ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸಂಬಂಧಪಟ್ಟ ಸರ್ಕಾರಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಆರೋಪಿಸಿದ್ದಾರೆ.
ತಾಲೂಕಿನ ದಂಡಾಧಿಕಾರಿಗಳಿಗೆ ರೈತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯವಿಲ್ಲದೆ ರೈತರು ಬೆಳೆದ ಬೆಲೆಗೆ ಸೂಕ್ತ ಬೆಲೆ ದೊರೆಯದೆ ಹಾಕಿದ ಬಂಡವಾಳ ಕೈ ಸೇರುತ್ತಿಲ್ಲ. ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದಾರೆ ಎಂದು ದೂರಿದ ಅವರು, ಶಾಶ್ವತ ನೀರಾವರಿ ಯೋಜನೆಯನ್ನು ಡಾ.ಪರಮಶಿವಯ್ಯ ವರದಿಯಂತೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಕೃಷ್ಣ ನದಿ ನೀರು ಜಿಲ್ಲೆಗೆ ನೀಡಿ: ಆಂಧ್ರ, ಕರ್ನಾಟಕಕ್ಕೆ ಹರಿಯುವ ಕೃಷ್ಣ ನದಿ ನೀರನ್ನು ಕೃಷ್ಣಾ ಮೇಲ್ದಂಡೆ ಯೋಜನೆಯ ಬಚಾವತ್ ತೀರ್ಪಿನಂತೆ ನಮ್ಮ ಪಾಲಿನ ನೀರನ್ನು ಬಯಲುಸೀಮೆ ಜಿಲ್ಲೆಯಾದ ಚಿಕ್ಕಬಳ್ಳಾಪುರಕ್ಕೆ ಒದಗಿಸಿಕೊಡಿಸಲಿ ಎಂದು ಒತ್ತಾಯ ಮಾಡಿದ ಅವರು, ಕೆ.ಸಿ.ವ್ಯಾಲಿ ಯೋಜನೆಯಡಿ ಚಿಂತಾಮಣಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ವೃದ್ಧಿಗೆ ಒತ್ತು ನೀಡಿ ಎಂದು ಮನವಿ ಮಾಡಿದರು.
ಹೆಚ್.ಎನ್.ವ್ಯಾಲಿ ಯೋಜನೆಯಲ್ಲಿ ಜಿಲ್ಲೆಯಲ್ಲಿ 46 ಕೆರೆಗಳು ಹಾಗೂ 18 ಹೆಚ್ಚುವರಿಯಲ್ಲಿ 64 ಕೆರೆಗಳ ಪೈಕಿ ಚಿಂತಾಮಣಿ ತಾಲೂಕು ಅತಿ ದೊಡ್ಡದಾಗಿದ್ದು, ಈ ಯೋಜನೆಯಿಂದ ಕೈ ಬಿಟ್ಟಿರುವುದರಿಂದ ಜ.20 ರಂದು ನಡೆಯಲಿರುವ ವಿಧಾನಸೌಧ ಅಧಿವೇಶನದಲ್ಲಿ ಚಿಂತಾಮಣಿ ತಾಲೂಕಿಗೆ ಸಂಬಂಧಿಸಿದ ಕನಿಷ್ಟ 50 ಕೆರೆಗಳನ್ನು ಈ ಯೋಜನೆಗೆ ಸೇರಿಸಿಕೊಂಡು ಮಂಜೂರು ಮಾಡಿಸಿಕೊಡಲು ಮಾನ್ಯ ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸುತ್ತೇವೆ ಎಂದರು.
ತಾಲೂಕಿನಲ್ಲಿ ಸುಮಾರು 10 ರಿಂದ 20 ವರ್ಷಗಳ ಹಿಂದಿನಿಂದಲೂ ಉಪವಿಭಾಗಾಧಿಕಾರಿಗಳು ಪರಿಶೀಲನೆ ಮಾಡಿ ಕಂದಾಯ ಕಟ್ಟಿಸಿಕೊಂಡಿರುವ ಭೂಮಿಗಳಿಗೆ ಸಾಗುವಳಿ ಚೀಟಿಗಳನ್ನು ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜೆ.ವಿ.ರಘುನಾಥರೆಡ್ಡಿ, ಕೆ.ವೆಂಕಟರಾಮಯ್ಯ, ತಿಮ್ಮರಾಯಪ್ಪ, ವೆಂಕಟಸುಬ್ಟಾರೆಡ್ಡಿ, ಸರ್ವೇಶ್ ಬಾಬು, ಶ್ರೀನಿವಾಸರೆಡ್ಡಿ, ಬಿ.ವಿ.ಶ್ರೀರಾಮರೆಡ್ಡಿ, ವೆಂಕಟರೆಡ್ಡಿ, ಶಿವಕುಮಾರ್.ಕೆ (ಸುಮಂತ್), ಕೃಷ್ಣ, ಚನ್ನಕೇಶವರೆಡ್ಡಿ,
ಜಯರಾಮರೆಡ್ಡಿ, ಶ್ರೀನಿವಾಸಪ್ರಸಾದ್, ವೆಂಕಟೇಶಪ್ಪ, ನಾಗರಾಜು, ಕೃಷ್ಣಪ್ಪ, ಅಶ್ವತ್ಥಗೌಡ ವೈ.ಎಂ., ನರಸಿಂಹರೆಡ್ಡಿ, ಸೀತಾರಾಮರೆಡ್ಡಿ, ಶ್ರೀರಾಮರೆಡ್ಡಿ, ಮುನೆಪ್ಪ, ನಾರಾಯಣಸ್ವಾಮಿ, ಅಂಜಪ್ಪ, ಶ್ರೀರಾಮಪ್ಪ, ಸೈಯದ್ ಅಬ್ಟಾಸ್, ನಾಗರಾಜಪ್ಪ, ಕೆ.ಆಂಜಿನಪ್ಪ, ಇಮಾಂಸಾಬ್, ಎಸ್.ವಿ.ಗಂಗುಲಪ್ಪ, ನರಸಿಂಹಮೂರ್ತಿ.ಎ., ಎಂ.ಎನ್.ನಾಗನಾಥ, ಕೆ.ವಿ.ವೆಂಕಟರವಣಪ್ಪ, ಎನ್.ಎಸ್.ರಾಜಣ್ಣ, ಎಸ್.ವೆಂಕಟಶಾಮಿರೆಡ್ಡಿ, ಮಹೆಬೂಬ್‌ಜಾನ್, ಚೋಟಾಸಾಬ್, ಸುಬ್ರಹ್ಮಣಿ, ನರಸಿಂಹಪ್ಪ, ಮುನಿಯಪ್ಪ, ರಾಮಚಂದ್ರಾರೆಡ್ಡಿ ಇದ್ದರು.