Advertisement

ಟೋಲ್‌ ವಿನಾಯಿತಿಗಾಗಿ ಆಮರಣಾಂತ ಉಪವಾಸ

12:50 AM Jan 24, 2019 | Team Udayavani |

ಪಡುಬಿದ್ರಿ: ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ಪಡುಬಿದ್ರಿಯ ನಾಗರಿಕ ಸಮಿತಿ ಸದಸ್ಯರು, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌ ಮತ್ತು ನವಯುಗ ನಿರ್ಮಾಣ ಕಂಪೆನಿಯ ರಾಘವೇಂದ್ರ ಅವರೊಂದಿಗೆ ಪಡುಬಿದ್ರಿ ಜಿ. ಪಂ. ವ್ಯಾಪ್ತಿಯ ಎಲ್ಲ ವಾಹನಗಳಿಗೆ ಸುಂಕ ವಿನಾಯಿತಿಗಾಗಿ ನಡೆಸಲಾದ ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ. ನಾಳೆಯಿಂದ ಕರವೇ ಪಡುಬಿದ್ರಿಯಲ್ಲಿ ಆಮರಣಾಂತ ಉಪವಾಸವನ್ನು ಆರಂಭಿಸಲಿದೆ. 

Advertisement

ಜಿಲ್ಲೆಯಲ್ಲಿ ಸಾಸ್ತಾನ ಟೋಲ್‌ ಗೇಟ್‌ನಲ್ಲಿ ನೀಡಿದಂತಹ ವಿನಾಯಿತಿಯನ್ನು ಹೆಜಮಾಡಿಯಲ್ಲಿ ಪಡುಬಿದ್ರಿ ಜಿಲ್ಲಾ ಪಂಚಾಯ್‌ ವ್ಯಾಪ್ತಿಗೂ ನೀಡಲೇ ಬೇಕು. ನವಯುಗ ಕಂಪೆನಿ ಅವೈಜ್ಞಾನಿಕ ಕಾಮಗಾರಿಗಳಿಂದ ಅದೆಷ್ಟೋ ಜೀವಹಾನಿಗಳಾಗಿವೆ. ಜಿಲ್ಲೆಯ ಎಲ್ಲೂ ಹಸುರು ಹೊದಿಕೆಯ ಕೆಲಸ ಕಾರ್ಯಗಳಾಗಿಲ್ಲ. ಜನ ಸಾಮಾನ್ಯರಿಗಾಗಿ ಬಸ್‌ ನಿಲ್ದಾಣಗಳನ್ನು ರಚಿಸಲಾಗಿಲ್ಲ. ಸರ್ವಿಸ್‌ ರಸ್ತೆ ಮೊದಲೇ ಇಲ್ಲ. ಹೆಜಮಾಡಿಯಲ್ಲಿ ಸ್ಕೈವಾಕ್‌ ನಿರ್ಮಾಣ ಅತ್ಯಗತ್ಯವಾಗಿದ್ದು ಅದನ್ನೂ ನಿಭಾಯಿಸದೇ ಕೇವಲ ಟೋಲ್‌ ವಸೂಲಿಗಾಗಿ ಜನತೆಯನ್ನು ಪೀಡಿಸಲಾಗುತ್ತಿದೆ.

ತಮ್ಮ ಪ್ರತಿಭಟನೆ ಯೊಂದಿಗೆ ನಾಳೆಯಿಂದ ಆಮರಣಾಂತ ಉಪವಾಸವನ್ನೂ ಆರಂಭಿಸುವ ನಿರ್ಧಾರವನ್ನೂ ಪಡುಬಿದ್ರಿ ನಾಗರಿಕ ಸಮಿತಿಯ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ ಹಾಗೂ ಕರವೇ ನಾಯಕ ಅನ್ಸಾರ್‌ ಅಹಮ್ಮದ್‌ ಮತ್ತಿತರರು ಅಪರ ಜಿಲ್ಲಾಧಿಕಾರಿ ಸಮಕ್ಷಮ ನಡೆದ ಸಭೆಯಲ್ಲಿ ಹೇಳಿದರು. 

ಸಭೆಯಲ್ಲಿ ಡಾ| ದೇವಿಪ್ರಸಾದ್‌ ಶೆಟ್ಟಿ, ಗುಲಾಂ ಮಹಮ್ಮದ್‌, ಮೂಲ್ಕಿಯ ನಾಗರಿಕ ಸಮಿತಿ ಅಧ್ಯಕ್ಷ, ಮೂಲ್ಕಿ ಪುರಸಭಾಧ್ಯಕ್ಷ ಸುನಿಲ್‌ ಅಳ್ವ , ಮೂಲ್ಕಿ ಕಾರು ಚಾಲಕ ಮಾಲಕರ ಸಂಘದ ಅಧ್ಯಕ್ಷ ಮಧು ಆಚಾರ್ಯ, ದಸಂಸ ನಾಯಕ ಲೋಕೇಶ್‌ ಕಂಚಿನಡ್ಕ ಮತ್ತಿತರರು ಮಾತನಾಡಿದರು. 

ಇದೇ ವೇಳೆ ನವಯುಗ ಅಧಿಕಾರಿ ರಾಘವೇಂದ್ರ ಯಾವುದೇ ತಿರ್ಮಾನಕ್ಕೆ ಬರಲು ಇನ್ನೂ ಮೂರು ದಿನಗಳ ಕಾಲಾವಕಾಶವನ್ನು ಬಯಸಿದರು. 

Advertisement

ಪಡುಬಿದ್ರಿಯ ಟೆಂಪೋ ನಿಲ್ದಾಣದ ಬಳಿ ತಮ್ಮ ಪ್ರತಿಭಟನ ಸ್ಥಳದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅನ್ಸಾರ್‌ ಅಹಮ್ಮದ್‌ ಹಾಗೂ ಕಾಪು ಘಟಕಾಧ್ಯಕ್ಷ ಸೆಯ್ಯದ್‌ ನಿಝಾಮ್‌ ಮತ್ತಿತರರು ತಮ್ಮ ಆಮರಣಾಂತ ಉಪವಾಸವನ್ನು ಆರಂಭಿಸಲಿರುವುದಾಗಿ ಆಸೀಫ್‌ ಆಪದಾºಂಧವ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next