Advertisement
ಕೇರಳ ಮೂಲದ ಹಾಶೀಮ್ ಕುಟುಂಬಸ್ಥರ ಜತೆಗೆ ಮಟನೂರಿನಲ್ಲಿ ನೆಲಸಿದ್ದು, ಅವರ ಪುತ್ರಿ ಫಾತಿಮಾ ಬೆಂಗಳೂರಿನ ಹೆಬ್ಟಾಳದ ನಿವಾಸಿ ಶಮ್ಮಾಸ್ ಅಹ್ಮದ್ ಅವರನ್ನು ಮದುವೆಯಾಗಿದ್ದಾರೆ. ಹಾಶೀಮ್ ಬೆಂಗಳೂರಿನಲ್ಲಿ ಬೇಕರಿ ತೆರಯಲು ನಿರ್ಧರಿಸಿ ಮಳಿಗೆ ನೋಡುವಂತೆ ಅಳಿಯನಿಗೆ ತಿಳಿಸಿದ್ದರು. ಶಮ್ಮಾಸ್ ಮಳಿಗೆಯೊಂದನ್ನು ನೋಡಿ 15 ಲಕ್ಷ ರೂ. ಆಗಲಿದೆ ಎಂದಿದ್ದರು. ಹೀಗಾಗಿ ಹಾಶೀಮ್ ನ. 28ರಂದು 15 ಲಕ್ಷ ರೂ. ಅನ್ನು ತೆಗೆದುಕೊಂಡು ಕೇರಳದಿಂದ ಬೆಂಗಳೂರಿಗೆ ಬಂದಿದ್ದರು. ನ.29ರಂದು ಬೆಳಗ್ಗೆ 5 ಗಂಟೆಯ ಸಿಟಿ ಮಾರುಕಟ್ಟೆ ಮೆಟ್ರೊ ನಿಲ್ದಾಣದ ಬಳಿಯಲ್ಲಿ ಇಳಿದು, ಹೆಬ್ಟಾಳದಲ್ಲಿರುವ ಅಳಿಯನ ಮನೆಗೆ ತೆರಳಿದ್ದರು. ಅಂದೇ ದಿನ ಬೆಳಗ್ಗೆ 10 ಗಂಟೆಯ ಸುಮಾರಿಗೆ ಭೂಪಸಂದ್ರದಲ್ಲಿ ಖಾಲಿ ಜಾಗ ವೀಕ್ಷಿಸಿದ್ದರು. ಆ ಮಳಿಗೆ ವ್ಯಾಪಾರಕ್ಕೆ ಇಷ್ಟವಾಗದ ಕಾರಣಕ್ಕೆ ಅಂದೇ ರಾತ್ರಿ ಹಣದ ಬ್ಯಾಗ್ ಸಮೇತ ಕೇರಳಕ್ಕೆ ತೆರಳಲು ರಾತ್ರಿ 8 ಗಂಟೆ ಸುಮಾರಿಗೆ ಸಿಟಿ ಮಾರುಕಟ್ಟೆಗೆ ಬಂದಿದ್ದ ಹಾಶೀಮ್ ಅವರಿಗೆ, ಸ್ಥಳಕ್ಕೆ ಬಂದ ಮೂವರು ನಾವು ಪೊಲೀಸರು. ನಿಮ್ಮ ಬ್ಯಾಗ್ನಲ್ಲಿ ಮಾದಕ ವಸ್ತುವಿದೆ ಎಂಬ ಮಾಹಿತಿ ಬಂದಿದೆ. ಬ್ಯಾಗ್ ಪರಿಶೀಲನೆ ನಡೆಸಬೇಕು. ಪೊಲೀಸ್ ಠಾಣೆಗೆ ಬರುವಂತೆ ಹೇಳಿ ಬಲವಂತದಿಂದ ಕಾರು ಹತ್ತಿಸಿಕೊಂಡು ಕರೆದೊಯ್ದು ಹಲ್ಲೆ ನಡೆಸಿ ಹಣ ಸುಲಿಗೆ ಮಾಡಿ ಮಾರ್ಗ ಮಧ್ಯೆ ಬಿಟ್ಟು ಪರಾರಿಯಾಗಿದ್ದಾರೆ ಎಂದು ಹಾಶೀಸ್ ದೂರಿನಲ್ಲಿ ಉಲ್ಲೇಖೀಸಿದ್ದಾರೆ. Advertisement
Kidnap Case: ವ್ಯಕ್ತಿ ಅಪಹರಿಸಿ, 15 ಲಕ್ಷ ರೂ. ಸುಲಿಗೆ
12:24 PM Dec 03, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.