Advertisement
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ ಪೂರ್ವಭಾವಿಯಾಗಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಭಕ್ತರ ಸಭೆಯಲ್ಲಿ ಅವರು ಮಾತನಾಡಿದರು. ಜಾತ್ರೆಯಲ್ಲಿ ಎಲ್ಲರಿಗೂ ಸೇವೆ ಸಲ್ಲಿಸಲು ಅವಕಾಶ ನೀಡಬೇಕು. ವ್ಯವಸ್ಥಾಪನ ಸಮಿತಿಯವರು ವಿವಿಧ ವಿಭಾಗ ಮಾಡಿ ಜವಾಬ್ದಾರಿ ಹಂಚಿಕೊಂಡಿದ್ದು ಅದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮಠಂದೂರು ತಿಳಿಸಿದರು.
Related Articles
Advertisement
ಹೂವಿನ ಅಲಂಕಾರ
ದೇವಸ್ಥಾನವನ್ನು ಹೂಗಳಿಂದ ಅಲಂಕಾರ ಮಾಡಲಾಗುವುದು. ವಿಷು ಹಬ್ಬದ ದಿನ ಹಿಂಗಾರದಿಂದ ಅಲಂಕಾರ ಮಾಡುವ ಯೋಜನೆ ಇದೆ ಎಂದು ವ್ಯವ ಸ್ಥಾಪನ ಸಮಿತಿ ಸದಸ್ಯೆ ಸುಧಾ ಎಸ್.ರಾವ್ ತಿಳಿಸಿದರು.
ಮೂರು ದಿನ ವಿಶೇಷ ಕಾರ್ಯಕ್ರಮ
ಸಾಂಸ್ಕೃತಿಕ ಕಾರ್ಯಕ್ರಮಗಳು ಸೇವಾ ರೂಪದಲ್ಲಿ ನಡೆಯಲಿದೆ. ಎ. 11ರಂದು ಸಂಸ್ಕಾರ ಭಾರತಿಯಿಂದ ಜಾಗೋ ಭಾರತ್, ಎ.14ರಂದು ಪಟ್ಲ ಪೌಂಡೇಶನ್‌ನ ಪ್ರಾಯೋಜಕತ್ವದಲ್ಲಿ ವಿಶೇಷ ಕಾರ್ಯಕ್ರಮ ಹಾಗೂ ಎ. 16ರಂದು ಶಾಸಕರ ನೇತೃತ್ವದಲ್ಲಿ ಸ್ವರ-ಸಂಗಮ ನಡೆಯಲಿದೆ ಎಂದು ಕೇಶವ ಪ್ರಸಾದ್ ತಿಳಿಸಿದರು.
ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಸ್ವತ್ಛತೆ, ಕುದ್ರೋಳಿ ಮಾದರಿಯಲ್ಲಿ ದೀಪಾಲಂಕಾರ ಮಾಡುವ ಬಗ್ಗೆ ವರ್ತಕರ ಸಭೆ ನಡೆಸಲಾಗುವುದು ಎಂದರು. ಕಿಟ್ಟಣ್ಣ ಗೌಡ ಬಪ್ಪಳಿಗೆ, ರಾಧಾಕೃಷ್ಣ ನಂದಿಲ, ಮಾಜಿ ಮೊಕ್ತೇಸರ ನ್ಯಾಯವಾದಿ ಚಿದಾನಂದ ಬೈಲಾಡಿ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಧಾಕರ್ ರಾವ್ ಆರ್ಯಾಪು, ಆರ್.ಸಿ.ನಾರಾಯಣ, ಕಿಶೋರ್ ಕುಮಾರ್ ನೆಲ್ಲಿಕಟ್ಟೆ, ಗೋಪಾಲ್ ಎಂ.ಯು., ಡಾ|ರಾಜೇಶ್ ಬೆಜ್ಜಂಗಳ, ಸುದರ್ಶನ್, ಅಣ್ಣಪ್ಪ ಕಾರೆಕ್ಕಾಡು, ಶ್ಯಾಮಸುದರ್ಶನ, ನಯನಾ ರೈ, ಎ.ಜೆ.ರೈ, ಪ್ರಮೀತಾ ಸಿ.ಹಾಸ್ ಮೊದಲಾದವರು ವಿವಿಧ ಸಲಹೆ ನೀಡಿದರು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ವ್ಯವಸ್ಥಾಪನ ಸಮಿತಿ ಸದಸ್ಯೆ ವೀಣಾ ಬಿ.ಕೆ. ಉಪಸ್ಥಿತರಿದ್ದರು. ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ಉದ್ಯಮಿಗಳಾದ ದೇವಪ್ಪ ನೋಂಡ, ಸೀತಾರಾಮ ರೈ ಕೆದಂಬಾಡಿಗುತ್ತು, ಸುರೇಶ್ ಶೆಟ್ಟಿ, ರೋಹಿಣಿ ರಾಘವ ಆಚಾರ್ಯ, ರಾಧಾಕೃಷ್ಣ ನಾೖಕ್, ಸತೀಶ್ ನಾೖಕ್, ಹರಿಣಿ ಪುತ್ತೂರಾಯ, ಪದ್ಮಾ ಆಚಾರ್ಯ ಮತ್ತಿತರರಿದ್ದರು. ದೇವಸ್ಥಾನದ ಇಒ ನವೀನ್ ಭಂಡಾರಿ ಸ್ವಾಗತಿಸಿದರು.