Advertisement

ಕರ್ನಾಟಕದಲ್ಲಿ ‘ಜೆಸಿಬಿ’ಗೆ ಪರ್ಯಾಯವಾಗಿ ನಾವು ಜನರನ್ನು ಸಂಪರ್ಕಿಸುತ್ತಿಲ್ಲ:ಆಮ್ ಆದ್ಮಿ ಪಕ್ಷ

07:20 PM Oct 30, 2022 | Team Udayavani |

ಬೆಂಗಳೂರು : ಕರ್ನಾಟಕದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಆಮ್ ಆದ್ಮಿ ಪಕ್ಷವು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಯೂ ಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದು, ಭ್ರಷ್ಟಾಚಾರ ವಿರೋಧಿ ಅಜೆಂಡಾವನ್ನು ತನ್ನ ಮುಖ್ಯ ಯೋಜನೆಯಾಗಿ ಇರಿಸಲು ನಿರ್ಧರಿಸಿದೆ ಎಂದು ಪಕ್ಷದ ವಕ್ತಾರ ಮತ್ತು ಕರ್ನಾಟಕ ಎಎಪಿ ಸಂಚಾಲಕ ಪೃಥ್ವಿ ರೆಡ್ಡಿ ಪಿಟಿಐಗೆ ಹೇಳಿಕೆ ನೀಡಿದ್ದಾರೆ.

Advertisement

ನಾವು ಎಲ್ಲಾ 224 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇವೆ. ನಾವು ಗ್ರಾಮ ಸಂಪರ್ಕ ಅಭಿಯಾನದ ಮೂಲಕ ರಾಜ್ಯದ 170 ಕ್ಷೇತ್ರಗಳಲ್ಲಿ ನಮ್ಮ ಪ್ರಚಾರವನ್ನು ಪ್ರಾರಂಭಿಸಿದ್ದೇವೆ ಮತ್ತು ಈ 170 ಕ್ಷೇತ್ರಗಳಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ನೇಮಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ರೆಡ್ಡಿ ಹೇಳಿದರು.

ರಾಜ್ಯದಲ್ಲಿ 58,000- ತಳಮಟ್ಟದ ಬೂತ್‌ಗಳಿವೆ ಮತ್ತು ಪ್ರತಿ ಬೂತ್‌ನಲ್ಲಿ ಪಕ್ಷವು “ಆಕ್ರಮಣಕಾರಿಯಾಗಿ” ಕನಿಷ್ಠ 10 ಕಾರ್ಯಕರ್ತರನ್ನು ನೇಮಿಸುತ್ತಿದೆ ಎಂದರು.

ಬೂತ್ ಮಟ್ಟದಲ್ಲಿ ಕೆಲಸ ಮಾಡುವ ಮೂಲಕ ಪಕ್ಷವನ್ನು ಬಲಪಡಿಸುತ್ತಿದ್ದೇವೆ. ಹೀಗಾಗಿಯೇ ನಾವು ಹಣ ಬಲದ ವಿರುದ್ಧ ಹೋರಾಡಬಹುದು.
ರಾಜ್ಯದ ಎಲ್ಲಾ ಮೂರು ಪ್ರಮುಖ ರಾಜಕೀಯ ಪಕ್ಷಗಳು ಭ್ರಷ್ಟಾಚಾರವನ್ನು ತಡೆಗಟ್ಟುವಲ್ಲಿ ಮತ್ತು ಜನರ ನಿರೀಕ್ಷೆಯನ್ನು ಪೂರೈಸುವಲ್ಲಿ ವಿಫಲವಾಗಿವೆ ಎಂದರು.

‘ಜೆಸಿಬಿ’ಗೆ (ಜನತಾ ದಳ, ಕಾಂಗ್ರೆಸ್, ಬಿಜೆಪಿ) ಪರ್ಯಾಯವಾಗಿ ನಾವು ನಾಲ್ಕನೇ ಪಕ್ಷವಾಗಿ ಜನರನ್ನು ಸಂಪರ್ಕಿಸುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಜೆಸಿಬಿ ಧ್ವಂಸಕ್ಕೆ ಸಮಾನಾರ್ಥಕವಾಗಿರುವುದರಿಂದ, ಕರ್ನಾಟಕದ ಮೂರು ಪ್ರಮುಖ ಪಕ್ಷಗಳು ಜನರ ಆಕಾಂಕ್ಷೆಗಳು, ಅವರು ಕಷ್ಟಪಟ್ಟು ಗಳಿಸಿದ ಆದಾಯ, ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆ ಮತ್ತು ಮೂಲಸೌಕರ್ಯಗಳನ್ನು ಕೆಡವಿದ್ದಾರೆ” ಎಂದು ರೆಡ್ಡಿ ವ್ಯಂಗ್ಯವಾಡಿದರು.

Advertisement

ಕರ್ನಾಟಕದಲ್ಲಿ ಗೆಲ್ಲುವ ಸಾಧ್ಯತೆಗಳ ಕುರಿತು ಮಾತನಾಡಿದ ಎಎಪಿ ನಾಯಕ, ಪಕ್ಷವು ಗೆಲ್ಲಲು ಹೋರಾಟ ನಡೆಸುತ್ತಿದೆ ಮತ್ತು ಮುಂಬರುವ ಚುನಾವಣೆಯಲ್ಲಿ ಅದು ತನ್ನ ಅಸ್ತಿತ್ವವನ್ನು ಕಂಡುಕೊಳ್ಳುವ ಭರವಸೆಯಿದೆ ಎಂದರು.

ಆಪ್ ಈಗಾಗಲೇ ಅರ್ಧಕ್ಕಿಂತ ಹೆಚ್ಚು ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಹಂತದಲ್ಲಿದೆ ಮತ್ತು ಚುನಾವಣೆಗೆ ಕೇವಲ ನಾಲ್ಕು ತಿಂಗಳ ಮೊದಲು 2023 ರ ಜನವರಿ ಮೊದಲ ವಾರದೊಳಗೆ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲು ಉದ್ದೇಶಿಸಿದ್ದು, ನಂತರ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next