Advertisement

ಸ್ವಯಂ ಉದ್ಯೋಗಕ್ಕೆ ವಿಫ‌ುಲ ಅವಕಾಶ

07:34 AM Feb 17, 2019 | |

ಕೋಲಾರ: ಕಾಂಕ್ರೀಟೀಕರಣಗೊಳ್ಳುತ್ತಿರುವ ನಗರ ಪ್ರದೇಶಗಳಲ್ಲಿ ನೆಮ್ಮದಿ ಬದುಕು, ಉತ್ತಮ ಗಾಳಿಗಾಗಿ ಇರುವ ಉದ್ಯಾನವನಗಳ ಅಭಾವ ನೀಗಿಸಲು ಲ್ಯಾಂಡ್‌ ಸ್ಕೇಪ್‌ ಮತ್ತು ಆರ್ಕಿಟೆಕ್ಚರ್‌ ಬಹು ಬೇಡಿಕೆ ಕ್ಷೇತ್ರವಾಗಿ ಬೆಳೆಯುತ್ತಿದೆ ಎಂದು ತೋಟಗಾರಿಕೆ ಕಾಲೇಜಿನ ಡೀನ್‌ ಡಾ.ಜಿ.ಪ್ರಕಾಶ್‌ ತಿಳಿಸಿದರು.

Advertisement

ಶುಕ್ರವಾರ ನಗರ ಹೊರವಲಯದ ಟಮಕದಲ್ಲಿನ ತೋಟಗಾರಿಕೆ ಕಾಲೇಜಿನಲ್ಲಿ ದ್ವಿತೀಯ ಬಿಎಸ್ಸಿ ತೋಟಗಾರಿಕೆ ವಿದ್ಯಾರ್ಥಿಗಳು ಆಯೋಜಿಸಿದ್ದ “ತೋಟದ ಪರಿಕಲ್ಪನೆ ಮತ್ತು ಹೂ ರಚನಾ ವಿನ್ಯಾಸ’ ಪ್ರದರ್ಶನ ವೀಕ್ಷಿಸಿದ ನಂತರ ಮಾತನಾಡಿದರು. ಏರುತ್ತಿರುವ ಜನಸಂಖ್ಯೆಗೆ ಅಗತ್ಯವಾದ ಮನೆ, ನಿವೇಶನ ಒದಗಿಸಲು ನಗರಪ್ರದೇಶಗಳಲ್ಲಿ ಕಷ್ಟವಾಗಿದೆ. ಈ ನಿಟ್ಟಿನಲ್ಲಿ ಉದ್ಯಾನವನಗಳ ನಿರ್ಮಾಣ ಕಷ್ಟವಾಗಿದೆ ಎಂದರು.

ಈ ನಿಟ್ಟಿನಲ್ಲಿ ಲ್ಯಾಂಡ್‌ ಸ್ಕೇಪ್‌ ಮತ್ತು ಆರ್ಕಿಟೆಕ್ಚರ್‌ ಬಹು ಬೇಡಿಕೆಯಿರುವ ಕ್ಷೇತ್ರವಾಗಿದ್ದು, ಸ್ವಯಂ ಉದ್ಯೋಗ ಕಂಡುಕೊಳ್ಳಲು ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ವಿಫುಲ ಅವಕಾಶ ಕಲ್ಪಿಸಿಕೊಡಲಿದೆ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ಪಠ್ಯದಲ್ಲಿ ಏನು ಕಲಿತಿರುತ್ತಾರೋ ಅದರ ಪ್ರಾಯೋಗಿಕ ಪ್ರದರ್ಶನ ನೀಡುವುದು ಶೈಕ್ಷಣಿಕ ಚಟುವಟಿಕೆಯ ಭಾಗವಾಗಿದ್ದು, ಇದರಿಂದ ಅವರ ಮುಂದಿನ ಬದುಕಿಗೆ ಅಗತ್ಯವಾದ ಪ್ರಾಯೋಗಿಕ ಅನುಭವ ಲಭಿಸಲು ಸಹಕಾರಿ ಎಂದರು.

ಇಂದು ಕಾಂಕ್ರೀಟೀಕರಣಗೊಳ್ಳುತ್ತಿರುವ ನಗರಗಳಲ್ಲಿ ಉದ್ಯಾನವನಗಳ ಅಭಾವವಿದೆ. ನಾವು ವಾಸವಿರುವ ಸ್ಥಳದಲ್ಲೇ ಹಸಿರೀಕರಣಕ್ಕೆ ಇರುವ ಅವಕಾಶಗಳ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ. ಲ್ಯಾಂಡ್‌ ಸ್ಕೇಪ್‌ ಮತ್ತು ಆರ್ಕಿಟೆಕ್ಚರ್‌ ಕ್ಷೇತ್ರ ಬಹು ಬೇಡಿಕೆ ಇರುವುದರಿಂದ ವಿದ್ಯಾರ್ಥಿಗಳು ಉದ್ಯೋಗ ಸಿಗದಿದ್ದರೆ ಆತಂಕ ಪಡುವ ಅಗತ್ಯವಿಲ್ಲ ಸ್ವಯಂ ಉದ್ಯೋಗ ರೂಪಿಸಿಕೊಂಡು ಬದುಕು ರೂಪಿಸಿಕೊಳ್ಳಲು ಹೆಚ್ಚಿನ ಅವಕಾಶಗಳಿವೆ ಎಂದರು.

