Advertisement

ಪ್ರವಾಸೋದ್ಯಮದಲ್ಲಿ ವಿಫುಲ ಉದ್ಯೋಗಾವಕಾಶ

10:09 AM Sep 28, 2018 | Team Udayavani |

ಕಲಬುರಗಿ: ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಉದ್ಯೋಗ ಅವಕಾಶಗಳು
ಸೃಷ್ಟಿಯಾಗುತ್ತಿವೆ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ ಹೇಳಿದರು.

Advertisement

ನಗರದ ಶರಣಬಸವ ವಿಶ್ವವಿದ್ಯಾಲಯದ ಪ್ರವಾಸೋದ್ಯಮ ಅಧ್ಯಯನ ವಿಭಾಗದಿಂದ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವ ಪರ್ಯಟನ 2018 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಹೈಕ ಪ್ರದೇಶದಲ್ಲಿ ಅನೇಕ ಪ್ರವಾಸಿ ತಾಣಗಳಿವೆ.  ವುಗಳನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಿದರೆ ನಿರೀಕ್ಷಿತ ಆದಾಯ ಬರುತ್ತದೆ. ಅದಕ್ಕಾಗಿ ಸರ್ಕಾರಗಳು ಮೊದಲು ಅಂತಹ ಸ್ಥಳಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಬೇಕು ಎಂದರು.

ಜಗತ್ತಿನ ಹಲವು ರಾಷ್ಟ್ರಗಳು ಪ್ರವಾಸೋದ್ಯಮವನ್ನು ನಂಬಿಕೊಂಡೇ ಆರ್ಥಿಕ ಚಟುವಟಿಕೆಗಳನ್ನು ನಡೆಸುತ್ತಿವೆ. ಇದರಿಂದ ಆ ದೇಶಗಳು ಅಭಿವೃದ್ಧಿಯಾಗಿವೆ. ಬೀದರ, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ ಜಿಲ್ಲೆಗಳಲ್ಲಿ ಅನೇಕ ಪ್ರೇಕ್ಷಣಿಯ ಸ್ಥಳಗಳಿವೆ. ಅವುಗಳಿಗೆ ಸರ್ಕಾರ ಮೂಲ ಸೌಲಭ್ಯ ಕಲ್ಪಿಸಬೇಕು ಎಂದರು.

ಉದ್ಯಮಿ ಚಂದು ಪಾಟೀಲ ಮಾತನಾಡಿ, ಪ್ರವಾಸೋದ್ಯಮವನ್ನು ಬೋಧಿಸುತ್ತಿರುವ ಈ ಭಾಗದ ಏಕೈಕ ವಿಶ್ವವಿದ್ಯಾಲಯ ಶರಣಬಸವ ವಿಶ್ವವಿದ್ಯಾಲಯ ಆಗಿರುವುದು ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಶರಣಬಸವ ವಿವಿಯು ಪ್ರವಾಸಿ ತಾಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
 
ಈಗಾಗಲೇ ಶರಣಬಸವೇಶ್ವರ ದೇವಾಲಯ, ಬಂದೇ ನವಾಜ್‌ ದರ್ಗಾ, ಬುದ್ಧ ವಿಹಾರ, ಸರ್ಕಾರಿ ವಸ್ತು ಸಂಗ್ರಹಾಲಯ ಪ್ರೇಕ್ಷಣಿಯ ಸ್ಥಳಗಳಾಗಿವೆ. ಅವುಗಳಿಗೆ ಇನ್ನು ಹೆಚ್ಚಿನ ಕಾಯಕಲ್ಪ ನೀಡುವ ಮೂಲಕ ಕಲಬುರ್ಗಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಬೇಕಿದೆ. ಈ ಭಾಗದ ಪ್ರಮುಖ ಆಹಾರವಾದ ಶೇಂಗಾ ಹೋಳಿಗೆ, ಜೋಳದ ರೊಟ್ಟಿಯನ್ನು ಜಾಗತಿಕ ಮಟ್ಟದಲ್ಲಿ ಪ್ರಚುರಪಡಿಸಬೇಕಿದೆ ಎಂದರು.

Advertisement

ಶಾಸಕ ಬಸವರಾಜ್‌ ಮತ್ತಿಮೂಡ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿದರು. ಸಮ ಕುಲಪತಿ ಡಾ| ವಿ.ಡಿ. ಮೈತ್ರಿ, ಕುಲಸಚಿವ ಡಾ| ಅನಿಲಕುಮಾರ ಬಿಡವೆ, ಡೀನ ಡಾ| ಲಿಂಗರಾಜ ಶಾಸ್ತ್ರೀ, ಯುವ ನಟ ಬಸವರಾಜ ಪಾಟೀಲ, ಡಾ| ಅಲ್ಲಮಪ್ರಭು ಗುಡ್ಡಾ, ಡಾ| ಎನ್‌.ಎಸ್‌. ಪಾಟೀಲ, ಡಾ| ಎಸ್‌.ಜಿ. ಡೊಳ್ಳೆಗೌಡರ್‌, ಡಾ| ಡಿ.ಟಿ. ಅಂಗಡಿ, ಗೀತಾ ಹರವಾಳ, ಡಾ| ಲಕ್ಷ್ಮೀ ಮಾಕಾ, ಡಾ| ಶಿವರಾಜ ಶಾಸ್ತ್ರೀ ಹೇರೂರ್‌ ಹಾಗೂವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಜರಿದ್ದರು.

ಶರಣಬಸವ ಸಂಗೀತ ಅಕಾಡೆಮಿ ಸದಸ್ಯರು ಪ್ರಾರ್ಥಿಸಿದರು. ಪ್ರವಾಸೋದ್ಯಮ ಅಧ್ಯಯನ ವಿಭಾಗದ ಮುಖ್ಯಸ್ಥೆ ವಾಣಿಶ್ರೀ
ಸ್ವಾಗತಿಸಿದರು. ರಶ್ಮಿ ಪಾಟೀಲ, ಸಚಿನ್‌ ಹಾಳಕೇರಿ ನಿರೂಪಿಸಿದರು, ಪ್ರೊ| ರವಿ ಎಂ. ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next