Advertisement

ನಕಲಿ…ನಕಲಿ…ಇಲ್ಲಿ ಎಲ್ಲವೂ ನಕಲಿ… : ಅಸಲಿಯನ್ನೂ ಮರೆಮಾಚಿಸುವ ನಕಲಿ ಜಾಲ

11:30 AM Feb 22, 2021 | Team Udayavani |

ಅಸಲಿಯತ್ತು ಪತ್ತೆ ಮಾಡುವ ಎಷ್ಟೇ ಅತ್ಯಾಧುನಿಕ ತಂತ್ರಜ್ಞಾನ ಬಂದಿದ್ದರೂ ನಕಲಿಗಳ ಹಾವಳಿ ತಪ್ಪಿಲ್ಲ. ಅಸಲಿತನಕ್ಕೆ ಸವಾಲೊಡ್ಡುವ ನಕಲಿಗಳ ಜಾಲ ವ್ಯಾಪಕವಾಗಿದೆ. ನಕಲಿ ಅಂಕ ಪಟ್ಟಿ, ಛಾಪಾ ಕಾಗದ, ನೋಟು ಗಳು, ಚುನಾವಣಾ ಗುರುತಿನ ಚೀಟಿ, ಪಾನ್‌, ಆಧಾರ್‌ ಕಾರ್ಡ್‌, ಆರ್‌. ಸಿ. ಕಾರ್ಡ್‌, ಚಾಲನಾ ಪರವಾನಿಗೆ, ಆಸ್ತಿ ದಾಖ ಲೆ ಗಳು, ಆದಾಯ ತೆರಿಗೆ , ಸಿಬಿಐ ಮುಂತಾದ ಪ್ರತಿಷ್ಠಿತ ಸಂಸ್ಥೆಗ ಳ ಗುರುತಿನ ಚೀಟಿಗಳನ್ನು ನಕಲಿ ಸೃಷ್ಟಿಸಿ ಲಾಭ ಮಾಡಿಕೊಳ್ಳುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಅಂಥ ಕೆಲವು ಸಂಗತಿಗಳು ಈ ವಾರದ ಸುದ್ದಿಸುತ್ತಾಟದಲ್ಲಿ..

Advertisement

ಅಸಲಿ ಎಂದು ಪ್ರಾರಂಭವಾಯಿತೋ ಆಗಲೇ ನಕಲಿಯ ಅಸ್ಥಿತ್ವವೂ ಪರೋಕ್ಷವಾಗಿ ಸೃಷ್ಟಿಯಾಯಿತು. ಮಾಸ್ಟರ್‌ ಕಾರ್ಡ್‌ ನಿಂದ ಹಿಡಿದು ಐಡಿ ಕಾರ್ಡ್‌ವರೆಗೆ, ಶೋರೂಂ ವಸ್ತುವಿನಿಂದ ಹಿಡಿದು ಬ್ರಾಂಡೆಡ್‌ ಮೆಟಿರಿಯಲ್‌ ವರೆಗೆ ನಕಲಿ ಜಾಲ ಆವರಿಸಿದೆ. ನಕಲಿ ದಂಧೆ ತಡೆಯಲು ಪೊಲೀ ಸರ ಪ್ರಹಾರ ನಿರಂತವಾಗಿದ್ದರೂ, ಬ್ರೇಕ್‌ ಹಾಕಲು ಸಾಧ್ಯ ವಾಗಿಲ್ಲ. ಈಗಲೂ ಈ ದಂಧೆಗಳು ಅವ್ಯಾಹತವಾಗಿದೆ.

