ದೊಡ್ಡಬಳ್ಳಾಪುರ: ಕೋವಿಡ್ 2ನೇ ಅಲೆಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಲಾಕ್‌ಡೌನ್ ಹೇರಿದ್ದು ವಾಣಿಜ್ಯ ಚಟುವಟಿಕೆ,ಉದ್ಯೋಗಗಳ ಮೇಲೆ ಗಂಭೀರ ಪರಿಣಾಮಬೀರಿದೆ. ಅಂತೆಯೇ ಕಣ್ಣಿನ ಆರೋಗ್ಯದಮೇಲೂ ಕೊರೊನಾದ ಕರಿಛಾಯೆ ಬಿದ್ದಿದ್ದುಸೂಕ್ತ ಸಮಯದಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆದೊರೆಯದೇ ಕಣ್ಣಿನ ಸಮಸ್ಯೆ ಇರುವವರು ಪರಿತಪಿಸುವಂತಾಗಿದೆ.
ತಪಾಸಣೆ ಶಿಬಿರ ತಾತ್ಕಾಲಿಕ ಸ್ಥಗಿತ:ದೊಡ್ಡಬಳ್ಳಾಪುರದ ಲಯನ್ಸ್ ಕ್ಲಬ್‌ನಲ್ಲಿ ಪ್ರತಿತಿಂಗಳ ಮೊದಲನೇ ಸೋಮವಾರ ಉಚಿತಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಲಾಗುತ್ತಿತ್ತು. ಕಳೆದ ಏ.5 ರಂದು ಶಿಬಿರಆಯೋಜಿಸಲಾಗಿತ್ತು. ಆದರೆ ಈ ಬಾರಿ ಮೇ3ರಂದು ನಡೆಯಬೇಕಿದ್ದ ಶಿಬಿರ ಕೊರೊನಾಕಾರಣದಿಂದ ಮುಂದೂಡಲಾಗಿದೆ.
ಪ್ರತಿಗುರುವಾರ ಲಯನ್ಸ್ ಕ್ಲಬ್‌ನಲ್ಲಿ ಕಣ್ಣಿನತಪಾಸಣೆಗೆ ತಜ್ಞ ವೈದ್ಯರು ಆಗಮಿಸುತ್ತಿದ್ದುಶಸ್ತ್ರ ಚಿಕಿತ್ಸೆ ಅಗತ್ಯವಿರುವವರಿಗೆ ಉಚಿತ ಕಣ್ಣಿನಶಸ್ತ್ರಚಿಕಿತ್ಸಾ ಶಿಬಿರಕ್ಕೆ ಶಿಫಾರಸ್ಸು ಮಾಡಲಾಗುತ್ತಿತ್ತು. ಇದಲ್ಲದೇ ಪ್ರತಿ ತಿಂಗಳು ಸುಮಾರು200ರಿಂದ 250 ಮಂದಿಗೆ ಕಣ್ಣಿನ ತಪಾಸಣೆಗೆಒಳಗಾಗುತ್ತಿದ್ದು, ಇವರಲ್ಲಿ 50ರಿಂದ 60ಮಂದಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರಕ್ಕೆತೆರಳಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಹಿಂದಿರುಗು ತ್ತಿದ್ದರು.
ಆರ್ಥಿಕವಾಗಿ ಹಿಂದುಳಿದವರಿಗೆಶಿಬಿರಗಳು ವರದಾನವಾಗಿತ್ತು. ಈಗ,ಶಿಬಿರಗಳು ನಡೆಯದೇ ಇರುವುದರಿಂದನೂರಾರು ಮಂದಿ ಕಣ್ಣಿನ ಚಿಕಿತ್ಸೆ ಪಡೆಯದೇಸಮಸ್ಯೆ ಅನುಭವಿಸುತ್ತಿದ್ದಾರೆ.
ನಿರ್ದೇಶನ ಬರುವವರೆಗೆ ಸ್ಥಗಿತ: ನಗರದಲಯನ್ಸ್ ಭವನದಲ್ಲಿ ಪ್ರತಿ ತಿಂಗಳ ಮೊದಲಸೋಮವಾರ ಉಚಿತವಾಗಿ ನಡೆಸಲಾಗುತ್ತಿದ್ದಕಣ್ಣಿನ ತಪಾಸಣೆ ಶಿಬಿರ ಹಾಗೂ ಶಸ್ತ್ರಚಿಕಿತ್ಸೆಯನ್ನು ಕೋವಿಡ್ ಜನತಾ ಕರ್ಫ್ಯೂಹಿನ್ನೆಲೆಯಲ್ಲಿ ಮುಂದೂಡಲಾಗಿದೆ.
ರಾಜ್ಯಸರ್ಕಾರದ ಆರೋಗ್ಯ ಇಲಾಖೆ ವತಿಯಿಂದಸೂಕ್ತ ನಿರ್ದೇಶನ ಬರುವವರೆಗೂ ಲಯನ್ಸ್‌ಕ್ಲಬ್‌ನಿಂದ ಯಾವುದೇ ಶಿಬಿರ ಆಯೋಜಿಸಲಾ ಗು ವುದಿಲ್ಲ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷಆರ್.ಎಸ್.ಮಂಜುನಾಥ್ ತಿಳಿಸಿದ್ದಾರೆ.
ಡಿ.ಶ್ರೀಕಾಂತ