Advertisement

ಜೀವನದ ಸವಾಲುಗಳನ್ನು ಎದುರಿಸಿದರೆ ಯಶಸ್ಸು ಸಾಧ್ಯ

04:25 PM Apr 04, 2018 | Team Udayavani |

ಮಧುಗಿರಿ: ಜೀವನದ ಸವಾಲುಗಳನ್ನು ಎದುರಿಸಿದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ತುಮಕೂರು ವಿವಿ ಅಧ್ಯಾಪಕರ ಸಂಘದ ಮಾಜಿ ಅಧ್ಯಕ್ಷ ಡಾ.ಜಿ.ತಿಪ್ಪೇಸ್ವಾಮಿ ಹೇಳಿದರು. ತಾಲೂಕಿನ ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಚಂದ್ರಭಾವಿ ಗ್ರಾಮದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪವನ್ನುದ್ದೇಶಿಸಿ ಮಾತನಾಡಿದರು.

Advertisement

ನಾಯಕತ್ವ ಗುಣ: ಆತ್ಮಶ್ರದ್ಧೆ, ಸೇವಾ ಮನೋಭಾವ, ನಾಯಕತ್ವಗುಣ ಕಲಿಸುವ ಪ್ರಾಯೋಗಿಕ ಶಿಕ್ಷಣ ನೀಡುವ
ಷಗಳಿದ್ದಂತೆ. ಮೌಲ್ಯಗಳನ್ನು ಬೋಧಿಸುವ ಬದಲಾಗಿ, ಅವುಗಳನ್ನು ಗ್ರಹಿಸುವ ಏಕಾಗ್ರತೆಯನ್ನು ಕಲಿಸಬೇಕು ಎಂದರು.

ಯುವಪೀಳಿಗೆಯಲ್ಲಿ ಅಂತಹ ಅಂತ:ಶಕ್ತಿ ನಿರ್ಮಿಸುವ, ಅವರಲ್ಲಿನ ಚೈತನ್ಯ ಬಡಿದೆಬ್ಬಿಸುವ ಕೌಶಲ್ಯ ಎನ್‌ಎಸ್‌ಎಸ್‌ಗಿದೆ ಆದ್ದರಿಂದ ಶಿಬಿರಾರ್ಥಿಗಳು ಸಾಮಾಜಿಕ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿ ಅರಿವಿನ ದೀಪ ಬೆಳಗಬೇಕೆಂದರು.

ಸೇವಾ ಮನೋಭಾವ: ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎನ್‌.ಮಹಾಲಿಂಗೇಶ್‌ ಮಾತನಾಡಿ, ಭಾರತದಂತಹ ಬೃಹತ್‌ ರಾಷ್ಟ್ರದಲ್ಲಿ ಎಲ್ಲರನ್ನೂ ಸೇವಾ ಮನೋಭಾವದಡಿ ಒಂದುಗೂಡಿಸಿದ ಯೋಜನೆಯೇ ಎನ್‌ಎಸ್‌ಎಸ್‌ ಎಂದರು. ವಿದ್ಯಾರ್ಥಿಗಳಲ್ಲಿ ನಿಸ್ವಾರ್ಥ ಸೇವಾ ಮನೋಭಾವವನ್ನು ಬಿತ್ತಿ ಬೆಳೆಸುವ ಬಹು ದೊಡ್ಡ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ ಎಂದರು.

ಅದ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಟಿ.ಎನ್‌.ನರಸಿಂಹಮೂರ್ತಿ ಮಾತನಾಡಿ, ಗಾಂಧೀಜಿಯವರ ಕನಸಿನ ಕೂಸಾದ ಎನ್‌ಎಸ್‌ಎಸ್‌ ನ್ನು 1969ರಲ್ಲಿ 37 ವಿಶ್ವವಿದ್ಯಾಲಯಗಳಲ್ಲಿ 40 ಸಾವಿರ ಸ್ವಯಂಸೇವಕರಿಂದ ಪ್ರಾರಂಭಿಸಿದ್ದು, 2016 ರಲ್ಲಿ ಭಾರತದಲ್ಲಿನ 391 ವಿಶ್ವವಿದ್ಯಾಲಯಗಳಲ್ಲಿ 29152 ಕಾಲೇಜುಗಳಲ್ಲಿ 39965 ಎನ್‌ಎಸ್‌ಎಸ್‌ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, 36 ಲಕ್ಷ ಸ್ವಯಂಸೇವಕರನ್ನು ಹೊಂದಿದ ಬೃಹತ್‌ ಸಮುದಾಯ ಸಹಭಾಗಿತ್ವವನ್ನು ಹೊಂದಿದೆ ಎಂದರು.

Advertisement

ಸಮಾರಂಭದಲ್ಲಿ ಉಪನ್ಯಾಸಕರಾದ ನಟರಾಜು, ಸತೀಶ್‌, ಅಶೋಕ್‌, ಸುರೇಶ್‌, ಸಹಶಿಬಿರಾಧಿಕಾರಿ ಮುನಿರಾಜು, ಹನುಮಂತರಾಯಪ್ಪ, ಶಿಬಿರಾಧಿಕಾರಿ ಮುನೀಂದ್ರಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next