Advertisement
ಅದು ಶಾಪ್ಸ್ ಎಂಬ ಹೊಸ ಸೇವೆಯನ್ನು ತನ್ನ ಬಳಕೆದಾರರಿಗೆ ತೆರೆದಿದೆ. ಯಾವುದೇ ವ್ಯಾಪಾರಿಗಳು, ತಮ್ಮ ವ್ಯಾಪ್ತಿ, ವಿಸ್ತಾರದ ಚಿಂತೆಯಲ್ಲಿದೇ ಫೇಸ್‌ಬುಕ್‌ನ ಈ ಸೇವೆಯನ್ನು ಬಳಸಿಕೊಳ್ಳಬಹುದು. ಅದರಲ್ಲೂ ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗಲೆಂದೇ, ತಾನು ಈ ಸೇವೆಯನ್ನು ಆರಂಭಿಸಿದ್ದೇನೆ. ಜನ ಪ್ರಯಾಸಪಟ್ಟು ಕೊಳ್ಳುವುದಕ್ಕಿಂತ, ಅವರಿಗೆ ಅದು ಆನಂದವಾಗಬೇಕು ಎಂದು ಫೇಸ್‌ಬುಕ್ ಪರವಾಗಿ ಸಿಇಒ ಮಾರ್ಕ್ ಜುಕರ್‌ಬರ್ಗ್ ತಿಳಿಸಿದ್ದಾರೆ.
ಅಂಗಡಿಯನ್ನು ನೋಂದಣಿ ಮಾಡಬೇಕು. ಅಲ್ಲಿ ತಮ್ಮಲ್ಲಿರುವ ವಸ್ತುಗಳನ್ನು ತೋರಿಸಬಹುದು. ಜೊತೆಗೆ ತಮ್ಮ ಅಂಗಡಿಯ ಚಿತ್ರ ಹಾಕಿ, ವಿಶಿಷ್ಟ
ಬಣ್ಣವನ್ನು ಬಳಸಿ ಇನ್ನೂ ಅಂದಗಾಣಿಸಬಹುದು! ಈ ವ್ಯಾಪಾರಿಗಳಿಗೆ ಫೇಸ್‌ಬುಕ್, ಗ್ರಾಹಕರನ್ನು ತಲುಪಲು ತಾನೇ ನೆರವು ನೀಡಲಿದೆ. ಅಂದರೆ
ವಾಟ್ಸ್‌ಆ್ಯಪ್, ಮೆಸೆಂಜರ್, ಇನ್ಸ್ಟಾಗ್ರಾಮ್ ಮೂಲಕ ಜನರಿಗೆ ಸಂದೇಶ ಕಳುಹಿಸಬಹುದು. ಜನರು ಕೇಳಿದ ವಸ್ತುಗಳನ್ನು ಅವರ ಮನೆಗೆ ತಲುಪಿಸುವುದು ಮಾತ್ರ ಅಂಗಡಿಯವರ ಕೆಲಸ.