Advertisement

ಅಭಿಮಾನಿಯ ಅಭಿಮಾನ, ಕ್ವಿಂಟನ್‌ ಡಿ ಕಾಕ್‌ ದೊಡ್ಡತನ

07:35 PM Oct 25, 2019 | Lakshmi GovindaRaju |

ಭಾರತದಲ್ಲಿ ಇತ್ತೀಚೆಗೆ ಎಲ್ಲೇ ಕ್ರಿಕೆಟ್‌ ಪಂದ್ಯ ನಡೆಯಲಿ; ಅಭಿಮಾನಿಗಳು ಭದ್ರತೆಯನ್ನು ಭೇದಿಸಿಕೊಂಡು ಮೈದಾನದೊಳಕ್ಕೆ ನುಗ್ಗುವುದು ಮಾಮೂಲಿಯಂತಾಗಿದೆ. ಇಂತಹ ಭದ್ರತಾ ವೈಫ‌ಲ್ಯಗಳು ಹೇಗೆ ನಡೆಯಲು ಸಾಧ್ಯ ಎನ್ನುವ ಪ್ರಶ್ನೆ ಹಲವು ಅನುಮಾನ ಹುಟ್ಟಿಸುತ್ತದೆ. ಅದಿರಲಿ…ರಾಂಚಿಯಲ್ಲಿ ಭಾರತ-ದ.ಆಫ್ರಿಕಾ ವಿರುದ್ಧ ನಡೆದ 3ನೆ ಟೆಸ್ಟ್‌ನ ಮೊದಲದಿನ ತಮಾಷೆಯ ಪ್ರಸಂಗವೊಂದು ನಡೆಯಿತು.

Advertisement

ಅಭಿಮಾನಿಯೊಬ್ಬ ಅದು ಹೇಗೋ ಭದ್ರತೆಯನ್ನು ಭೇದಿಸಿಕೊಂಡು ಮೈದಾನದೊಳಕ್ಕೆ ನುಗ್ಗಿ, ಹೋಗಿದ್ದು ದ.ಆಫ್ರಿಕಾ ತಂಡದ ಕ್ವಿಂಟನ್‌ ಡಿ ಕಾಕ್‌ ಕಡೆಗೆ! ಅವರ ಪಾದಮುಟ್ಟಿ ನಮಸ್ಕರಿಸಿ, ತಬ್ಬಿಕೊಂಡರು. ಅಷ್ಟರಲ್ಲಿ ಭದ್ರತಾ ಸಿಬ್ಬಂದಿ ಅಭಿಮಾನಿಯನ್ನು ಹಿಡಿದು ಮೈದಾನದಾಚೆ ದಬ್ಬಿದರು. ಆಗ ಎಡವಟ್ಟೊಂದು ನಡೆಯಿತು. ಹೊರಹೋಗುವ ಗಡಿಬಿಡಿಯಲ್ಲಿ ಅಭಿಮಾನಿ ಚಪ್ಪಲಿಯನ್ನು ಮೈದಾನದಲ್ಲೇ ಬಿಟ್ಟುಹೋಗಿದ್ದ. ಅದನ್ನು ಕೈಯಾರೆ ಡಿ ಕಾಕ್‌ ಮೈದಾನದಾಚೆ ಒಯ್ದು ಹೊರಹಾಕಿದರು!

Advertisement

Udayavani is now on Telegram. Click here to join our channel and stay updated with the latest news.

Next