Advertisement

ಸರ್ಕಾರಗಳ ಧೋರಣೆಯಿಂದ ರೈತ ಆತ್ಮಹತ್ಯೆ

01:01 PM Sep 27, 2017 | Team Udayavani |

ಬೇರ್ಯ: ತನ್ನ ನೌಕರರ ಬೇಡಿಕೆಗಳಿಗೆ ತಕ್ಷಣವೇ ಸ್ಪಂದಿಸುವ ಸರಕಾರ ರೈತರ ಹಿತವನ್ನು ಕಡೆಗಣಿಸುತ್ತಿದ್ದು, ಸರ್ಕಾರಗಳ ರೈತ ವಿರೋಧಿ ಧೋರಣೆಯಿಂದಾಗಿ ನಿತ್ಯ ಅನ್ನದಾತ ಆತ್ಮಹತ್ಯೆಗೆ ಶರಣಾಗುವ ದುಸ್ಥಿತಿ ಎದುರಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಬೇಸರ ವ್ಯಕ್ತಪಡಿಸಿದರು. ಅವರು ಸಮೀಪದ ಮುಂಡೂರು ಗ್ರಾಮದಲ್ಲಿ ಮಂಗಳವಾರ ರಾಜ್ಯ ಕಬ್ಬು ಬೆಳೆಗಾರರ ಸಂಘದ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಸ್ಥಿತಿ: ಸರಕಾರಿ ನೌಕರರ ಸಂಬಳ ಹೆಚ್ಚಳಕ್ಕೆ ವೇತನ ಆಯೋಗ ರಚಿಸಿ ಅದರ ಶಿಪಾರಸ್ಸುಗಳನ್ನು ಜಾರಿಗೊಳಿಸುವ ಸರ್ಕಾರ ಚಿಂತಾಜನಕ ಸ್ಥಿತಿಯಲ್ಲಿರುವ ರೈತರ ಬೇಡಿಕೆಗಳನ್ನು ಈಡೇರಿಸಲು ಮೀನಮೇಷ ಎಣಿಸುತ್ತಿದೆ. ಕೃಷಿ ಬೆಲೆ ಆಯೋಗದ ವರದಿಯನ್ನು ಜಾರಿಗೊಳಿಸಲು ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.

ಬೆಳೆಗೆ ವೈಜಾnನಿಕ ಬೆಲೆ ನಿಗದಿಗಾಗಿ ಡಾ.ಎಂ.ಎಸ್‌.ಸ್ವಾಮಿನಾಥನ್‌ ರವರ ವರದಿಯನ್ನು ಜಾರಿಗೊಳಿಸಲು ಹಲವು ಬಾರಿ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ನಿಗದಿಯಾಗದ ಹೊರತು ಅನ್ನದಾತನ ಜೀವನಮಟ್ಟ ಸುಧಾರಿಸದು. ಈ ನಿಟ್ಟಿನಲ್ಲಿ ಕೇಂದ್ರ ಹಾಗು ರಾಜ್ಯಸರಕಾರಗಳು ಗಮನ ಹರಿಸಿ ಸ್ವಾಮಿನಾಥನ್‌ ವರದಿ ಜಾರಿ ಅಗತ್ಯ ಎಂದರು.

ಕಾಳಜಿಯಿಲ್ಲ: ಪ್ರಧಾನಿ ನರೇಂದ್ರ ಮೋದಿಯವರಿಗಾಗಲೀ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಾಗಲೀ ರೈತರ ಮೇಲೆ ಕಿಂಚಿತ್ತೂ ಕಾಳಜಿಯಿಲ್ಲ. ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ ಮೂರೂವರೆ ಸಾವಿರ ಹಾಗೂ ದೇಶಾದ್ಯಂತ ಒಂದೂವರೆ ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡರೂ ರೈತರ ಕಲ್ಯಾಣಕ್ಕಾಗಿ ಸೂಕ್ತ ಯೋಜನೆ ರೂಪಿಸಲು ಸರಕಾರಗಳು ವಿಫ‌ಲವಾಗಿವೆ. ಕೃಷಿ ಮಂತ್ರಿ ಅನುಷ್ಠಾನದಲ್ಲೂ ವಿಫ‌ಲರಾಗಿದ್ದಾರೆ ಎಂದರು.

ಪಾಂಡವಪುರ ಸಕ್ಕರೆ ಕಾರ್ಖಾನೆ ಹಾಗು ಮೈಷುಗರ್‌ ಕಾರ್ಖಾನೆಗೆ ಅಭಿವೃದ್ದಿಗೆ ನೂರಾರು ಕೋಟಿ ರೂ.ಆರ್ಥಿಕ ನೆರವು ನೀಡುವ ಸರಕಾರ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಪುನಾರಂ¸‌ಕ್ಕೆ ಅಗತ್ಯವಿರುವ ಕೇವಲ 20 ಕೋಟಿ ರೂ.ನೀಡಲು ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.

Advertisement

ಹೋರಾಟ: ಶಾಸಕರು, ಮಂತ್ರಿಗಳು ಯಾವುದೆ ವಿರೋಧವಿಲ್ಲದೆ ತಮ್ಮ ಸಂಬಳ ಹೆಚ್ಚು ಮಾಡಿಕೊಳ್ಳುತ್ತಾರೆ.ಆದರೆ ದೇಶದ ಬೆನ್ನೆಲುಬಾದ ರೈತ ದಿನೆದಿನೇ ಸೊರಗುತ್ತಿದ್ದಾನೆ. ಈ ನಿಟ್ಟಿನಲ್ಲಿ ಜಾಗೃತರಾಗುವ ಮೂಲಕ ಒಗ್ಗಟ್ಟು ಪ್ರದರ್ಶಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು. ಸಾರ್ವತ್ರಿಕ ಸಮಸ್ಯೆಗಳ ಬಗೆಹರಿಸಲು ಹೋರಾಟಕ್ಕೆ ಮುಂದಾಗಿ ಎಂದು ಸಲಹೆ ನೀಡಿದರು.

ಸಂಘದ ತಾಲೂಕು ಅಧ್ಯಕ್ಷ ಸಿ.ಕೆ.ರವೀಂದ್ರ ಮಾತನಾಡಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ಮುಂಡೂರು ರಾಮೇಗೌಡ, ಸಂಚಾಲಕ ಎಂ.ಆರ್‌.ಗಿರೀಶ್‌, ಗೌರವ ಅಧ್ಯಕ್ಷ ಕಾಳೇಗೌಡ, ಮುಂಡೂರು ಘಟಕದ ಅಧ್ಯಕ್ಷ ಕುಮಾರ್‌, ಉಪಾಧ್ಯಕ್ಷ ಸ್ವಾಮಿ,ಕಾರ್ಯದರ್ಶಿ ಅಶ್ವತ್ಥ್, ಖಜಾಂಚಿ ರಂಗಪ್ಪ, ಗ್ರಾಪಂ ಸದಸ್ಯ ತಮ್ಮಣ್ಣೇಗೌಡ, ಮುಂಡೂರು ರಮೇಶ್‌,ರಂಗಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next