ಎರಡು ದಶಕಗಳ ಹಿಂದೆ ನಡೆದ ನಕಲಿ ಛಾಪಾ ಕಾಗದ ಹಗರಣ ಬೆಳಕಿಗೆ ಬಂದಾಗ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. 2020ರಲ್ಲಿ ಅದೇ ಮಾದರಿಯ ಛಾಪಾ ಕಾಗದ ಹಗರಣ ಬೆಂಗಳೂರಿನಲ್ಲೇ ಕಾಣಿಸಿಕೊಂಡಿದ್ದು, ನಗರದಲ್ಲಿ ಆತಂಕ ಸೃಷ್ಟಿಸಿದೆ. ಇನ್ನು 2017ರಲ್ಲಿ 30 ರಾಜ್ಯಗಳ ವಿವಿಧ ವಿವಿಗಳಲ್ಲಿ ನಕಲಿ ಅಂಕಪಟ್ಟಿ ಹಗರಣ, 2018ರಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದ ನಕಲಿ ಗುರುತಿನ ಚೀಟಿ ದಂಧೆ ಸೇರಿದಂತೆ ಹಲವು ಪ್ರಕರಣಗಳು ವ್ಯವಸ್ಥೆಗೆ ಮಾರಕವಾಗಿವೆ

ನಕಲಿ ಖಾತೆಗಳ ಸೃಷ್ಟಿ: ಸರ್ಕಾರಿ ಅಧಿಕಾರಿಗಳಿಂದ ಇನ್ಸ್‌ಪೆಕ್ಟರ್‌ ವರೆಗೆ ವಿವಿಧ ಅಧಿಕಾರಿಗಳ ಹೆಸರಲ್ಲಿ ಫೇಸ್‌ ಬು ಕ್‌ ನಲ್ಲಿ ನಕಲಿ ಖಾತೆ ತೆರೆದು, ತುರ್ತು ಸಂದರ್ಭದ ನೆಪ ವೊಡ್ಡಿ ಸಾರ್ವಜನಿಕರಿಂದ ಹಣ ಸುಲಿಗೆ ಮಾಡುತ್ತಿದ್ದ ರಾಜ ಸ್ಥಾನ ಮೂಲದ ನಾಲ್ವರು ಆರೋಪಿಗಳನ್ನು ಸಿಐಡಿ ಸೈಬರ್‌ ಕ್ರೈಂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪೊಲೀಸ್‌ ಇಲಾಖೆ ಹೆಸರಲ್ಲಿ ಎಫ್ಬಿ ಇನ್‌ ಬಾಕ್ಸ್‌ನಲ್ಲಿ ಚಾಟ್‌ ಮಾಡಿ ಹಣ ಪಡೆಯುತ್ತಿದ್ದರು. ಅಷ್ಟೇ ಅಲ್ಲದೆ, ಇತ್ತೀಚೆಗೆ ಮುಖ್ಯ ಮಂತ್ರಿ ಗಳು, ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹಾಗೂ ಸರ್ಕಾರದ ಸಚಿವರು, ಉನ್ನತ ಹುದ್ದೆಯಲ್ಲಿರುವ ಐಎ ಎಸ್‌ ಅಧಿಕಾರಿ ಗಳ ಹೆಸರಿನಲ್ಲೂ ಎಫ್ಬಿ ಅಕೌಂಟ್‌ ರಚಿಸಿದ್ದು ಪತ್ತೆಯಾಗಿತ್ತು.

ಡೂಪ್ಲಿಕೇಟ್‌ ಆಧಾರ್‌,  ಪ್ಯಾನ್‌ಕಾರ್ಡ್‌ :

