Advertisement
ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶವನ್ನು ಗಮನವಿಟ್ಟು ನೋಡಿದಾಗ, ಮಿಜೋರಾಂ ಹೊರತುಪಡಿಸಿ ಉಳಿದ ನಾಲ್ಕು ರಾಜ್ಯಗಳಲ್ಲಿ “ರೈತ’ನೇ ಮಹತ್ವಪೂರ್ಣ ಪಾತ್ರ ವಹಿಸಿದ್ದಾನೆ ಎನ್ನುವುದು ತಿಳಿಯುತ್ತದೆ. ರೈತರ ಸಮಸ್ಯೆಗಳೆಡೆಗೆ ಅಷ್ಟಾಗಿ ಗಮನಹರಿಸದ ಕಾರಣಕ್ಕಾಗಿಯೇ ಬಿಜೆಪಿ ಈ ರಾಜ್ಯಗಳಲ್ಲಿ ಭಾರೀ ನಷ್ಟ ಅನುಭವಿಸಬೇಕಾಯಿತು. ವಿಪಕ್ಷಗಳು ರೈತರನ್ನು ರಾಜಕೀಯ ದಾಳ ಮಾಡಿಕೊಳ್ಳುತ್ತಿವೆ, ಅವು ಬಿಂಬಿಸುವಷ್ಟರ ಮಟ್ಟಿಗೆ ರೈತರೇನೂ ಬೇಸರಗೊಂಡಿಲ್ಲ ಎಂದೇ ಭಾರತೀಯ ಜನತಾ ಪಾರ್ಟಿ ಭಾವಿಸುತ್ತಾ ಬಂದಿತ್ತು. ವಿಪಕ್ಷಗಳ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಭಾವಿಸಿದ ಬಿಜೆಪಿ, ಅವು ಎತ್ತಿದ ರೈತರ ಸಮಸ್ಯೆಗಳ ವಿಷಯದ ಬಗ್ಗೆಯೂ ತಲೆಕೆಡಿಸಿಕೊಳ್ಳಲಿಲ್ಲ. ಖರೀದಿ ಬೆಲೆಯನ್ನು ಹೆಚ್ಚಿಸುವ ಘೋಷಣೆ ಮಾತ್ರದಿಂದಲೇ ರೈತರ ಬೆಂಬಲ ಪಡೆಯಬಹುದು ಎಂದು ಮೋದಿ ಸರ್ಕಾರ ಭಾವಿಸಿತು. ತಮ್ಮ ಘೋಷಣೆಯ ಲಾಭ ರೈತರವರೆಗೂ ತಲುಪುತ್ತಿದೆಯೇ ಇಲ್ಲವೇ ಎಂದು ನೋಡುವ ಪ್ರಯತ್ನಕ್ಕೂ ಬಿಜೆಪಿ ಮುಂದಾಗಲಿಲ್ಲ.
Related Articles
Advertisement
ಕಾಂಗ್ರೆಸ್‌ನ ಈ ಭರವಸೆಯ ಪರಿಣಾಮ ಮತದಾನಕ್ಕಿಂತಲೂ ಮೊದಲೇ ಕಾಣಿಸಿಕೊಳ್ಳತೊಡಗಿತು. ಈ ಭರವಸೆಯನ್ನು ನಂಬಿದ ರೈತರು ಸಾಲ ಪಾವತಿಯನ್ನು ಹಠಾತ್ತನೆ ನಿಲ್ಲಿಸಿಬಿಟ್ಟರು. ಹೇಗಿದ್ದರೂ ಕಾಂಗ್ರೆಸ್ ಬಂದ ಮೇಲೆ ಸಾಲ ಮನ್ನಾ ಆಗಬಹುದು, ತಾವೇಕೆ ಹಣ ಕಳೆದುಕೊಳ್ಳಬೇಕು ಎಂದು ಅವರು ಅಂದುಕೊಂಡರು. ಛತ್ತೀಸ್‌ಗಡದಲ್ಲಂತೂ ರೈತರು ಸರ್ಕಾರಿ ಖರೀದಿ ಕೇಂದ್ರಗಳಿಗೆ ತೆರಳಿ ಬೆಳೆ ಮಾರಾಟಮಾಡುವುದನೇ ನಿಲ್ಲಿಸಿಬಿಟ್ಟರು. ಏಕೆಂದರೆ, ಬೆಳೆ ಮಾರಿದ ನಂತರ ಸಿಗುವ ಹಣದಲ್ಲಿ ಸಾಲದ ರಕಮು ಕಟ್ ಆಗುವುದು ಅವರಿಗೆ ಇಷ್ಟವಿರಲಿಲ್ಲ.
ಸಾಲಮನ್ನಾದ ಅಸ್ತ್ರವನ್ನು ಬಳಸಿ ಕಾಂಗ್ರೆಸ್ ಅಧಿಕಾರಕ್ಕೇರಿದ್ದು ಈ ಮೊದಲೇನೂ ಅಲ್ಲ. 2008ರಲ್ಲಿ, ಅಂದರೆ, 2009ರ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಯುಪಿಎ ಸರ್ಕಾರ ರೈತರ 70 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿತ್ತು. ಈ ಸಾಲಮನ್ನಾದಿಂದ ದೇಶದ ಮೂರುವರೆ ಕೋಟಿ ರೈತರಿಗೆ ಲಾಭವಾಗಿತ್ತು. ಇದರ ಪರಿಣಾಮವಾಗಿ ಕಾಂಗ್ರೆಸ್ 2009ರಲ್ಲಿ ಮತ್ತೆ ಗದ್ದುಗೆಗೇರಲು ಸಫಲವಾಯಿತು.
