ಗುಬ್ಬಿ: ಹಾಡಹಗಲೇ ದಲಿತ ಮುಖಂಡ ಜಿ.ಸಿ ನರಸಿಂಹಮೂರ್ತಿ (50)ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ವಾಗಿ ಹತ್ಯೆ ಮಾಡಿದ್ದಾರೆ.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಎದುರಿನ ಟೀ ಶಾಪ್ ಬಳಿ ಬುಧವಾರ ಘಟನೆ ನಡೆದಿದ್ದು,ಕುರಿಮೂರ್ತಿ ಎಂದು ಪರಿಚಿತರಾಗಿದ್ದ ನರಸಿಂಹಮೂರ್ತಿ ಜೆಡಿಎಸ್ ಕಾರ್ಯಕರತರಾಗಿದ್ದರು. ದಲಿತ ಮುಖಂಡರಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಆಗಿದ್ದರು.
ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತದೇಹವನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.