Advertisement

ರಾಜ್ಯ, ಕೇಂದ್ರ ಸರ್ಕಾ ರದ ಮೋನೋ ಗ್ರಾಮ್‌ ಬಳಸಿ ನಕಲಿ ಆಧಾರ್‌ , ಪ್ಯಾನ್‌, ಚುನಾವಣಾ ಗುರುತಿನ ಚೀಟಿ, ಆರ್‌.ಸಿ.ಕಾ ರ್ಡ್‌ಗಳನ್ನು ತಯಾರಿಸಿ ಸರ್ಕಾ ರಕ್ಕೆ ವಂಚಿಸುತ್ತಿದ್ದ ಹತ್ತು ಮಂದಿ ಸಿಸಿಬಿ ಬಲೆಗೆ ಬಿದ್ದಿದ್ದರು. ಪ್ರಕರಣದ ಕಿಂಗ್‌ ಪಿನ್‌ ಕನಕಪುರ ರಸ್ತೆ ಗುಬ್ಬಲಾಳ ಗ್ರಾಮದ ಕಮಲೇಶ ಕುಮಾರ್‌ ಭವಾಲಿಯಾನಿಂದ ಹೆಸರು ಮುದ್ರಿಸದೆ ಇರುವ 28 ಸಾವಿರ ಚುನಾವಣಾ ಗುರುತಿನ ಚೀಟಿ, ಒಂಭ ತ್ತು ಸಾವಿರ ಆಧಾರ್‌ಕಾರ್ಡ್‌, ಪಾನ್‌ಕಾರ್ಡ್‌, 12,200 ಇತರ ನಕಲಿ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು.

ಫೇಕ್‌ ಜಾಹೀರಾತು :

ಎಲ್ಲವೂ ಆನ್‌ಲೈನ್‌ ಆದ ಮೇಲೆ ನಕಲಿ ಜಾಹೀರಾತುಗಳ ದಂಧೆ ದುಪ್ಪಟ್ಟಾಗಿದೆ. ಜನರು ನೋಂದಣಿ ಸಂಖ್ಯೆಗೆ ಕರೆ ಮಾಡಿ ಹಣ ಕಳೆದುಕೊಂಡಿದ್ದಾರೆ. ಬಾಲಿವುಡ್‌, ಹಾಲಿವುಡ್‌, ಸ್ಯಾಂಡಲ್‌ ವುಡ್‌ ನಟ, ನಟಿಯರು ನೀಡುವ ಜಾಹೀರಾತು, ಫೈನಾನ್ಸ್‌ ಕಂಪನಿಗಳ ಜಾಹಿರಾತುಗಳು, ಪತ್ರಿ ಕೆ, ಸಾಮಾಜಿಕ ಜಾಲತಾಣದ ಜಾಹೀರಾತುಗಳನ್ನು ಗಮನಿಸಿ ಮುಗಿಬಿದ್ದು ಮೋಸ ಹೋಗುತ್ತಿದ್ದಾರೆ. ಇತ್ತೀಚೆಗೆ ಶೇಷಾದ್ರಿಪುರ ಠಾಣಾ ವ್ಯಾಪ್ತಿಯ ಬಾಲಿವುಡ್‌ ನಟ ಪಾಲ್ಗೊಂಡಿದ್ದ ಜಾಹರಾತು ಕಾರ್ಯಕ್ರಮ ಕಂಡು ಲಕ್ಷಾಂತರ ಹಣ ಹೂಡಿಕೆ ಮಾಡಿ ಖಾಸಗಿ ಕಂಪನಿ ಉದ್ಯೋಗಿ ಯೊಬ್ಬರು ವಂಚನೆಗೊಳಗಾಗಿದ್ದ ರು.

ನಕಲಿ ಡಿಡಿ ಸೃಷ್ಟಿ  :

ನಕಲಿ ಡಿಡಿಗಳನ್ನು ಸೃಷ್ಟಿಸಿ ವಂಚನೆ ಮಾಡುತ್ತಿದ್ದ ದಂಪತಿ ಸೇರಿದಂತೆ ನಾಲ್ವರು ಬೇಗೂರು ಪೊಲೀಸರು ಬಲೆಗೆ ಬಿದ್ದಿದ್ದಾರೆ. ಆರೋಪಿಗಳಿಂದ 7.18 ಕೋಟಿ ರೂ. ಮೊತ್ತದ 25 ನಕಲಿ ಡಿಡಿಗಳು ಸೇರಿದಂತೆ ಡಿವೈಸ್‌ಗಳು ಪತ್ತೆಯಾಗಿದ್ದವು. ಖಾಸಗಿ ಬ್ಯಾಂಕುಗಳ ಅಸಲಿ ಡಿಡಿಯನ್ನು ತಂದು ನಕಲಿ ಡಿಡಿಗಳನ್ನು ತಯಾರಿಸಿ, ಬ್ಯಾಂಕ್‌ಗಳರಬ್ಬರ್‌ ಸ್ಟಾಂಪ್‌ ಹಾಗೂ ಸಿಬ್ಬಂದಿ ಸಹಿ ನಕಲು ಮಾಡಿ ಮಾರುತ್ತಿದ್ದರು.

