Advertisement

Karnataka Election 2023; ಕಾಂಗ್ರೆಸ್‌ ಅಭ್ಯರ್ಥಿಗಳ ನಕಲಿ ಪಟ್ಟಿ ಬಿಡುಗಡೆ

11:48 PM Apr 05, 2023 | Team Udayavani |

ಬೆಂಗಳೂರು: ಬಿಜೆಪಿಯ 100 ಮಂದಿ ಅಭ್ಯರ್ಥಿಗಳ ನಕಲಿ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಕಾಂಗ್ರೆಸ್‌ನ 50 ಕ್ಷೇತ್ರಗಳ ಅಭ್ಯರ್ಥಿಗಳ ನಕಲಿ ಪಟ್ಟಿಯೂ ಹರಿದಾಡಿದೆ. ಇದು ಕೈ ಪಡೆಯಲ್ಲಿ ಸ್ವಲ್ಪಕಾಲ ಸಂಚಲನ ಮೂಡಿಸಿತ್ತು. ನಕಲಿ ಎಂಬ ತಿಳಿದ ಬಳಿಕ ಆಕಾಂಕ್ಷಿಗಳು ನೆಮ್ಮದಿಯಾದರು.

Advertisement

ವಿಶೇಷವೆಂದರೆ ನಕಲಿ ಪಟ್ಟಿಯು ಬಹುತೇಕ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಂತಿದೆ. ಕಾಂಗ್ರೆಸ್‌ ಪಕ್ಷ ಅಧಿಕೃತವಾಗಿ ಮೊದಲ ಕಂತಿನಲ್ಲಿ 124 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.

ದಿಲ್ಲಿಯಲ್ಲಿ ಕಳೆದ 2 ದಿನಗಳಿಂದ ಬಾಕಿ 100 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸಾಕಷ್ಟು ಕಸರತ್ತು ನಡೆದಿರುವುದರ ನಡುವೆಯೇ ನಕಲಿ ಪಟ್ಟಿ ವೈರಲ್‌ ಆಗಿದೆ. ಈ ಸಂಬಂಧ ಕಾಂಗ್ರೆಸ್‌ ದೂರು ಸಲ್ಲಿಸಿದೆ.

ಈ ಪಟ್ಟಿಯಲ್ಲಿ ಇತ್ತೀಚೆಗೆ ಪಕ್ಷಕ್ಕೆ ಸೇರಿದ ಎನ್‌.ವೈ. ಗೋಪಾಲಕೃಷ್ಣರಿಗೆ ಮೊಳಕಾಲ್ಮೂರು, ಬಾಬುರಾವ್‌ ಚಿಂಚನಸೂರ್‌ಗೆ ಗುರುಮಿಠಲ್‌, ವೈ.ಎಸ್‌.ವಿ. ದತ್ತಗೆ ಕಡೂರು, ಸಿದ್ದರಾಮಯ್ಯ ಸದ್ಯ ಪ್ರತಿನಿಧಿಸುತ್ತಿರುವ ಬಾದಾಮಿಗೆ ಡಾ| ದೇವರಾಜ ಪಾಟೀಲ್‌ ಹೆಸರು ನಮೂದಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next