Advertisement

ಪಿಎಂ ಕಿಸಾನ್ ಸಮ್ಮಾನ್ ಯೋಜನೆ : ಎರಡು ಕಂತುಗಳ ಲಾಭ ಪಡೆಯಲು ಈ ಕೆಲಸ ಮಾಡಿ

07:01 PM Jun 10, 2021 | |

ನವ ದೆಹಲಿ :  ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಎಂಟನೇ ಕಂತಿನ ಹಣವನ್ನು ರೈತರ ಖಾತೆಗೆ ವರ್ಗಾಯಿಸಿದೆ.

Advertisement

ಅನೇಕ ರೈತರು ಈ ಯೋಜನೆಗೆ ತಮ್ಮನ್ನು ನೋಂದಾಯಿಸಿಕೊಂಡಿಲ್ಲ. ಹಾಗಾಗಿ  ರೈತರಿಗೆ ಯೋಜನೆಯ ಲಾಭ ಪಡೆಯುವುದು ಸಾಧ್ಯವಾಗುತ್ತಿಲ್ಲ. ಯೋಜನೆಯ ದ್ವಿಗುಣ ಲಾಭವನ್ನು ಪಡೆಯಲು ಬಯಸುವುದಾದರೆ ಜೂನ್ 30 ರೊಳಗೆ ಈ ಯೋಜನೆಯಡಿಯಲ್ಲಿ ನಿಮ್ಮನ್ನು ನೋಂದಾಯಿಸಿಕೊಳ್ಳುವುದು ಅಗತ್ಯವಾಗಿದೆ.

ಇದನ್ನೂ ಓದಿ :   ಪೆಟ್ರೋಲ್, ಡಿಸೇಲ್ ದರ ಹೆಚ್ಚಿಸಲು ಬಿಜೆಪಿ ನಾಯಕರಿಗೆ ನಾಚಿಕೆಯಾಗಲ್ವೇ : ಸಿದ್ದು ಕಿಡಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೋಂದಾಯಿಸಿಕೊಳ್ಳುವ ಎಲ್ಲಾ ಅರ್ಹತೆಯಿದ್ದರೆ, ಜೂನ್ 30 ರೊಳಗೆ ಈ ಯೋಜನೆಯಡಿ ನೊಂದಾಯಿಸಿಕೊಂಡರೆ, ನಿಮ್ಮ ಖಾತೆಗೆ 4,000 ರೂಪಾಯಿಗಳು ಕೇಂದ್ರ ಸರ್ಕಾರದಿಂದ ಜಮೆಯಾಗುತ್ತದೆ. ಅಂದರೆ ಎಂಟನೇ ಮತ್ತು ಒಂಬತ್ತನೇ ಕಂತಿನ ಹಣವನ್ನು ಒಟ್ಟಿಗೆ ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ.

3 ಕಂತುಗಳಲ್ಲಿ 6 ಸಾವಿರ ರೂ

Advertisement

ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಕೇಂದ್ರ ಸರ್ಕಾರ ಇಲ್ಲಿಯವರೆಗೆ ಸರ್ಕಾರ ಒಟ್ಟು 8 ಕಂತುಗಳ ಹಣವನ್ನು ರೈತರ ಖಾತೆಗೆ ವರ್ಗಾಯಿಸಿದೆ.  ಈ ಯೋಜನೆಯಲ್ಲಿ ನೋಂದಣಿ ಮಾಡಬೇಕಾದರೆ, ರೈತರು ಮೊದಲು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ವೆಬ್‌ ಸೈಟ್‌ pmkisan.gov.in ಗೆ ಭೇಟಿ ನೀಡಬೇಕಾಗುತ್ತದೆ.

ಇದನ್ನೂ ಓದಿ : ದೆಹಲಿ ಗಲಭೆ: ಇಬ್ಬರು ಕೊಲೆ ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದ ದೆಹಲಿ ಕೋರ್ಟ್

Advertisement

Udayavani is now on Telegram. Click here to join our channel and stay updated with the latest news.

Next