Advertisement

ವಿಸ್ತಾರಗೊಂಡ ಆಧುನಿಕ ಮಾಧ್ಯಮ: ಕ್ರಿಸ್ಟೀನಾ

12:27 PM Oct 13, 2018 | |

ವಿಜಯಪುರ: ಪ್ರಸಕ್ತ ಸಂದರ್ಭದಲ್ಲಿ ಆಧುನಿಕ ಮಾಧ್ಯಮ ಸಾಕಷ್ಟು ವಿಸ್ತಾರಗೊಂಡಿದೆ. ಪತ್ರಕರ್ತರಿಗೆ ಅಧಿಕ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಅಲ್ಲದೇ ನಮ್ಮನ್ನು ನಾವು ಗುರುತಿಸಿಕೊಳ್ಳಲು ನವಮಾಧ್ಯಮ ಒಂದು ಉತ್ತಮ ವೇದಿಕೆಯಾಗಿದೆ ಎಂದು ಪತ್ರಕರ್ತೆ ಕ್ರಿಸ್ಟಿನಾ ಡಿ. ಅಭಿಪ್ರಾಯಪಟ್ಟರು.

Advertisement

ಶುಕ್ರವಾರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ-ಸಮೂಹ ಸಂವಹನ ವಿಭಾಗದ ಮಾಧ್ಯಮ ಮನೆ ಚಟುವಟಿಕೆ ಕಾರ್ಯಕ್ರಮದಲ್ಲಿ ನವ ಮಾಧ್ಯಮದ ಯುಗದಲ್ಲಿ ಪತ್ರಿಕೋದ್ಯಮದ ಮರು ವ್ಯಾಖ್ಯಾನ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು. 

ಆಧುನಿಕ ತಂತ್ರಜ್ಞಾನ ನಮ್ಮ ಪ್ರತಿಭೆ ಸಾಬೀತು ಪಡಿಸಲು ಮಾತ್ರವಲ್ಲ ನಮ್ಮ ವ್ಯಕ್ತಿತ್ವ ಸಂರಕ್ಷಣೆಯಲ್ಲೂ ಸಹಕಾರಿ ಆಗಲಿದೆ. ಇಂಗ್ಲಿಷ್‌ ವಿಷಯದಲ್ಲಿ ಕೀಳರಿಮೆ ತೊರೆದು ಸಂವಹನಕ್ಕೆ ಅಗತ್ಯ ಇರುವ ಯಾವ ಭಾಷೆ ಇದ್ದರೂ ದೇಶ-ವಿದೇಶಗಳಲ್ಲಿ ಎಲ್ಲೇ ಇದ್ದರೂ ಸಮರ್ಥವಾಗಿ ವರದಿ ಮಾಡಲು ಸಿದ್ಧ ಎಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಸುತ್ತಮುತ್ತಲಿನ ಸುದ್ದಿಗಳನ್ನು ಹಾಕುವ ಮತ್ತು ಲೇಖನಗಳನ್ನು ಬರೆಯುವ ಹವ್ಯಾಸ ಹೆಚ್ಚು ಹೆಚ್ಚು ಬೆಳೆಸಿಕೊಳ್ಳಬೇಕು. ನಮ್ಮ ಸಮಾಜದಲ್ಲಿ ಇರುವ ಸಮಸ್ಯೆಗಳನ್ನು ಬೆಳಕಿಗೆ ತರುವ ಮತ್ತು
ಅಭಿವೃದ್ಧಿ ಕಾರ್ಯಗಳಿಗೆ ಕನ್ನಡಿ ಹಿಡಿಯುವ ಕಾರ್ಯಕ್ಕೆ ನವ ಮಾಧ್ಯಮವನ್ನು ಬಳಸಿಕೊಳ್ಳಬೇಕು ಎಂದರು.
 
ಆಧುನಿಕ ತಂತ್ರಜ್ಞಾನ ಸಮರ್ಥವಾಗಿ ಬಳಸಿಕೊಂಡಲ್ಲಿ ಸಾಮಾನ್ಯ ನಾಗರಿಕರು ಸಹ ಪತ್ರಕರ್ತರಾಗಿ ರೂಪುಗೊಳ್ಳಲು ಸಾಧ್ಯವಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡಲ್ಲಿ ಹೆಚ್ಚಿನ ಉದ್ಯೋಗಾವಕಾಶ ಪಡೆಯಲು ಸಾಧ್ಯ ಎಂದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಓಂಕಾರ ಕಾಕಡೆ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕರಾದ ಡಾ.ತಹಮೀನಾ ಕೊಲ್ಹಾರ, ಸಂದೀಪ ನಾಯಕ ಸೇರಿದಂತೆ ಇತರರು ಇದ್ದರು. ಕಾಂಚನಾ ಪೂಜಾರಿ
ನಿರೂಪಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next