ಆರ್‌.ಎಲ್‌.ಜಾಲಪ್ಪ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮುಲು ಪ್ರದರ್ಶನವನ್ನು ಉದ್ಘಾಟಿಸಿ, ತೋಟಗಾರಿಕೆ ಸಂಬಂಧ ವಿದ್ಯಾರ್ಥಿಗಳು ಪಠ್ಯ ಅಭ್ಯಾಸ ಮಾಡಿದರೂ, ಅದನ್ನು ಪ್ರಾಯೋಗಿಕವಾಗಿ ಅನುಸರಿಸಿದರೆ ಮಾತ್ರವೇ ಹೆಚ್ಚಿನ ಅನುಭವ ಒದಗುವುದರಿಂದ ಇಂತಹ ಪ್ರದರ್ಶನಗಳು ಹೆಚ್ಚು ಜ್ಞಾನಾಭಿವೃದ್ಧಿಗೆ ಸಹಕಾರಿ ಎಂದರು.

Advertisement

ಹಾಜರಿದ್ದ ಹೂವಿನ ಬೆಳೆ ಸಹಾಯಕ ಪ್ರಾಧ್ಯಾಪಕ ಡಾ.ಎ.ಎಂ.ರಾಜೇಶ್‌, ಮನೆ ಛಾವಣಿಯ ಮೇಲೆಯೇ ಇಂದು ಅನೇಕರು ಉದ್ಯಾನವನ, ತರಕಾರಿ ತೋಟ ನಿರ್ಮಿಸಿ ಉತ್ತಮ ವಾತಾವರಣ ರೂಪಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಪ್ರದರ್ಶನದಲ್ಲಿ ಬಿಎಸ್ಸಿ ತೋಟಗಾರಿಕೆ ವಿದ್ಯಾರ್ಥಿಗಳು ಕಳೆದ  20 ದಿನಗಳ ಅವಿರತ ಶ್ರಮದಿಂದ ಬಗೆಬಗೆಯ ಉದ್ಯಾನ ಸೃಷ್ಟಿಸಿ ಬೆರಗುಗೊಳಿಸಿದ್ದಾರೆ. ಪ್ರಮುಖವಾಗಿ ಹಿಂದೆ ರಾಜ ರಾಣಿಯರ ಕಾಲದ ಉದ್ಯಾನವನಗಳು ಹೇಗಿದ್ದವು, ಅದರಲ್ಲಿನ ವಿವಿಧತೆಯನ್ನು ವಿದ್ಯಾರ್ಥಿಗಳು ಬಿಂಬಿಸಿದ್ದು, ನವನವೀನ ಉದ್ಯಾನಗಳ ಸೃಷ್ಟಿ ಇಲ್ಲಿ ಕಂಡು ಬರುತ್ತಿದೆ. 

ಫ್ರೆಂಚ್‌ ಗಾರ್ಡನ್‌, ಡಿಶ್‌ ಗಾರ್ಡನ್‌, ಟೇಬಲ್‌ ಗಾರ್ಡನ್‌, ತಾರಸಿ ಗಾರ್ಡನ್‌, ರಾಕ್‌ ಗಾರ್ಡನ್‌, ಪಾರದರ್ಶನ ಗಾಜಿನ ಬುರುಡೆಯೊಳಗೆ ಕುಬj ಸಸಿಗಳನ್ನು ಬೆಳೆಸುವ ಕೆಟೇರಿಯಂ, ಎಡಬಲ್‌ ಲ್ಯಾಂಡ್‌ ಸ್ಕೇಪಿಂಗ್‌ , ಜಪಾನ್‌ ಮತ್ತು ಇಂಗ್ಲಿಷ್‌ ಹೂವಿನ ತೋಟ ಹೀಗೆ ಹತ್ತು ಹಲವು ಬಗೆಯ ಉದ್ಯಾನವನಗಳನ್ನು ನಿರ್ಮಿಸುವ ಮೂಲಕ ವಿದ್ಯಾರ್ಥಿಗಳು ಗಮನ ಸೆಳೆದಿದ್ದಾರೆ. ಅಲ್ಲದೇ ಅದನ್ನು ನೋಡಿದವರು ತಮ್ಮ ಮನೆ ತಾರಸಿ ಮೇಲೆ ಉದ್ಯಾನವನ ನಿರ್ಮಾಣಕ್ಕೆ ಪ್ರೇರಣೆ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next