Advertisement

ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ವೈಶಿಷ್ಟ್ಯ ಪೂರ್ಣ ರೈತ ದಿನಾಚರಣೆ

04:27 PM Dec 23, 2022 | Team Udayavani |

ಗಂಗಾವತಿ:ಹವಾಮಾನ ವೈಪರೀತ್ಯಗಳು ಸೇರಿ ಪ್ರಕೃತಿ ವಿಕೋಪಗಳು ಮಾರುಕಟ್ಟೆ ವ್ಯತ್ಯಾಸಗಳಿಂದ ದೇಶದ ಕೃಷಿ ಕ್ಷೇತ್ರ ಲಾಭದಾಯಕವಾಗಿಲ್ಲ. ಇದರಿಂದ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಮಧ್ಯೆ ತಾಲೂಕಿನ ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಪಬ್ಲಿಕ್ ಶಾಲೆಯಲ್ಲಿ ರೈತದಿನದ ನಿಮಿತ್ತ ಕೃಷಿ ಹಾಗೂ ಇದಕ್ಕೆ ಸಂಬಂಧಿಸಿದ ಕೆಲಸಗಳ ಕುರಿತು ಮಕ್ಕಳಿಗೆ ಪ್ರಾತ್ಯಕ್ಷಿಕೆಯಲ್ಲಿ ಮಕ್ಕಳನ್ನು ತೊಡಗಿಸಿ ರೈತ ದಿನಾಚರಣೆಯನ್ನು ಆಯೋಜನೆ ಮಾಡಲಾಗಿತ್ತು.

Advertisement

“ಭೂಮಿ ತಾಯಿಯ ಹೆಮ್ಮೆಯ ಪುತ್ರರು ರೈತರು” ರೈತ ಕುಟುಂಬಕ್ಕೆ ಸೇರಿದ ಮತ್ತು ದೇಶದ ಪ್ರಧಾನಿ ಚೌಧರಿ ಚರಣ್ ಸಿಂಗ್ ಇವರ ಜನ್ಮ ದಿನವನ್ನು ರೈತ ದಿನವೆಂದು ಆಚರಿಸಲಾಗುತ್ತದೆ. ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರು ರೈತ ಕುಟುಂಬದ ವೇಷಭೂಷಣಗಳನ್ನು ಧರಿಸಿ ನೇಗಿಲು, ಕೊಡಲಿ, ಕುಡುಗೋಲುಗಳನ್ನು ತೆಗೆದುಕೊಂಡು ತಮ್ಮ ಹೊಲಗಳಿಗೆ ಹೋಗುವ ದೃಶ್ಯವನ್ನು ನೈಜವಾಗಿ ಪ್ರದರ್ಶಿದರು.

ರೈತ ಘೋಷಣೆಗಳನ್ನು ಮತ್ತು ಅವರು ಬೆಳೆಯುವ ದವಸಧಾನ್ಯಗಳನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯೋಪಾಧ್ಯಾಯಿನಿ ಶಾರುನ್‌ಕುಮಾರಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಶಾಂತಿ, ಹನುಮೇಶ್, ರಮೇಶ ಎಂ,ಮರುತಿಬಾಯಿ, ಜಗದೀಶ್ ಮತ್ತು ಸಹ ಶಿಕ್ಷಕರು ರೈತಗೀತೆಯನ್ನು ಹಾಡಿ ರೈತರಿಗೆ ತಮ್ಮ ಗೌರವವನ್ನು ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next