ಫೇಕ್‌ ಆ್ಯಪ್‌ಗಳು :

ತಂತ್ರಜ್ಞಾನದ ಬಳಕೆ ಹೆಚ್ಚಳದಿಂದ ಇಂದು ಪ್ರತಿಯೊಂದಕ್ಕೂ ಆ್ಯಪ್‌ಗಳು ಹುಟ್ಟಿಕೊಂಡಿವೆ. ಅಂತಹ ಕೆಲವು ನಕಲಿ ಆ್ಯಪ್‌ ಜನರ ನಿತ್ಯ ವ್ಯವಹಾರಕ್ಕೆ ತೊಡಕಾಗಿವೆ. ವ್ಯಾಪಾರ-ವಹಿ ವಾಟು, ಉದ್ಯೋಗ, ಗೇಮ್‌ ಆ್ಯಪ್‌ ಗಳು, ಡೇಟಿಂಗ್‌ ಆ್ಯಪ್‌ ಗಳ ಮೂಲಕವು ಸಾವಿ ರಾರು ರೂ. ಕಳೆದುಕೊಳ್ಳುತ್ತಿದ್ದಾರೆ. ಪೊಲೀಸ್‌ ಮೂಲಗಳ ಪ್ರಕಾರ ಡೇಟಿಂಗ್‌ ಆ್ಯಪ್‌ ಗಳ ಮೂಕವೇ ಮಹಿಳೆಯರು, ಪುರುಷರು ಹಣ ಕಳೆದುಕೊಳ್ಳುವುದರ ಜತೆ ತಮ್ಮ ವೈಯಕ್ತಿಕ ಜೀವನ್ನು ಹಾಳು ಮಾಡಿ ಕೊಳ್ಳುತ್ತಿದ್ದಾರೆ. ಇತ್ತೀ ಚೆಗೆ ಕೊರೊನಾ ಲಸಿಕೆ ಕುರಿತು ಆ್ಯಪ್‌ ಮೂಲಕ ಲಸಿಕೆ ಸಿಗುತ್ತದೆ ಎಂಬ ಸಂದೇಶ ವೈರಲ್‌ ಆಗಿತ್ತು.

ಫೇಕ್‌ ಎಲೆಕ್ಷನ್‌ ಐಡಿ :

