Advertisement

UPSCಯಿಂದ 6 ಅಧಿಕಾರಿಗಳ ‘ಪ್ರಮಾಣಪತ್ರ’ದ ಮೇಲೆ ಕಣ್ಣು!

01:32 AM Aug 03, 2024 | Team Udayavani |

ಹೊಸದಿಲ್ಲಿ: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ)ವು ವಿವಾದಿತ ಐಎಎಸ್‌ ಪ್ರೊಬೆಷನರಿ ಪೂಜಾ ಖೇಡ್ಕರ್‌ ಅವರ ಪ್ರಮಾಣಪತ್ರ ರದ್ದುಗೊ ಳಿಸಿದ ಬಳಿಕ ಈಗ ಇನ್ನೂ ಹಲವು ಪ್ರೊಬೆಷನರಿ ಹಾಗೂ ಸೇವೆಯಲ್ಲಿರುವ ಅಧಿಕಾರಿಗಳ ಪ್ರಮಾಣಪತ್ರಗಳ ಬಗ್ಗೆಯೂ ಅನುಮಾನ ಮೂಡಿದೆ.

Advertisement

ಈ ಹಿನ್ನೆಲೆಯಲ್ಲಿ ಕೇಂದ್ರ ಸಿಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ)ಯು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದ 6 ಅಧಿಕಾರಿಗಳ ವೈದ್ಯಕೀಯ ಪ್ರಮಾಣಪತ್ರಗಳನ್ನು ಪರಿಶೀಲಿಸುತ್ತಿದೆ. ಈ 6 ಮಂದಿಯಲ್ಲಿ ಐವರು ಐಎಎಸ್‌ ಹಾಗೂ ಓರ್ವ ಐಆರ್‌ಎಸ್‌ ಅಧಿಕಾರಿಯಿದ್ದು, ನಕಲಿ ಅಂಗವಿಕಲ ಪ್ರಮಾಣಪತ್ರ ನೀಡಿದ್ದಾರೆಯೇ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಇತ್ತೀಚೆಗಷ್ಟೇ ಪೂಜಾ ಪ್ರಮಾಣ ಪತ್ರವನ್ನು ಯುಪಿಎಸ್‌ಸಿ ರದ್ದು ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next