Advertisement

Ramanagara: “ವಂಡರ್‌ ಲಾ’ಗೆ 3 ಬಾಂಬ್‌ ಹಾಕಿ ಸ್ಫೋಟಿಸುತ್ತೇವೆ: ಹುಸಿ ಕರೆ

02:58 PM Aug 24, 2024 | Team Udayavani |

ರಾಮನಗರ: ತಾಲೂಕಿನ ಬಿಡದಿ ಬಳಿಯಿರುವ ವಂಡರ್‌ ಲಾ ಅಮ್ಯೂಸ್‌ ಮೆಂಟ್‌ ಪಾರ್ಕ್‌ ಗೆ ಹುಸಿ ಬಾಂಬ್‌ ಕರೆ ಬಂದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ಆ.3ರಂದು ಕಿಡಿಗೇಡಿಗಳಿಂದ ಹುಸಿ ಬಾಂಬ್‌ ಬೆದರಿಕೆ ಮೇಲ್‌ ಬಂದಿದ್ದು, ಉರ್ದು ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಬಂದಿರುವ ಮೇಲ್‌ ನಲ್ಲಿ ವಂಡರ್‌ ಲಾದಲ್ಲಿ 3 ಬಾಂಬ್‌ ಸ್ಫೋಟಿಸುತ್ತೇವೆ ಎಂದು ಬೆದರಿಕೆ ಹಾಕಲಾಗಿದೆ.

ಮುಸ್ಲಿಮರ ಮೇಲೆ ದಬ್ಟಾಳಿಕೆ ಮಾಡುವ ಕನ್ನಡದ ಕಾಫೀರರಿಗೆ ಶಿಕ್ಷೆಯಾಗಲಿದೆ ಎಂದು “ಮೊಹಮ್ಮದ್‌ ಇರ್ಫಾನ್‌ ಜಿಹಾದಿ’ ಎಂಬ ಮೇಲ್‌ ಐಡಿಯಿಂದ ವಂಡರ್‌ ಲಾ ಸಿಬ್ಬಂದಿಗೆ ಆ.3ರಂದು ಬಾಂಬ್‌ ಬೆದರಿಕೆ ಇ-ಮೇಲ್‌ ಸಂದೇಶ ಬಂದಿತ್ತು.

ಬೆದರಿಕೆ ಕರೆಯ ಹಿನ್ನೆಲೆಯಲ್ಲಿ ವಂಡರ್‌ ಲಾ ಪಾರ್ಕ್‌ ಅನ್ನು ಸಮಗ್ರವಾಗಿ ತಪಾಸಣೆ ನಡೆಸಿದ್ದು ಇದು ಹುಸಿ ಬಾಂಬ್‌ ಕರೆ ಎಂದು ಪೊಲೀಸರು ಖಚಿತ ಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next