Advertisement

Eshwarappa ಏನೂ ಗೊತ್ತಿಲ್ಲದ ಸಿದ್ದು ಪತ್ನಿ ಹೆಸರು ಥಳಕು ಹಾಕಿಕೊಂಡಿದ್ದಕ್ಕೆ ನೋವಾಗಿದೆ

07:27 PM Sep 09, 2024 | Poornashri K |

ಶಿವಮೊಗ್ಗ: ಸಿದ್ದರಾಮಯ್ಯ ಭ್ರಷ್ಟಾಚಾರಕ್ಕೆ ಅವರ ಪತ್ನಿ ಹೆಸರು ಚರ್ಚೆಯಾಗುತ್ತಿದೆ. ವ್ಯವಹಾರ ಮಾಡುವವರು ಆದಾಯ ತೆರಿಗೆ ಇತ್ಯಾದಿಗಳಿಗೆ ಮಡದಿಯ ಸಹಿ ಹಾಕಿಸಿಕೊಳ್ಳುವುದು ಸಾಮಾನ್ಯ. ಅದೇ ರೀತಿ ಪಾರ್ವತಮ್ಮ ಅವರು ಸಹಿ ಹಾಕಿರಬಹುದು. ಪ್ರಕರಣ ಏನೆಂದೇ ಅವರಿಗೆ ಗೊತ್ತಿರಲಿಕ್ಕಿಲ್ಲ. ಸಾರ್ವಜನಿಕವಾಗಿ ಎಂದೂ ಗುರುತಿಸಿಕೊಳ್ಳದ ಹೆಣ್ಣುಮಗಳ ಹೆಸರು ಬಳಕೆಯಾಗುತ್ತಿರುವುದು ನನಗೂ ನೋವು ತಂದಿದೆ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಆಗ್ರಹಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೇ ದಿನ 849 ನಿವೇಶನ ಹಂಚಿಕೆ ಮಾಡಿ ಕಾನೂನು ಉಲ್ಲಂಘನೆ ಮಾಡಿದ್ದ ಅಂದಿನ ಮುಡಾ ಅಧ್ಯಕ್ಷರ ವಿರುದ್ಧ ಸರ್ಕಾರ ತಕ್ಷಣ ಕಾನೂನು ಕ್ರಮ ಜರುಗಿಸಬೇಕು. ಹಿಂದೆ ಯಾವ ಪಕ್ಷದಲ್ಲಿ ಅವರಿದ್ದರು ಎಂಬುದು ಮುಖ್ಯವಲ್ಲ. ಈಗ ಅವರು ಮಾಡಿರುವ ಅಕ್ರಮ ಬಹಿರಂಗವಾಗಿದೆ.

ತನ್ನ ಅಕ್ರಮ ವ್ಯವಹಾರ ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದಲೇ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದಾರೆ. ಮುಡಾದಲ್ಲಿ ಇಂತಹ ಹಗರಣ ಎಷ್ಟು ನಡೆದಿವೆಯೋ ಎಂಬ ಅನುಮಾನ ಮೂಡುತ್ತಿದೆ. ಇದು ಮೈಸೂರು ಮಾತ್ರವಲ್ಲ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ನಡೆದಿರಬಹುದು. ಸಿದ್ದರಾಮಯ್ಯ ಕೂಡಲೇ ತನಿಖೆಗೆ ಆದೇಶ ನೀಡಬೇಕು. ಭ್ರಷ್ಟಾಚಾರವನ್ನು ಯಾವ ಪಕ್ಷದವರು ಮಾಡಿದರೂ ಶಿಕ್ಷೆ ನೀಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.