Advertisement

ಡೀಸಿ ಹೆಸರಲ್ಲಿ ನಕಲಿ ಇ-ಮೇಲ್ ಖಾತೆ

04:20 PM Oct 09, 2020 | Suhan S |

ರಾಮನಗರ: ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ನಕಲಿ ಐಡಿಯಿಂದ ಸೃಜಿಸಿ ಇ-ಮೇಲ್‌ ಕಳುಹಿಸುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಂ.ಎಸ್‌. ಅರ್ಚನಾ ಎಚ್ಚರಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಹೆಸರಿನಲ್ಲಿ ಚೀಫ್ಎಕ್ಸಿಕ್ಯೂಟಿವ್‌ 00124 ಅಟ್‌ ಜಿಮೇಲ್‌.ಕಾಂ ಎಂಬ ನಕಲಿ ಇಮೇಲ್ ಖಾತೆ ತೆರೆದು ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳಿಗೆ ಅ.8ರ ಗುರುವಾರ ತಪ್ಪು ಸಂದೇಶಗಳನ್ನು ಕಳುಹಿಸಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಂಥವರ ಮೇಲೆ ಕಠಿಣ ಕ್ರಮ ಜರುಗಿಸುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಧಿಕೃತ ಈ ಮೇಲ್‌ ಐಡಿ: ಜಿಲ್ಲಾಧಿಕಾರಿಯವರು ತಮ್ಮ ಅಧಿಕೃತ ಇ-ಮೇಲ್‌ ಐಡಿ ಡಿಇಒ.ರಾಮನಗರ ಅಟ್‌ ಜಿಮೇಲ್‌.ಕಾಂನಿಂದ ಇ -ಮೇಲ್  ಕಳಿಸಲಾಗುತ್ತದೆ. ಸದರಿ ಐಡಿಯಿಂದ ಬರುವ ಸಂದೇಶಗಳನ್ನು ಹೊರತುಪಡಿಸಿ ಇನ್ನಾವುದೇ ಐಡಿಗಳಿಂದ ಬರುವ ಬರುವಂತಹ ಸಂದೇಶ, ಮಾಹಿತಿಗಳನ್ನು ಪರಿಗಣಿಸಬಾರದು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಕೋರಿದ್ದು, ಸಾರ್ವಜನಿಕರ ಗಮನಕ್ಕೂ ತಂದಿದ್ದಾರೆ. ಜಿಲ್ಲಾಧಿಕಾರಿಗಳ ಅಧಿಕೃತ ಇ-ಮೇಲ್ ಐಡಿ ಹೊರತುಪಡಿಸಿ ಇನ್ನಾವುದೇ ನಕಲಿ ಅಥವಾ ಅನಧಿಕೃತ ಐಡಿಗಳಿಂದ ಸಂದೇಶ ಇಲ್ಲವೇ ಮಾಹಿತಿ ಬಂದಲ್ಲಿ ಆ ಬಗ್ಗೆ ಕೂಡಲೇ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಹೆಸರು ಬಳಸಿಕೊಂಡು ನಕಲಿ ಇ-ಮೇಲ್ ಖಾತೆ ತೆರೆಯುವುದುಇಲ್ಲವೇ ಸಾಮಾಜಿಕ ಜಾಲತಾಣದಲ್ಲಿ ತಪ್ಪು  ಸಂದೇಶ ರವಾನಿಸುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮೀಸಲಾತಿ ಪ್ರಕಟ :

Advertisement

ರಾಮನಗರ: ಜಿಲ್ಲೆಯ ಮೂರು ನಗರಸಭೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಹೊಸದಾಗಿ ಮೀಸಲಾತಿ ನಿಗದಿಗೊಳಿಸಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎ.ವಿಜಯ್‌ಕುಮಾರ್‌ ಆದೇಶ ಹೊರೆಡಿಸಿದ್ದಾರೆ. ಆದೇಶದ ಪ್ರಕಾರ ಚನ್ನಪಟ್ಟಣನಗರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿಗೆ ಮತ್ತು ಉಪಾಧ್ಯಕ್ಷ ಸ್ಥಾನಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.ಕನಕಪುರ ನಗರಸಭೆಯ ಅಧ್ಯಕ್ಷ ಸ್ಥಾನ ಬಿಸಿಎ ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ವರ್ಗಕ್ಕೆ ಮಿಸಲಾಗಿದೆ. ರಾಮನಗರ ನಗರಸಭೆಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂಉಪಾಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿಗೆ ಮೀಸಲುಗೊಳಿಸಿ ಆದೇಶ ಹೊರೆಡಿಸಿದ್ದಾರೆ.

ನಗರಸಭೆ, ಪುರಸಭೆ ಮತ್ತು ಪಟ್ಟಣಪಂಚಾಯ್ತಿಗಳ ಅಧ್ಯಕ್ಷ ಉಪಾಧ್ಯಕ್ಷಸ್ಥಾನಗಳಿಗೆ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಮಂತ್ರಿ ಮಂಡಲದಲ್ಲಿಪ್ರಸ್ತಾಪವಾಗಿ 11.3.2020ರ ಮೀಸಲಾತಿ ಪ್ರಕಟಣೆಯನ್ನು ಹಿಂದಕ್ಕೆ ಪಡೆದುಕೊಂಡು ಮಾರ್ಗದರ್ಶಿ ಸೂಚನೆಗಳನ್ನು ಕಳೆದಸೆಪ್ಟಂಬರ್‌ನಲ್ಲಿ ಸರ್ಕಾರ ಹೊರೆಡಿಸಿತ್ತು. 11ನೇ ಸೆಪ್ಟಂಬರ್‌ 2020ರ ಮಾರ್ಗಸೂ ಚಿಗಳ ಅನ್ವಯ ನಗರಸಭೆಗಳ 9ನೇ ಅವಧಿಗೆ ಹೊಸ ಮೀಸಲಾತಿಯನ್ನುಕಲ್ಪಿಸಲಾಗಿದೆ. ಕರ್ನಾಟಕ ಮುನಿಸಿಪಾಲಿಟಿಸ್‌ (ಅಧ್ಯಕ್ಷ, ಉಪಾಧ್ಯಕ) ಚÒ ‌ುನಾವಣೆ (ಪರಿಷ್ಕೃತ)ನಿಯಮ ಮತ್ತು ಮಾರ್ಗದರ್ಶನಗಳ ಅನ್ವಯ ಮೀಸಲಾತಿ ಆದೇಶ ಹೊರೆಡಿಸಿದೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next