೆದ ಸುಮಾರು 5 ವರ್ಷಕ್ಕೆ ಹೋಲಿಕೆಮಾಡಿದರೆಈಬಾರಿಜಾನುವಾರುಗಳನ್ನು ಸಾಕುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಇದರಿಂದಾಗಿಯೂ ಮೇವು ಬೇಡಿಕೆ ಕಡಿಮೆಯಾಗುತ್ತಿದೆ. ಆದರೆ, ಹೆಚ್ಚು ಜಾನುವಾರುಗಳನ್ನು ಸಾಕಿರುವವರು ಗೋಮಾಳ ಮತ್ತಿತರಕಡೆ ಮೇಯಿ ಸಲು ಹೋಗುತ್ತಿದ್ದು ಅಷ್ಟಾಗಿ ಮೇವು ಅಗತ್ಯಕಂಡು ಬರುತ್ತಿಲ್ಲ. ಕಾರ್ಮಿಕರ ಸಮಸ್ಯೆಯೂ ಇದೆ: ತಾಲೂಕಿನಲ್ಲಿ ರಾಗಿ ತೆನೆ ಕೊಯ್ಯಲೂ ಕಾರ್ಮಿಕರ ಸಮಸ್ಯೆಯಿದೆ. ಇನ್ನು ಹುಲ್ಲನ್ನು ಕೊಯ್ಯಲು ಕಷ್ಟ ಸಾಧ್ಯವಾಗಿದೆ. ಇದರಿಂದಾಗಿ ದುಬಾರಿ ಕೂಲಿ ನೀಡಿ ಕಾರ್ಮಿಕರನ್ನು ಕರೆ ತಂದರೆ ರೈತರು ನಷ್ಟ ಅನುಭವಿಸುತ್ತಾರೆ. ಹೀಗಾಗಿ ತೆನೆ ಕೊಯ್ದ ಕೂಡಲೇ ಹುಲ್ಲನ್ನು ಮಾರಾಟ ಮಾಡಲು ರೈತರು ಮುಂದಾಗಿದ್ದಾರೆ. ರಾಗಿ ಬೆಳೆದಿರುವ ರೈತರು ಮನೆಗಳಲ್ಲಿ ರಾಸುಗಳನ್ನು ಸಾಕಿದ್ದರೆ ವರ್ಷ ಪೂರ್ತಿ ಮೇವು ಬೇಕಾಗುತ್ತಿತ್ತು. ಕಟಾವು ಮಾಡಿ ಬಣವೆ ಹಾಕಿ ಕೊಳ್ಳುತ್ತಿದ್ದರು. ಆದರೆ, ಹೈನುಗಾರಿಕೆ ಮಾಡದೇ ಇರುವ ರೈತರು ತಾವು ಬೆಳೆದ ಮೇವನ್ನು ಮಾರಾಟ ಮಾಡುತ್ತಾರೆ. ಹಣ ನೀಡಿ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ ಎಂದು ಹೈನುಗಾರಿಕೆ ಮಾಡದ ರೈತರು ನೋವು ವ್ಯಕ್ತ ಪಡಿಸುತ್ತಾರೆ.
25 ಸಾವಿರಕ್ಕೂ ಹೆಚ್ಚುಖರ್ಚು ಮಾಡಿ 15 ಮೂಟೆ ರಾಗಿ ಬೆಳೆದಿದ್ದೇನೆ. ತೆನೆ ಕಟಾವು ಮಾಡಿ 25 ದಿನಕಳೆದಿದ್ದು ಮೇವು ಖರೀದಿಸಲು ಯಾರೂ ಬರುತ್ತಿಲ್ಲ. ಬಂದವರುಕೇವಲ 3,000 ಸಾವಿರಕ್ಕೆಕೇಳುತ್ತಾರೆ.
– ಟಿ.ಕೃಷ್ಣಪ್ಪ. ದಮಗಲಯ್ಯನ ಪಾಳ್ಯದ ರೈತ
ಒಂದು ಎಕರೆ ಜಮೀನಿಗೆ 50ರಿಂದ60 ಹೊರೆ ಹುಲ್ಲು ಸಿಗುತ್ತದೆ. ಇದನ್ನು ಪಶುಪಾಲನಾ ಇಲಾಖೆಯವರು ರೈತರಿಂದ ಸಂಗ್ರಹ ಮಾಡಿ ಬರಗಾಲದ ದಿನಗಳಲ್ಲಿ ರೈತರಿಗೆ ನೀಡಿದರೆ ಅನುಕೂಲವಾಗುತ್ತದೆ.
– ಎನ್.ನರಸಿಂಹರಾಜು, ನವಿಲುಕುರಿಕೆ ರೈತ
– ಸಿದ್ಧರಾಜು ಕೆ.