ಕಲಬುರಗಿ:ಜಿಲ್ಲೆಯಲ್ಲಿ ರೈತರಿಗೆ ನಕಲಿ ಬಿತ್ತನೆ ಬೀಜಗಳ ಮಾರಾಟದಿಂದ ಬೆಳೆ ಫಲ ನೀಡದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ನಕಲಿ ಬೀಜ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಯ ಕರ್ನಾಟಕ ರಕ್ಷಣಾ ಸೇನೆಯ ಜಿಲ್ಲಾ ಘಟಕದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಲಾಯಿತು.
ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿಗಳನ್ನು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸರಡಗಿ ಹಾಗೂ ರೈತರು ಮನವಿ ಪತ್ರ ಸಲ್ಲಿಸಿದರು.
ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ಎಂಟು ಜನ ರೈತರು ಹನುಮಾನದಾಸ ಭಗವಾನದಾಸ ಬೀಜ ವ್ಯಾಪಾರಿ ಮಾಲೀಕರಾದ ದೀಪಕ್ ಗಿಲ್ಡಾ ಬಳಿ ಹೆಸರು ಬಿತ್ತನೆ ಬೀಜ ಖರೀದಿ ಮಾಡಿದ್ದರು. ಇದೇ ಬೀಜಗಳನ್ನು ಸುಮಾರು 90 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.
ಇದನ್ನೂ ಓದಿ:ಸಿದ್ದರಾಮಯ್ಯ ಅಧಿಕಾರದಲ್ಲಿದ್ದರೆ ಎತ್ತುಗಳೆಲ್ಲವೂ ಕಸಾಯಿಖಾನೆ ಸೇರುತ್ತಿದ್ದವು: ನಳಿನ್ ಕಟೀಲ್
ಆದ್ದರಿಂದ ನಕಲಿ ಬೀಜದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಬೇಕು. ಜತೆಗೆ ನಷ್ಟಕ್ಕೆ ಒಳಗಾದ ರೈತರಿಗೆ ಕೂಡಲೇ 20 ಸಾವಿರ ರೂ. ಪರಿಹಾರ ಒದಗಿಸಬೇಕೆಂದು ಮನವಿ ಸಲ್ಲಿಸಲಾಯಿತು.
ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು, ಶ್ರೀನಿವಾಸ ಸರಡಗಿ ಗ್ರಾಮದ ರೈತ ಸಿದ್ದಪ್ಪ ಪೂಜಾರಿ ಕಂಟಿಕಾರ, ಮುಖಂಡರಾದ ಶಿವಾನಂದ ಕಿಳ್ಳಿ, ರಮೇಶ ಮೀಸಿ, ಮಲ್ಲಿಕಾರ್ಜುನ ಶ್ರೀಗನ್, ಲಕ್ಷ್ಮಣ ಪೂಜಾರಿ, ಶರಣಪ್ಪ ವಗ್ಯಾ ಇದ್ದರು