ಹೊಳೆಹೊನ್ನೂರು: ಕೇಂದ್ರ ಹಾಗೂ ರಾಜ್ಯ ಸರಕಾರಗಳ ನೂತನ ಕೃಷಿ ಕಾಯ್ದೆಗಳಿಂದ ಸ್ವಾವಲಂಬಿಗಳಾಗಿದ್ದ ರೈತರು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಪರಾವಂಬಿಗಳಾಗುತ್ತಾರೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಹೇಳಿದರು.
ಪಟ್ಟಣ ಸಮೀಪದ ನಾಗಸಮುದ್ರ ಗ್ರಾಮದಲ್ಲಿ ರಾಜ್ಯ ರೈತ ಸಂಘ ಹಾಗೂಹಸಿರು ಸೇನೆ ವತಿಯಿಂದ ರೈತ ಹುತಾತ್ಮರಿಗೆ ಗೌರವಾರ್ಪಣೆ ಹಾಗೂ ಕೇಂದ್ರ ಮತ್ತು ರಾಜ್ಯಸರಕಾರ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ಹಸಿರು ಕ್ರಾಂತಿಯಿಂದ ಕೃಷಿ ಹಾಗೂ ಆಹಾರೋತ್ಪನ್ನಗಳು ಹೆಚ್ಚಾಗಿ ರಫ್ತು ಮಾಡಿ ಆರ್ಥಿಕ ಪ್ರಗತಿಕಾಣಲಾಯಿತು. ಆದರೆ ಸಾಂಪ್ರದಾಯಿಕಕೃಷಿ ಬಿಟ್ಟು ಅತಿಯಾದ ಕ್ರಿಮಿ, ಕೀಟನಾಶಕ,ಯಂತ್ರೋಪಕರಣ ಹಾಗೂ ರಸಗೊಬ್ಬರ ಬಳಕೆಯಿಂದ ಭೂಮಿ ಬರುಡಾಗುತ್ತಿವೆ.ಪರಿಣಾಮವಾಗಿ ರೈತರು ಆರ್ಥಿಕವಾಗಿ ದಿವಾಳಿಆಗುತ್ತಿದ್ದಾರೆ. ಇದು ನೈತಿಕ ಹಾಗೂ ಸಾಂಸ್ಕೃತಿಕ ದಿವಾಳಿತನಕ್ಕೆ ನಾಂದಿಯಾಗುತ್ತಿದೆ. ರೈತರ ಪರವಾದ ಹೋರಾಟವನ್ನು ಸರಕಾರಗಳು ಅವಮಾನಿಸುತ್ತಿವೆ. ರೈತರನ್ನು ಉಳಿಸುವ ಹಾಗೂ ಪರವಾದ ಕಾನೂನು ರಚಿಸುವ ಬದಲು ರೈತರಿಂದ ಭೂಮಿ ಕಿತ್ತುಕೊಳ್ಳುವಂತಹ ಕಾಯ್ದೆ ತರಲು ಮುಂದಾಗಿರುವುದು ವಿಷಾದನೀಯ ಎಂದರು.
ರಾಜ್ಯ ಕೋಶಾಧ್ಯಕ್ಷ ಡಾ| ಬಿ.ಎಂ.ಚಿಕ್ಕಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ರೈತ ಮುಖಂಡಕಡಿದಾಳ್ ಶಾಮಣ್ಣ, ಮುಖಂಡರಾದ ಎನ್ .ಪಿ. ಷಡಾಕ್ಷರಪ್ಪ ಗೌಡ, ಕೆ.ಎಲ್. ಅಶೋಕ್,ತಾಲೂಕು ಅಧ್ಯಕ್ಷ ಪಂಚಾಕ್ಷರಪ್ಪ ಹಾಗೂನೂರಾರು ರೈತರು ಭಾಗವಹಿಸಿದ್ದರು.ಇದಕ್ಕೂ ಮುನ್ನ ಹುತಾತ್ಮ ರೈತರಾದಮಲ್ಲಪ್ಪ, ನಟರಾಜ, ಬಸವನಗೌಡ ಅವರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಲಾಯಿತು.
ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲರಾದ ಎಂ.ವಿ.ಪ್ರತಿಭಾ ಪರಿಚಯಿಸಿದರು. ರೈತಸಂಘದಜಿಲ್ಲಾಧ್ಯಕ್ಷ ಎಸ್. ಶಿವಮೂರ್ತಿ ಸ್ವಾಗತಿಸಿ, ತಾಲೂಕು ಅಧ್ಯಕ್ಷ ಪಂಚಾಕ್ಷರಪ್ಪ ವಂದಿಸಿದರು.