2018ರಲ್ಲಿ ರಾಜಾ ರಾ ಜೇ ಶ್ವರಿ ನಗರ ವಿಧಾನಸಭಾ ಕ್ಷೇತ್ರ ದ ಜಾಲಹಳ್ಳಿಯ ಅಪಾರ್ಟ್‌ಮೆಂಟ್‌ ವೊಂದ ರಲ್ಲಿ ಕೆಲ ವ್ಯಕ್ತಿಗಳು ನಕಲಿ ಚುನಾವಣಾ ಗುರುತಿನ ಚೀಟಿ ಗಳನ್ನು ತಯಾರಿಸುತ್ತಿದ್ದರು. ಪೊಲೀಸರು ದಾಳಿ ನಡೆ ಸಿದಾ ಗ 9 ಸಾವಿರ ನಕಲಿ ಚುನಾವಣಾ ಗುರುತಿನ ಚೀಟಿಗಳು ಪತ್ತೆಯಾಗಿದ್ದವು. ಜತೆಗೆ ಸಾರ್ವಜನಿಕರ ಹೊಸ, ಹಳೇ ಗುರುತಿನ ಚೀಟಿ, ದಾಖಲೆಗಳು ಪತ್ತೆಯಾಗಿದ್ದವು. ಈ ಕುರಿತು ಜಾಲಹ ಳ್ಳಿ ಠಾಣೆ ಯಲ್ಲಿ ಕಾಂಗ್ರೆಸ್‌ ಅಗಿನ ಅಭ್ಯರ್ಥಿ ಆರ್‌. ಮುನಿರತ್ನ ವಿರುದ್ಧ ಪ್ರಕರಣ ದಾಖಲಾಗಿತ್ತು. ಇತ್ತೀ ಚೆಗೆ ಪೊಲೀಸರು, ವಕೀಲರು, ಪತ್ರಕರ್ತರ ನಕಲಿ ಗುರುತಿನ ಚೀಟಿಗಳನ್ನು ಪಡೆದು ಸಾರ್ವಜನಿಕರಿಗೆ ವಂಚಿಸಿರುವ ಪ್ರಕರಣಗಳು ಅಧಿಕವಾಗುತ್ತಿವೆ. ಆಗ್ನೇಯ ಮತ್ತು ಉತ್ತರ ವಿಭಾಗದ ಪೊಲೀ ಸರು ನಕಲಿ ಐಡಿ ಕಾರ್ಡ್‌ ಮೂಲಕ ಸಾರ್ವ ಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದರು.

ನಕಲಿ ನಿವೇಶನ ದಾಖಲೆಗಳು :  ರಿಯಲ್‌ ಎಸ್ಟೇಟ್‌ನಲ್ಲಿ ನಕಲಿ ದಾಖಲೆಗಳ ಹಾವಳಿ ಅಧಿಕವಾಗಿದೆ. ಅಲ್ಲದೆ, ಬಿಡಿಎ ಮತ್ತು ಬಿಬಿಎಂಪಿಯಲ್ಲಿರುವ ಅಧಿಕಾ ರಿಗಳೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಧ್ಯವರ್ತಿಗಳಿಗೆ ಕೊಟ್ಟು ಸರ್ಕಾರದ ಬೊಕ್ಕ ಸಕ್ಕೆ ಕೋಟ್ಯಂತರ ರೂ. ವಂಚಿಸುತ್ತಿದ್ದರು. ಇತ್ತೀ ಚೆಗೆ ಕೇಂದ್ರ ವಿಭಾಗದ ಪೊಲೀಸರು ಬಿಡಿಎ ನಕಲಿ ಸಿಡಿಆರ್‌ ಸಿದ್ದಪಡಿಸಿದ ಮಧ್ಯವರ್ತಿಗಳಿಗೆ ಕೊಟ್ಟಿದ್ದ ಆರೋಪದ ಮೇಲೆ ನಾಲ್ವರು ಸಹಾಯಕ ಎಂಜಿನಿಯರ್‌ ಗಳನ್ನು ಬಂಧಿಸಲಾಗಿತ್ತು.

ನಕಲಿ ಛಾಪಾ ಕಾಗದ ಹಗರಣ :

ನಕಲಿ ಛಾಪಾಕಾಗದ ಹಗರಣ ಇತ್ತೀಚೆಗೆ ಬೆಂಗಳೂರಿನಲ್ಲಿ ಪತ್ತೆಯಾಗಿತ್ತು. ಪ್ರಮುಖ ಆರೋಪಿ ವಿವೇಕನಗರ ನಿವಾಸಿ ಹಸೈನ್‌ ಮೋದಿ ಬಾಬು ಅಲಿಯಾಸ್‌ ಛೋಟಾ ತೆಲಗಿ ಸೇರಿ ನಾಲ್ವರನ್ನು ಬಂಧಿಸಲಾಗಿತ್ತು. ಅವ ರಿಂದ 2.71 ಕೋಟಿ ರೂ. ಮೌಲ್ಯದ ನಕಲಿ ಛಾಪಾಕಾಗದ ವಶಪಡಿಸಿ ಕೊಳ್ಳಲಾಗಿತ್ತು. ನಾಲ್ವರು ಆರೋಪಿಗಳು 8 ವರ್ಷಗಳಿಂದ ಮದ್ಯವರ್ತಿಗಳಾಗಿ ಕೆಲಸ ಮಾಡಿಕೊಂಡು ಬೃಹತ್‌ ಹಗರಣಕ್ಕೆ ಕಾರಣವಾಗಿದ್ದರು.

