Advertisement

ಮೂರ್ತಿ ದೇವನಹಳ್ಳಿ ಪುರಸಭೆ ನೂತನ ಅಧ್ಯಕ್ಷ

01:14 PM Dec 28, 2017 | |

ದೇವನಹಳ್ಳಿ: ನಿರೀಕ್ಷೆಯಂತೆ ಪುರಸಭೆಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷ ಸ್ಥಾನ ಪಾಲಾಗಿದೆ. ಕಾಂಗ್ರೆಸ್‌ ಪುರಸಭೆ ಸದಸ್ಯ 16ನೇ ವಾರ್ಡ್‌ನ ಎಂ.ಮೂರ್ತಿ ನೂತನ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ 2ನೇ ವಾರ್ಡ್‌ನ ಕಾಂಗ್ರೆಸಿನ ಆಶಾರಾಣಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

Advertisement

ಪುರಸಭೆಯಲ್ಲಿ 23 ಸದಸ್ಯ ಬಲ ಇದ್ದು, ಅದರಲ್ಲಿ ಕಾಂಗ್ರೆಸ್‌ 10, ಜೆಡಿಎಸ್‌ 9 ಸ್ಥಾನ ಹಾಗೂ 4 ಜನ ಪಕ್ಷೇತರರು ಆಯ್ಕೆಗೊಂಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ-ಎ ಮಹಿಳೆಗೆ ಮೀಸಲಾಗಿತ್ತು. 2ನೇ ಅವಧಿ ಇನ್ನುಳಿದ 15 ತಿಂಗಳ ಕಾಲ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 

ಚುನಾವಣೆಯಲ್ಲಿ 4 ಜನ ಸದಸ್ಯರು ಗೈರು ಹಾಜರಿಯಾಗಿದ್ದರು. ಅದರಲ್ಲಿ ಪಕ್ಷೇತರ ಸದಸ್ಯರಾದ ಲಕ್ಷ್ಮೀ, ದೇವರಾಜ್‌, ಕಾಂಗ್ರೆಸ್‌ನ ಬೇಕರಿ ಮಂಜುನಾಥ್‌, ಜೆಡಿಎಸ್‌ನ ಶಶಿಕುಮಾರ್‌ ಗೈರು ಹಾಜರಿಯಾಗಿದ್ದರು. 

ಕಾಂಗ್ರೆಸ್‌ಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ: ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ-ಎ ಮಹಿಳೆ ಮೀಸಲಾಗಿತ್ತಾದ್ದರೂ ಜೆಡಿಎಸ್‌ನಲ್ಲಿ ಹಿಂದುಳಿದ ವರ್ಗದ ಮಹಿಳೆ ಇಲ್ಲದ್ದರಿಂದ ಕಾಂಗ್ರೆಸ್‌ಗೆ ಉಪಾಧ್ಯಕ್ಷ ಸ್ಥಾನ ಒಲಿದಿದೆ. ಹೀಗಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ ಒಲಿದಿದೆ.

ಕಾಂಗ್ರೆಸ್‌ನಿಂದ ಎಂ.ಮೂರ್ತಿ ಒಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸಿನ ಆಶಾರಾಣಿ ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ ಎಂದು ಚುನಾವಣಾಧಿಕಾರಿ ಎಂ.ಸಿ.ನರಸಿಂಹಮೂರ್ತಿ ತಿಳಿಸಿದರು.

