Advertisement
ಪುರಸಭೆ ಸ್ವತ್ಛತಾ ವಿಭಾಗದಲ್ಲಿ ಅನೇಕ ವರ್ಷಗಳಿಂದ ಸುಮಾರು 16 ಮಂದಿ ಪೌರಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದಾರೆ., ಇವರ ಹೊರಗುತ್ತಿಗೆ ಅವಧಿ ಕಳೆದ ಮಾ.31ಕ್ಕೆ ಕೊನೆಯಾಗಿದೆ. ಅದರೂ ಸರ್ಕಾರ ಇವರನ್ನು ನೇರ ನೇಮಕಾತಿ ಮೂಲಕ ನೇಮಕ ಮಾಡಿಕೊಳ್ಳಲಾಗುವುದು, ಅಲ್ಲಿಯವರೆಗೂ ಇವರನ್ನೇ ಮುಂದುವರಿಸುವಂತೆ ಸೂಚಿಸಿದೆ ಎಂದು ಇಲ್ಲಿನ ಅಧಿಕಾರಿಗಳು ಹೇಳಿ ಸ್ವತ್ಛತಾ ವಿಭಾಗದಲ್ಲಿ ದುಡಿಸಿಕೊಂಡು 5 ತಿಂಗಳಾದರೂ ವೇತನ ನೀಡದೆ ಇಲ್ಲಸಲ್ಲದ ಸಬೂಬು ಹೇಳಿಕೊಂಡು ಕಾಲ ದೂಡುತ್ತಿದ್ದಾರೆ ಎಂದು ಪೌರಕಾರ್ಮಿಕರು ಆರೋಪಿಸಿದ್ದಾರೆ.
Related Articles
ಪೌರಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳದೆ ಹೊರಗುತ್ತಿಗೆಯಲ್ಲಿ ಕಳೆದ 5 ತಿಂಗಳಿಂದ ದುಡಿಸಿ ಕೊಂಡು ವೇತನ ನೀಡದೆ ನಿರ್ಲಕ್ಷ್ಯ ವಹಿಸಿರುವ ಪುರಸಭೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ನಡೆಗೆ ಪಟ್ಟಣಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
Advertisement
ಪೌರಕಾರ್ಮಿಕ ಸಿಬ್ಬಂದಿ ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ದಸಂಸ ಸಂಘಟನೆ, ವರ್ತಕರ ಸಂಘ, ವಾಹನ ಚಾಲಕರ ಸಂಘ, ಆಟೋ ಚಾಲಕರ ಸಂಘ ಸೇರಿದಂತೆ ಆನೇಕ ಪ್ರಗತಿಪರ ಸಂಘ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ಸಂಘದ ಅಧ್ಯಕ್ಷ ಶ್ರೀರಂಗ ತಿಳಿಸಿದ್ದಾರೆ.
ಪುರಸಭೆ ಸ್ವತ್ಛತಾ ವಿಭಾಗದ ಹೊರ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ 5 ತಿಂಗಳಿಂದ ವೇತನ ನೀಡಿಲ್ಲ. ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಅನಾರೋಗ್ಯ ಕಾಡುತ್ತಿದ್ದರೂ ಚಿಕಿತ್ಸೆ ಪಡೆಯಲು ನಮ್ಮ ಕೈಯಲ್ಲಿ ಹಣ ಇಲ್ಲ. ನಾವು ಹೇಗೆ ಜೀವನ ನಿರ್ವಹಣೆ ಮಾಡಬೇಕು.ಶ್ರೀರಂಗ, ಅಧ್ಯಕ್ಷ, ಪೌರ ಕಾರ್ಮಿಕರ ಸಂಘ