Advertisement

FAB FOUR: ಏಕದಿನ ವಿಶ್ವಕಪ್ ನಲ್ಲಿ ಯಾರ ದಾಖಲೆಗಳು ಉತ್ತಮ? ಇಲ್ಲಿದೆ ಮಾಹಿತಿ

04:11 PM Oct 02, 2023 | Team Udayavani |

ಮಣಿಪಾಲ: ಆಧುನಿಕ ಕ್ರಿಕೆಟ್ ಜಗತ್ತಿನ ಫ್ಯಾಬ್ ಫೋರ್ ಎಂದರೆ ಅದು ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಜೋ ರೂಟ್ ಮತ್ತು ಕೇನ್ ವಿಲಿಯಮ್ಸನ್. ಕಳೆದೊಂದು ದಶಕದಿಂದ ಕ್ರಿಕೆಟ್ ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ಈ ನಾಲ್ವರು ಕ್ರಿಕೆಟ್ ಲೋಕದ ಐಕಾನ್ ಗಳು.

Advertisement

2023 ಐಸಿಸಿ ಏಕದಿನ ವಿಶ್ವಕಪ್ ಕೂಟವು ಅಕ್ಟೋಬರ್ 5ರಿಂದ ಆರಂಭವಾಗಲಿದೆ. ಭಾರತದ ಆತಿಥ್ಯದಲ್ಲಿ ನಡೆಯಲಿರುವ ಮೆಗಾ ಕ್ರಿಕೆಟ್ ಕೂಟದಲ್ಲಿ ಒಟ್ಟು ಹತ್ತು ತಂಡಗಳು ಭಾಗವಹಿಸಲಿದೆ. ಸ್ಟಾರ್ ಆಟಗಾರರ ನಡುವೆ ಎಲ್ಲರ ಚಿತ್ತ ಈ ನಾಲ್ಕು ಆಟಗಾರರ ಮೇಲಿದೆ. ಹಾಗಾದರೆ ವಿಶ್ವಕಪ್ ನಲ್ಲಿ ಈ ನಾಲ್ವರ ಪ್ರದರ್ಶನ, ದಾಖಲೆಗಳು ಹೇಗಿದೆ? ಇಲ್ಲಿದೆ ಮಾಹಿತಿ.

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ ನಲ್ಲಿ 26 ಪಂದ್ಯಗಳಲ್ಲಿ 46.8 ಸರಾಸರಿಯಲ್ಲಿ 2 ಶತಕ ಮತ್ತು 6 ಅರ್ಧಶತಕಗಳೊಂದಿಗೆ 1,030 ರನ್ ಗಳಿಸಿದ್ದಾರೆ.

ಇಂಗ್ಲೆಂಡ್‌ನ ಮಾಜಿ ನಾಯಕ ಜೋ ರೂಟ್ 17 ವಿಶ್ವಕಪ್ ಪಂದ್ಯಗಳಲ್ಲಿ 54.14 ಸರಾಸರಿಯಲ್ಲಿ 3 ಶತಕ ಮತ್ತು 3 ಅರ್ಧಶತಕಗಳೊಂದಿಗೆ 758 ರನ್ ಗಳಿಸಿದ್ದಾರೆ.

ನ್ಯೂಜಿಲ್ಯಾಂಡ್ ಕೇನ್ ವಿಲಿಯಮ್ಸನ್ 2019 ರ ಏಕದಿನ ವಿಶ್ವಕಪ್‌ ನಿಂದ ಉಳಿದಿರುವ ಏಕೈಕ ನಾಯಕ. ವಿಲಿಯಮ್ಸನ್ ವಿಶ್ವಕಪ್‌ ನಲ್ಲಿ 23 ಪಂದ್ಯಗಳಲ್ಲಿ 56.93 ಸರಾಸರಿಯಲ್ಲಿ 2 ಶತಕ ಮತ್ತು 3 ಅರ್ಧಶತಕಗಳೊಂದಿಗೆ 911 ರನ್ ಗಳಿಸಿದ್ದಾರೆ.

Advertisement

ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ 24 ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ 46.33 ಸರಾಸರಿಯಲ್ಲಿ 1 ಶತಕ ಮತ್ತು 8 ಅರ್ಧಶತಕಗಳೊಂದಿಗೆ 834 ರನ್ ಗಳಿಸಿದ್ದಾರೆ.

ಈ ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್ ಅವರ ಏಕದಿನ ದಾಖಲೆ ಮುರಿಯುವ ಸಾಧ್ಯತೆಯಿದೆ. ವಿರಾಟ್ ಕೊಹ್ಲಿ ಅವರು ಏಕದಿನ ಕ್ರಿಕೆಟ್ ನಲ್ಲಿ 47 ಶತಕ ಬಾರಿಸಿದ್ದು, ಇನ್ನು ಮೂರು ಶತಕ ಗಳಿಸಿದರೆ 50 ಶತಕ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆ ಬರೆಯಲಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು 49 ಶತಕಳೊಂದಿಗೆ ಸದ್ಯ ಮೊದಲ ಸ್ಥಾನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next