Advertisement

Munirathna Audio: ಬಿಜೆಪಿ ಶಾಸಕ ಮುನಿರತ್ನ ಪ್ರಕರಣ; ಮತ್ತೊಂದು ಆಡಿಯೋ ವೈರಲ್‌?

08:34 AM Sep 16, 2024 | Team Udayavani |

ಬೆಂಗಳೂರು: ಗುತ್ತಿಗೆದಾರ ಮತ್ತು ಪಾಲಿಕೆ ಮಾಜಿ ಸದಸ್ಯನಿಗೆ ಜಾತಿ ನಿಂದನೆ ಮತ್ತು ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ಶಾಸಕ ಮುನಿರತ್ನ ಬಂಧನವಾಗಿದ್ದು, ಈ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಆಡಿಯೋ ವೈರಲ್‌ ಆಗಿದೆ.

Advertisement

ರಾಜರಾಜೇಶ್ವರಿನಗರ ಕ್ಷೇತ್ರದ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ತಂದೆ ಹನುಮಂತರಾಯಪ್ಪ ಮತ್ತು ಪ್ರಕರಣದ ದೂರುದಾರ ಚೆಲುವರಾಜು ಮತ್ತು ಸ್ನೇಹಿತನದ್ದು ಎನ್ನಲಾದ ಆಡಿಯೋ ಇದೀಗ ವೈರಲ್‌ ಆಗಿದೆ.

ಈಗಾಗಲೇ ಆಡಿಯೋವನ್ನು ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಆಡಿಯೋದಲ್ಲಿ ಚೆಲುವರಾಜು ಮತ್ತು ಸ್ನೇಹಿತ ಸಹ ಮಾತಾಡಿರುವುದು ಇದೆ. ಸದ್ಯ ವೈರಲ್‌ ಆಗಿರುವ ಆಡಿಯೋ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಪೊಲೀಸರ ತನಿಖೆ ವೇಳೆಯಲ್ಲೂ ಈ ಆಡಿಯೋ ಬಗ್ಗೆ ಪ್ರಸ್ತಾಪವಾಗಿಲ್ಲ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next