Advertisement

Rabkavi-Banhatti; ಬಡವರಿಗೆ ಉಚಿತವಾಗಿ ಡಯಾಲಿಸಿಸ್ ಕೇಂದ್ರ: ಶಾಸಕ ಸಿದ್ದು ಸವದಿ

06:18 PM Aug 30, 2024 | Team Udayavani |

ರಬಕವಿ ಬನಹಟ್ಟಿ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಕೇಂದ್ರ ಆರಂಭಗೊಂಡಿದ್ದು, ರಬಕವಿ ಬನಹಟ್ಟಿ ಹಾಗೂ ತೇರದಾಳ ಮತಕ್ಷೇತ್ರದ ಬಡ ರೋಗಿಗಳು ಈ ಘಟಕದ ಸೌಲಭ್ಯವನ್ನು ಉಚಿತವಾಗಿ ಪಡೆದುಕೊಳ್ಳಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

Advertisement

ಶುಕ್ರವಾರ ರಬಕವಿ ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.

ಡಯಾಲಿಸಿಸ್ ಗಾಗಿ ಈ ಭಾಗದ ಜನರು ಮೊದಲು ವಿಜಯಪುರ, ಬಾಗಲಕೋಟೆ, ಬೆಳಗಾವಿಗೆ ಹೋಗುವುದು ಅನಿವಾರ್ಯವಾಗಿತ್ತು. ಆದರೆ ಈಗ ರಬಕವಿ ಬನಹಟ್ಟಯಲ್ಲಿಯೇ ಈ ಘಟಕ ಆರಂಭವಾಗಿದ್ದು ಹೆಮ್ಮೆಯ ಸಂಗತಿಯಾಗಿದೆ.

ದಿನಾಲು ಇಲ್ಲಿ 6ಜನರಿಗೆ ಉಚಿತವಾಗಿ ಸೇವೆಯನ್ನು ನೀಡಲಾಗುವುದು. ಈ ಡಯಾಲಿಸಿಸ್ ಕೇಂದ್ರದ ಸೌಲಭ್ಯವನ್ನು ಬಡ ರೋಗಿಗಳು ಪಡೆದುಕೊಳ್ಳಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

ಜಿಲ್ಲಾ ಸಮೀಕ್ಷಣಾಧಿಕಾರಿ ದಯಾನಂದ ಕರೆನ್ನವರ ಮಾತನಾಡಿ, ಇಲ್ಲಿ ರೂ. 30 ಲಕ್ಷ ವೆಚ್ಚದಲ್ಲಿ ಡಯಾಲಿಸಿಸ್ ಕೇಂದ್ರವನ್ನು ಆರಂಭಿಸಲಾಗಿದೆ. ಕೇಂದ್ರಕ್ಕೆ ಬೇಕಾದ ಸಿಬ್ಬಂದಿ ವರ್ಗದವರಿಗೂ ಕೂಡಾ ತರಬೇತಿನ್ನು ನೀಡಿ ನೇಮಕ ಮಾಡಿಕೊಳ್ಳಲಾಗಿದೆ ಎಂದರು.

Advertisement

ಡಾ. ಎನ್.ಎಂ. ನದಾಫ್ ಮಾತನಾಡಿ, ಸದ್ಯ ಎರಡು ಘಟಕಗಳನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾದರೆ ಇನ್ನೆರಡು ಘಟಕಗಳನ್ನು ಆರಂಭಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ನಗರಸಭೆಯ ಅಧ್ಯಕ್ಷೆ ವಿದ್ಯಾ ಧಬಾಡಿ, ವೈದ್ಯರಾದ ಡಾ.ವೀರೇಶ ಹುಡೇದಮನಿ, ಸುನೀಲ ಹನಗಂಡಿ, ಕಾವೇರಿ ಹಳ್ಯಾಳ, ಆರ್.ಎನ್. ನದಾಫ್, ಆಯೇಷಾ ತಾಂಬೋಳಿ, ಪೌರಾಯುಕ್ತ ಜಗದೀಶ ಈಟಿ, ಶ್ರೀಶೈಲ ಬೀಳಗಿ, ಈರಣ್ಣ ಚಿಂಚಖಂಡಿ, ಅಶೋಕ ರಾವಳ, ಆಸ್ಪತ್ರೆಯ ಅಧೀಕ್ಷಕಿ ಸ್ಮಿತಾ ಕಾಳಗಿ, ಶಿವಾನಂದ ಕಾಗಿ, ಮುಖೇಶ ಬನಹಟ್ಟಿ, ಗಂಗಾಧರ ಗೊಬ್ಬಾಣಿ, ಅಪ್ಪಾಜಿ ಹೂಗಾರ, ಗೋಪಾಲ ಕರಜಗಿ, ಮಹಾಲಿಂಗ ಗೋಣಿ, ರವಿ ವಾಘ್ಮೋರೆ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next