Advertisement

ಮುಂಜಾಗ್ರತ ಕ್ರಮ ಪಾಲಿಸಿ: ನಾಗರಾಳ

01:22 PM May 03, 2020 | Suhan S |

ಹುನಗುಂದ:  ಕೋವಿಡ್ 19 ವೈರಸ್‌ ಹರಡದಂತೆ ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ನೀಡುತ್ತಿರುವ ಮುಂಜಾಗ್ರತಾ ಕ್ರಮ ಹಾಗೂ ಸಲಹೆ ಸೂಚನೆಗಳನ್ನು ಚಾಚು ತಪ್ಪದೆ ಪಾಲಿಸಬೇಕೆಂದು ತಹಶೀಲ್ದಾರ್‌ ಬಸವರಾಜ ನಾಗರಾಳ ಹೇಳಿದರು.

Advertisement

ಪಟ್ಟಣದ ಶ್ರೀ ಪುಟ್ಟರಾಜ ಗವಾಯಿಗಳ ಅಭಿವೃದ್ಧಿ ಸ್ವಯಂ ಸೇವಾ ಸಂಸ್ಥೆಯ ಸಹಯೋಗದಲ್ಲಿ ಬಡ ಅಂಗವಿಕಲರಿಗೆ ನೀಡಿದ ಆಹಾರ ಕಿಟ್‌ ಮತ್ತು ಮಾಸ್ಕ್ ವಿತರಿಸಿ ಅವರು ಮಾತನಾಡಿದರು. ಸಮಸ್ಯೆ ಬಂದರೂ ಅಧೈ‌ರ್ಯಗೊಳ್ಳದೆ ಮತ್ತೂಬ್ಬರ ಜತೆ ಹಂಚಿಕೊಂಡು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಾಣಬೇಕು. ಸರಕಾರದಿಂದ ಬರುವಎಲ್ಲ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಮತ್ತೂಬ್ಬರಿ ಮಾದರಿ ಜೀವನ ಸಾಗಿಸಬೇಕೆಂದರು.

ಸಿಪಿಐ ಅಯ್ಯನಗೌಡ ಪಾಟೀಲ, ಮಾತನಾಡಿ ಕೋವಿಡ್‌-19 ಮಹಾಮಾರಿ ರೋಗ ಹರಡುತ್ತದೆ ಎಂಬ ಭಯ ಬೇಡ, ಎಚ್ಚರಿಕೆ ವಹಿಸಬೇಕು. ಜಿಲ್ಲೆ ಹಾಗೂ ತಾಲೂಕುಗಳಲ್ಲಿ ತಾಲೂಕು ಆಡಳಿತ ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆ ಮತ್ತು ಪುರಸಭೆ ಇಲಾಖೆಗಳು ರೋಗ ಹರಡದಂತೆ ಶ್ರಮ ವಹಿಸುತ್ತಿವೆ. ಅದರ ಜತೆಗೆ ಸಾರ್ವಜನಿಕರ ಸಹಕಾರವು ಮುಖ್ಯ ಎಂದರು.

ಸಂಘದ ಅಧ್ಯಕ್ಷ ಸಂಗಮೇಶ ಭಾವಿಕಟ್ಟಿ, ಸಂಘದ ಉಪಾಧ್ಯಕ್ಷ ಶಿವು ಶಿರಗುಂಪಿ, ನಗರ ಪುನರ್ವಸತಿ ಕಾರ್ಯಕರ್ತ ತಿಪ್ಪಣ್ಣ ಕುರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next