Advertisement
ಸಾಹಿವಾಲ್ ಎಂಬ ಪಂಜಾಬ್ ಮೂಲದ ರಾಸುಗಳು ಮೇಳದ ಮತ್ತೂಂದು ಆಕರ್ಷಣೆ. ಸುಮಾರು 200ರಿಂದ 250 ಕಿಲೋ ತೂಗುವ ಈ ರಾಸುಗಳು ದಿನಕ್ಕೆ 15ರಿಂದ 18 ಲೀಟರ್ ಹಾಲು ಕೊಡುತ್ತವೆ.
Related Articles
Advertisement
ಅಮೃತ್‌ಮಹಲ್ ರಕ್ಷಣೆ: ಸ್ಥಳೀಯ ರಾಸುಗಳು ಹೆಚ್ಚಾಗಿ ಕ್ರಾಸ್ ಬ್ರಿಡಿಂಗ್‌ಗೆ ಒಳಗಾಗಿ ಪರಿಶುದ್ಧತೆ, ಮೂಲಗುಣ ಕಳೆದುಕೊಳ್ಳುತ್ತಿವೆ. ಇದರಲ್ಲಿ ಅಮೃತ್‌ಮಹಲ್ ಕೂಡ ಒಂದು. ಆದ್ದರಿಂದ ತಳಿ ಶುದ್ಧತೆ ರಕ್ಷಣೆಯ ಅಗತ್ಯತೆ ಪ್ರಸ್ತುತ ಹೆಚ್ಚಿದೆ. ಈ ತಳಿಯ ಎತ್ತುಗಳು ಅಪಾರ ಸಾಮರ್ಥ್ಯಕ್ಕೆ ಹೆಸರಾಗಿವೆ. ಅಲ್ಲದೆ ಹೆಚ್ಚು ಆಕರ್ಷಣೆಯುಳ್ಳ ಅಮೃತ್‌ಮಾಲ್ ರಕ್ಷಣೆ ಕುರಿತು ಕೃಷಿ ಮೇಳದಲ್ಲಿ ಮಾಹಿತಿ ಲಭ್ಯವಿದೆ.
ಕೆ.ಜಿ ಮಾಂಸಕ್ಕೆ ಸಾವಿರ ರೂ.: ಪಶುಸಂಗೋಪನೆಯಲ್ಲಿ ಈ ಬಾರಿ ವಿವಿಧ ತಳಿಯ ಮೇಕೆ ಮತ್ತು ಕುರಿಗಳನ್ನು ಮೇಳದಲ್ಲಿ ವೀಕ್ಷಿಸಬಹುದಾಗಿದ್ದು, ಬೀಟಲ್, ಬೋಯರ್, ಜಮನಾಪುರಿ, ಸಾನಿಯನ್, ಡಾರ್‌ಫರ್, ಡಾರ್‌ಫರ್ ನಾರಿಕ್ರಾಸ್, ಅವಸಿ, ಜಕ್ರಾನ, ಇತ್ಯಾದಿ ದೇಶಿ ಹಾಗೂ ದೇಶಿ ತಳಿಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ.
ಡಾರ್‌ಫರ್ ನಾರಿಕ್ರಾಸ್ ಎಂಬ ಸೌತ್ ಆಫ್ರಿಕನ್ ತಳಿಯ ಒಂದು ಕೆ.ಜಿ ಮಾಂಸದ ಬೆಲೆ ಬರೋಬ್ಬರಿ 1000 ರೂ. ಇದೆ ಎಂದು ಕುರಿ-ಮೇಕೆ ಸಾಕಣಿಕೆದಾರ ಮೆಲ್ವಿನ್ ಮಾಹಿತಿ ನೀಡಿದ್ದಾರೆ. ಈ ತಳಿಯ ಗಂಡು ಮೇಕೆ 100ರಿಂದ 120 ಕೆ.ಜಿ ತೂಗಿದರೆ, ಹೆಣ್ಣು 60ರಿಂದ 80 ಕೆ.ಜಿ ತೂಕ ಇರುತ್ತದೆ. ಸ್ವಿಟ್ಜರ್‌ಲ್ಯಾಂಡ್‌ನ ಸಾನಿಯಾನ್ ತಳಿ ದಿನಕ್ಕೆ 3ರಿಂದ 5 ಲೀಟರ್ ಹಾಲು ನೀಡುತ್ತದೆ. ಜತೆಗೆ ಈ ತಳಿಯ 1 ಕೆ.ಜಿ. ಮಾಂಸಕ್ಕೆ 750ರಿಂದ 800 ರೂ. ಇದ್ದು, ಹಾಲಿನ ರಾಸುವಾಗಿ ಮತ್ತು ಮಾಂಸಕ್ಕಾಗಿ ಸಾಕಲಾಗುತ್ತದೆ.
* ಸಂಪತ್ ತರೀಕೆರೆ