ಕಳಪೆ ಸ್ಯಾನಿಟೈ ಸರ್‌, ನಕಲಿ ಮಾಸ್ಕ್, :

ಕೋವಿಡ್ ಸಂದರ್ಭ ವನೇ ದುರ್ಬಳಕೆ ಮಾಡಿಕೊಂಡು ಕೆಲ ಕಂಪನಿಗಳು ನಕಲಿ ಸ್ಯಾನಿಟೈಸರ್‌, ನಕಲಿ ಮಾಸ್ಕ್ ಗಳನ್ನು ಮಾರಾಟ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ದುಷ್ಪರಿಣಾಮದ ಕುರಿತು ಅಳಲು ತೊಡಿಕೊಂಡಿದ್ದರು. ಕ್ರಮವಹಿಸಲು ಪೊಲೀಸರಿಗೆ ಮನವಿ ಮಾಡಿದ್ದರು. ಈ ಮಾಹಿತಿ ಪಡೆದ ಸಿಸಿಬಿ ಪೊಲಸರು ಕೆಲ ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಸ್ಯಾನಿಟೈಸರ್‌ ಮತ್ತು ಮಾಸ್ಕ್ ಗಳನ್ನು ವಶಕ್ಕೆ ಪಡೆದಿದ್ದರು.

ನಕಲಿ ಉಡುಗೆ, ಕಂಪ್ಯೂಟರ್‌ :

ನಗರದಲ್ಲಿ ಬ್ರ್ಯಾಂಡೆ ಡ್‌ ಕಂಪನಿಯ ಉಡುಗೆ, ವಾಚ್‌ , ಪರ್ಫ್ಯೂಮ್‌ನ ನಕಲಿ ದಂಧೆ ಮೊದ ಲಿನಿಂದಲೂ ಇದೆ. ಪದೇ ಪದೆ ಪೊಲೀಸರು ದಾಳಿ ನಡೆ ಸುತ್ತಿದ್ದರೂ ಸಂಪೂ ರ್ಣ ತಡೆ ಸಾಧ್ಯವಾಗಿಲ್ಲ. ಅಲ್ಲದೆ, ನಿತ್ಯ ಬಳಕೆ ವಸ್ತುಗಳಿಂದ ಕಂಪ್ಯೂಟರ್‌, ಸಾಫ್ಟ್ ವೇರ್‌ಗ ಳು, ಎಲೆಕ್ಟ್ರಾನಿಕ್‌ ವಸ್ತುಗಳೂ ಮಾರುಕಟ್ಟೆಯಲ್ಲಿ ನಕಲಿ- ಅಸಲಿ ಗುರುತಿಸದಂಥ ಸ್ಥಿತಿ ನಿರ್ಮಾಣವಾಗಿದೆ.

ಪೂರ್ಣ ಗೊಳ್ಳದ ತನಿಖೆಗಳು :

