Advertisement

ಜನರ ಪ್ರತಿಭಟನೆ ನಂತರ ಶೌಚಾಲಯಕ್ಕೆ ಭೂಮಿಪೂಜೆ

06:26 PM Oct 02, 2022 | Team Udayavani |

ಕುಕನೂರು: ಮಹಿಳಾ ಶೌಚಾಲಯ ಭೂಮಿ ಪೂಜೆ ವೇಳೆ ನಿಗದಿಗೊಳಿಸಿ ಮೇಲಾಧಿಕಾರಿಗಳು ತಡೆ ನೀಡಿದ್ದಾರೆ ಎಂದು ಹೇಳಿದ್ದಕ್ಕೆ ಅಲ್ಲಿನ ಜನ ಪ್ರತಿಭಟನೆ ನಡೆಸಿದ ನಂತರ ಎಚ್ಚೆತ್ತ ಅಧಿಕಾರಿಗಳು ಕಾಮಗಾರಿ ಭೂಮಿಪೂಜೆ ನಡೆಸಿದ ಘಟನೆ ಕೋಳಿಪೇಟಿ 7ನೇ ವಾರ್ಡ್‌ನಲ್ಲಿ ಶನಿವಾರ ನಡೆಯಿತು.

Advertisement

ಪ್ರತಿಭಟನಾ ವೇಳೆ ಪಪಂ ಸದಸ್ಯ ಗಗನ ನೋಟಗಾರ ಮಾತನಾಡಿ, ಹತ್ತಾರು ವರ್ಷಗಳಿಂದ 7ನೇ ವಾರ್ಡ್‌ನಲ್ಲಿ ಮಹಿಳಾ ಶೌಚಾಲಯವಿಲ್ಲದೆ ಮಹಿಳೆಯರು ಸಂಕಷ್ಟ ಅನುಭವಿಸುತ್ತಿದ್ದು, ಇದೇ ವಾರ್ಡಿನಲ್ಲಿ ಸ್ಥಳ ಗುರುತಿಸಿ ಎಲ್ಲ ದಾಖಲೆಯೊಂದಿಗೆ ಪಪಂ 10 ಲಕ್ಷ ಅನುದಾನ ನೀಡಿ, ಟೆಂಡರ್‌ ಮುಗಿದು ಮೂರು ತಿಂಗಳ ನಂತರ ಕಾಮಗಾರಿಗೆ ಅಸ್ತು ನೀಡಿದ್ದರು. ಶನಿವಾರ ಮಹಿಳಾ ಶೌಚಾಲಯಕ್ಕೆ ಭೂಮಿಪೂಜೆ ನೆರವೇರಿಸುವುದಾಗಿ ತಿಳಿಸಿದ್ದರು. ಪೂಜೆ ವೇಳೆ ಮೇಲಾಧಿಕಾರಿಗಳು ಪೋಟೋìಕಾಲ್‌ನಂತೆ ಸಚಿವರಿಂದ ಕಾಮಗಾರಿಗೆ ಚಾಲನೆ ನೀಡಬೇಕಿದೆ ಎಂದು ಇಲ್ಲದ ಸಬೂಬು ಹೇಳಿ ಭೂಮಿಪೂಜೆಗೆ ತಡೆ ಒಡ್ಡಿದ್ದಾರೆಂದು ಆರೋಪಿಸಿದರು.

ಈ ಸಂದರ್ಭದಲ್ಲಿ ವಾರ್ಡ್‌ ಮುಖಂಡ ಈಶಪ್ಪ ಸಬರದ ಮಾತನಾಡಿ, ನೀವು ಸರಕಾರಿ ಅಧಿಕಾರಿಗಳು. ಜನ ಪ್ರತಿನಿಧಿಗಳ ಕೈ ಕೆಳಗೆ ದುಡಿವವರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಶೌಚಾಲಯವಿಲ್ಲದೇ ಖಾಸಗಿಯವರ ಜಾಗದಲ್ಲಿ ಬಹಿರ್ದೆಸೆಗೆ ಹೋಗುವ ಮಹಿಳೆಯರ ಸ್ಥಿತಿ ಅರ್ಥ ಮಾಡಿಕೊಳ್ಳದೆ ರಾಜಕೀಯ ಕುತಂತ್ರದಿಂದ ಶೌಚಾಲಯ ನಿರ್ಮಾಣ ಕಾಮಗಾರಿ ನಿಲ್ಲಿಸುವ ಹುನ್ನಾರ ನಡೆಸಿದ್ದಾರೆ. ಇದಕ್ಕೆ ನಾವು ಯಾವತ್ತು ಬಗ್ಗಲ್ಲ. ಕಾಮಗಾರಿ ಭೂಮಿ ಪೂಜೆ ನೇರವೇರಿಸುವವರೆಗೆ ಪ್ರತಿಭಟನೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.

ಮಹಿಳೆಯರು ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ನಂತರ ಪಪಂ ಮುಖ್ಯಾಧಿಕಾರಿ ಚಂದ್ರಶೇಖರ ಪ್ರತಿಭಟನಾಕಾರರ ಮನವೊಲಿಸಿ ಕಾಮಗಾರಿ ಭೂಮಿ ಪೂಜೆ ನಡೆಸಿದರು. ಇಂಜಿನಿಯರ್‌ ಶಿಲ್ಪಾ, ಪ್ರದಸ ಅರುಣಕುಮಾರ ನಾಯಕ್‌, ಪ್ರತಿಭಟನಾಕಾರರಾದ ನಾಗಪ್ಪ ಅಸಲಿ, ಮಲ್ಲಪ್ಪ ಸಬರದ, ಕಳಕಪ್ಪ ಇಬೇರಿ, ಶಂಕ್ರಪ್ಪ ನರೇಗಲ್‌, ಕಳಕಪ್ಪ ಕುಂಬಾರ, ಬಸವರಾಜ ಸಿಳ್ಳಿ, ಮುತ್ತು ವಾಲ್ಮೀಕಿ, ಶ್ರೀಕಾಂತ, ದೇವಪ್ಪ ಸೋಬಾನದ, ನೀಲಪ್ಪ ಸಿಳ್ಳಿ, ಪ್ರಕಾಶ ಚಂಡೂರು, ವಿರೂಪಾಕ್ಷಿ ಸಿಳ್ಳಿ, ಬಸವರಾಜ ಬಗಾನಾಳ, ಬಸವರಾಜ ಸಬರದ, ನಾಗಪ್ಪ ಕುಂಬಾರ, ದೇವಮ್ಮ ಕಿನ್ನಾಳ, ಬಸಮ್ಮ ಕಿನ್ನಾಳ, ಬಸಮ್ಮ, ಅನ್ನಮ್ಮ, ಗಂಗಮ್ಮ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next