Advertisement

ಕಾಂಗ್ರೆಸ್‌ಗೆ ಒಲಿದ ಎರಡು ಸ್ಥಾನಗಳು: ಕಳೆದ 15 ತಿಂಗಳ ಹಿಂದೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮುಖಂಡರು ಒಟ್ಟಾಗಿ ಸೇರಿ ಎಲ್ಲರೂ ಒಮ್ಮತದಿಂದ ಚುನಾವಣೆ ನಡೆಸಿ ಇಡೀ ಇತಿಹಾಸದಲ್ಲಿಯೇ ಈ ರೀತಿ ಚುನಾವಣೆ ನಡೆಸಿ ಒಗ್ಗಟ್ಟಿನ ಪ್ರದರ್ಶನ ತೋರಿಸಿದರು. ಒಪ್ಪಂದದಂತೆ 14 ತಿಂಗಳು ಕಳೆಯುತ್ತಿದ್ದಂತೆ ಅಧ್ಯಕ್ಷರಾಗಿದ್ದ ಜೆಡಿಎಸ್‌ನ ನರಸಿಂಹಮೂರ್ತಿ ರಾಜೀನಾಮೆ ನೀಡಿದರು. ಕಾಂಗ್ರೆಸ್‌ ಉಪಾಧ್ಯಕ್ಷೆ ಪದ್ಮಾವತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಈಗ ಅಧ್ಯಕ್ಷ ಮತ್ತು ಉಪಾಧ್ಯಕ್ಷೆ ಸ್ಥಾನ ಕಾಂಗ್ರೆಸ್‌ಗೆ ಒಲಿದಿದೆ. ಕಸ ವಿಲೇವಾರಿಗೆ ಹೆಚ್ಚಿನ ಒತ್ತು: ನೂತನ ಅಧ್ಯಕ್ಷ ಎಂ. ಮೂರ್ತಿ ಮಾತನಾಡಿ, ಪಟ್ಟಣದ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಪಟ್ಟಣದಲ್ಲಿ ತ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ಕುಡಿಯುವ ನೀರು, ರಸ್ತೆ, ಸ್ವತ್ಛತೆಗೆ ಸೇರಿದಂತೆ ವಿವಿಧ ಸರ್ವಾಂಗೀಣ ಅಭಿವೃದ್ಧಿ ಶ್ರಮಿಸಲಾಗುವುದು. ಕಸದ ಜಾಗದ ಸಮಸ್ಯೆ ಇದ್ದು, ಕಸ ವಿಲೇವಾರಿಗೆ ಹೆಚ್ಚಿನ ಒತ್ತು ಕೊಡಲಾಗುವುದು. ಜನರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ಪುರಸಭೆಯಿಂದ ಜನರಿಗೆ ಆಗುವ ಕಚೇರಿ ಕೆಲಸಗಳು ತ್ವರಿತವಾಗಿ ಆಗುವಂತೆ ಆದ್ಯತೆ ಕೊಡಲಾಗುವುದು, ಸ್ವತ್ಛ ಭಾರತ್‌ ಇದ್ದು ಸ್ವತ್ಛತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದು. ತೆರಿಗೆ ವಸೂಲಾತಿಗೆ ಜನರಲ್ಲಿ ಜಾಗೃತಿ ಮೂಡಿಸಿ ಸ್ವಯಂ ಪ್ರೇರಿತರಾಗಿ ತೆರಿಗೆ ಕಟ್ಟುವಂತೆ ಮಾಡಲಾಗುವುದು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದರಿಂದ ಜಾಗತಿಕ ಮಟ್ಟದಲ್ಲಿ ರಾಜ್ಯ ಮತ್ತು ದೇಶದಲ್ಲಿ ದೇವನಹಳ್ಳಿ ಪುರಸಭೆಗೆ ಒಳ್ಳೆಯ ಹೆಸರು ಬರುವಂತೆ ಕಾರ್ಯಕ್ರಮ ರೂಪಿಸಲಾಗುವುದು. ಎಲ್ಲಾ ಸದಸ್ಯರು ಜೊತೆಗೂಡಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು. 

ಸರ್ವತೋಮುಖ ಅಭಿವೃದ್ಧಿ ಮಾಡಿ: ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ತಮ್ಮ ಅವಧಿಯಲ್ಲಿ ಎಲ್ಲಾ ಸದಸ್ಯರು ಉತ್ತಮ ಸಹಕಾರ ನೀಡಿದ್ದಾರೆ ಅವರನ್ನು ಅಭಿನಂದಿಸುತ್ತೇನೆ. ನೂತನ ಅಧ್ಯಕ್ಷರು ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಮಾಜಿ ಶಾಸಕ ಕೆ.ವೆಂಕಟಸ್ವಾಮಿ, ಮಾಜಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿ.ಜಗನ್ನಾಥ್‌,ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಾರುತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಚಂದ್ರಶೇಖರ್‌, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಗೋಪಾಲ್‌, ಸದಸ್ಯರಾದ ವೈಸಿ.ಸತೀಶ್‌ ಕುಮಾರ್‌, ಎನ್‌.ರಘು, ಜಿ.ಎನ್‌.ವೇಣುಗೋಪಾಲ್‌, ನರಸಿಂಹಮೂರ್ತಿ ಜಿ.ಎ.ರವೀಂದ್ರ, ಸೋಮಶೇಖರ್‌ ಬಾಬು, ಎಂ.ಕುಮಾರ್‌ ಗೋಪಾಲಕೃಷ್ಣ, ಎಂ. ನಾರಾಯಣಸ್ವಾಮಿ, ಶಾರದಮ್ಮ, ಗ್ರಾಯಿತ್ರಿ, ರತ್ನಮ್ಮ, ಪದ್ಮಾವತಿ, ಪುಷ್ಪಾ, ಶಾಂತಮ್ಮ, ಪುರಸಭೆ ಮುಖ್ಯಾಧಿಕಾರಿ ಎಸ್‌.ಅಂಬಿಕಾ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಕೆ.ಆರ್‌ .ನಾಗೇಶ್‌, ತಾಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷ ಆರ್‌. ಸುಮಂತ್‌, ಟೌನ್‌ ಕಾಂಗ್ರೆಸ್‌ ಅಧ್ಯಕ್ಷ ವೇಣುಗೋಪಾಲ್‌ ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next