2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದ ನರೇಂದ್ರ ಮೋದಿಯವರು, ತಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಲಾಗೂ ಮಾಡುವುದಾಗಿ ಭರವಸೆ ಕೊಟ್ಟಿದ್ದರು. ಆದರೆ ಆ ಭರವಸೆ ಈಡೇರಲೇ ಇಲ್ಲ.
ಬಿಜೆಪಿ-ಕಾಂಗ್ರೆಸ್ ಮಂತ್ರವಾಗಲಿದೆಯೇ ಸಾಲಮನ್ನಾ?ಈಗ ಬಿಜೆಪಿಗೆ ರೈತರ ಫ್ಯಾಕ್ಟರ್ ವಿಧಾನಸಭಾ ಚುನಾವಣೆಯಲ್ಲಿ ಎಷ್ಟು ಕೆಲಸ ಮಾಡಿದೆ ಎನ್ನುವುದು ಅರ್ಥವಾಗಿರಬಹುದು. ಈ ಕಾರಣಕ್ಕಾಗಿಯೇ 2019ರ ಲೋಕಸಭಾ ಚುನಾವಣೆಯಲ್ಲಿ “ರೈತ’ ಮತ್ತು “ಸಾಲಮನ್ನಾ’ ಪ್ರಮುಖ ವಿಷಯಗಳಾಗಲಿವೆ. ಈಗಿನ ವಿಧಾನಸಭಾ ಚುನಾವಣೆಗಳಲ್ಲಿನ ಯಶಸ್ಸಿನ ರುಚಿ ನೋಡಿರುವ ಕಾಂಗ್ರೆಸ್ ಕೂಡ ಸಾಲಮನ್ನಾ ವಿಷಯವನ್ನೇ ಲೋಕಸಭಾ ಚುನಾವಣೆಯಲ್ಲಿ ಪುನರಾವರ್ತಿಸಲು ಬಯಸಲಿದೆ. ಕಾಂಗ್ರೆಸ್ ನಾಯಕರೂ ಕೂಡ “ಒಂದೊಂದು ರಾಜ್ಯಗಳಿಗೆ ಸೀಮಿತವಾಗುವ ಬದಲಾಗಿ, ಇಡೀ ದೇಶದ ರೈತರ ಸಾಲಮನ್ನಾ ಮಾಡುವ ಯೋಜನೆ’ಯ ಬಗ್ಗೆ ತಾವು ಯೋಚಿಸುತ್ತಿರುವುದಾಗಿ, ಈ ಯೋಜನೆ 2019ರ ಘೋಷಣಾ ಪತ್ರದಲ್ಲಿ ಜಾಗ ಪಡೆಯಲಿರುವುದಾಗಿ ಖಾಸಗಿ ಮಾತುಕತೆಗಳಲ್ಲಿ ಹೇಳುತ್ತಿದ್ದಾರೆ. ಈ ಫಲಿತಾಂಶಗಳಿಂದ ಬಿಜೆಪಿಯೂ ಪಾಠ ಕಲಿತಿರಬಹುದು. ಕಾಂಗ್ರೆಸ್‌ನ ಸಾಲಮನ್ನಾ ಘೋಷಣೆಯೇ ಪಂಚರಾಜ್ಯಗಳ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿತು ಎಂದು ಭಾರತೀಯ ಜನತಾಪಕ್ಷದ ಕ್ಯಾಂಪ್‌ಗ್ಳಲ್ಲೂ ಚರ್ಚೆಯಾಗುತ್ತಿದೆ ಎನ್ನಲಾಗುತ್ತದೆ. 2019ರಲ್ಲಿ ಯೇನಕೇನ ಗೆದ್ದು ಅಧಿಕಾರದಲ್ಲಿ ಉಳಿಯಲು ಬಿಜೆಪಿ ಬಯಸುತ್ತಿದೆ. ಹೀಗಾಗಿ, ಅದೂ ಕೂಡ ಸಾಲಮನ್ನಾ ಕುರಿತು ದೊಡ್ಡ ಘೋಷಣೆ ಮಾಡಿದರೆ ಆಶ್ಚರ್ಯವೇನೂ ಇಲ್ಲ. ಕಡೇಪಕ್ಷ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಾದರೂ ಅದು ರೈತರನ್ನು ಕಡೆಗಣಿಸುವ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಆದರೂ ರಾಜಕೀಯ ಪಕ್ಷಗಳು, ಸಾಲಮನ್ನಾದಂಥ ತಾತ್ಕಾಲಿಕ ಲಾಭವನ್ನು ತೋರಿಸಿ ವೋಟ್ ಪಡೆಯುವ ಬದಲು, ರೈತರ ಆದಾಯವನ್ನು ಹೆಚ್ಚಿಸುವ ಸ್ಥಾಯಿ ಪ್ರಯತ್ನ ಮಾಡಿದ್ದರೆ ಒಳ್ಳೆಯದಿತ್ತು. ಕೃಪೆ: ನವಭಾರತ ಟೈಮ್ಸ್ ನದೀಮ್ ಕೆ., ಹಿರಿಯ ಪತ್ರಕರ್ತ