ನಕಲಿ ವಸ್ತು ಗಳು, ದಾಖಲೆಗಳ ಪತ್ತೆ ಪ್ರಕರಣಗಳು ಬಹುತೇಕ ಪೂರ್ಣ ಪ್ರ ಮಾಣದಲ್ಲಿ ತನಿಖೆ ನಡೆಯುವುದಿಲ್ಲ. ಕೆಲ ವೊಂದು ಪ್ರಕರಣದಲ್ಲಿ ರಾಜಕೀಯ ಮತ್ತು ಹಿರಿಯ ಅಧಿಕಾರಿಗಳ ಒತ್ತಡವಿದ್ದರೆ, ಕೆಲ ಪ್ರಕರಣ ಗಳಲ್ಲಿ ತನಿಖಾಧಿಕಾರಿಗಳು ಆರಂಭ ದಲ್ಲಿ ತೋರುವ ಉತ್ಸಾಹನಂತರ ಇರುವುದಿಲ್ಲ. ಉದಾಹರಣೆಗೆ ನಕಲಿ ಅಂಕ ಪಟ್ಟಿ, ನಕಲಿ ನಿವೇಶನಗಳ ದಾಖಲೆ, ಜಾಹೀರಾತು, ಆ್ಯಪ್‌ ಗಳು ಹೀಗೆ ಸಾಕಷ್ಟು ಪ್ರಕರಣಗಳು ಪೂರ್ಣಗೊಳ್ಳುವುದೇ ಇಲ್ಲ ಎಂದು ಮೂಲಗಳು ತಿಳಿಸಿವೆ.

 ಖೋಟಾ ನೋಟು ಗಳು ಪತ್ತೆ :

ಖೋಟಾ ನೋಟುಗಳ ದಂಧೆ ರಾಜ್ಯವಲ್ಲದೆ, ದೇಶ ವಿದೇಶಕ್ಕೂ ಹಬ್ಬಿದೆ. ನೋಟು ಅಮಾನ್ಯೀಕರಣದ ಬಳಿ ಖೋಟಾ ದಂಧೆ ಹೆಚ್ಚಾಗಿದೆ. ನೋಟು ಬದಲಾವಣೆ ದಂಧೆಯೂ ಚುರುಕಾಯಿತು. ಈ ಮಧ್ಯೆ ಹೊಸ ಎರಡು ಸಾವಿರ, 100, 200 ರೂ. ಮುಖ ಬೆಲೆ ಯ ನೋಟು ಗಳನ್ನು ನಕಲಿ ಮಾಡಿ ಮಾರಾಟ ಮಾಡುವ ಜಾಲವು ಸಕ್ರಿ ಯ ಲಾ ಗಿತ್ತು. ಈ ಬೆನ್ನಲ್ಲೇ ನಗರದಲ್ಲಿ ಹತ್ತಾರು ಪ್ರಕರಣ ದಾಖಲಾದವು. ಖೋಟಾ ನೋಟು ಪ್ರಿಂಟ್‌ ಸಂಬಂಧಿತ ಪರಿಕರಗಳನ್ನು ವಶಕ್ಕೆ ಪಡೆಯಲಾಗಿತ್ತು. ಅಲ್ಲದೆ, ಇತ್ತೀಚೆಗೆ ಚಿಕ್ಕಬಳ್ಳಾ ಪುರ ಜಿಲ್ಲೆಯ ಗೌರಿಬಿದನೂರಿನ ಮೂವರು ಆರೋ ಪಿ ಗಳನ್ನು ಬಂಧಿಸಿ ಲಕ್ಷಾಂತರ ರೂ. ನಕಲಿ ನೋಟು ಗಳನ್ನು ವಶಪಡಿಸಿಕೊಂಡಿದ್ದಾರೆ.

‌ಕಲಿ ದಾಖಲೆಗಳು, ನಕಲಿ  ವಸ್ತುಗಳ ಮಾರಾಟ ಸಂಬಂಧ ಸಂಘ ಟಿತವಾಗಿ ನಡೆ ಯುತ್ತಿರುವುದು ಕಂಡು ಬಂದಲ್ಲಿ, ಸಿಸಿಬಿಯ ವಿಶೇಷ ತನಿಖಾ ಘಟಕ ತನಿಖೆ ನಡೆಸುತ್ತದೆ. ಕಮಲ್‌ ಪಂತ್‌, ಬೆಂಗಳೂರು ಪೊಲೀಸ್‌ ಆಯುಕ್ತರು

 

ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next