Advertisement

ಆಕಸ್ಮಿಕವಾಗಿ ಜಿಲೆಟಿನ್‌ ಕಡ್ಡಿಗಳು ಸ್ಫೋಟ; ಕಂಪಿಸಿದ ಭೂಮಿ

12:41 PM Jul 04, 2018 | |

ಬೆಂಗಳೂರು: ನಗರದ ಎಲ್‌.ಬಿ.ಶಾಸ್ತ್ರಿನಗರದಲ್ಲಿ ನಿರ್ಮಿಸುತ್ತಿರುವ ಎಚ್‌ಎಎಲ್‌ ವಸತಿಗೃಹ ಕಾಮಗಾರಿ ಸ್ಥಳದಲ್ಲಿ ಮಂಗಳವಾರ ಸಂಜೆ ಜಿಲೆಟಿನ್‌ ಕಡ್ಡಿಯಿಂದ ಸ್ಫೋಟ ಸಂಭವಿಸಿ ಕೆಲ ಕಾಲ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತು. ಅದೃಷ್ಟವಶಾತ್‌ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Advertisement

ಕೆಲ ವರ್ಷಗಳಿಂದ ಎಚ್‌ಎಎಲ್‌ ಆವರಣದಲ್ಲಿ ಎಂಟೂವರೆ ಎಕರೆ ಜಾಗದಲ್ಲಿ ಸಿಬ್ಬಂದಿಗಾಗಿ ವಸತಿಗೃಹ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಸುತ್ತಲೂ ಕಾಂಪೌಂಡ್‌ ನಿರ್ಮಿಸಲಾಗಿದೆ. ಮೂರು ತಿಂಗಳ ಹಿಂದೆ ಕಾಮಗಾರಿಗಾಗಿ ಈ ಆವರಣದಲ್ಲಿರುವ ಹತ್ತಾರು ಬಂಡೆಗಳನ್ನು ಹೊಡೆಯಲು ಜಿಲೆಟಿನ್‌ ಕಡ್ಡಿಗಳನ್ನು ಬಳಸಲಾಗಿತ್ತು. ಹೊಡೆದ ಬಂಡೆಗಳನ್ನು ತೆರವುಗೊಳಿಸಿದ ಬಳಿಕವೂ ಕೆಲ ಜಿಲೆಟಿನ್‌ ಕಡ್ಡಿಗಳನ್ನು ಅಲ್ಲಿಯೇ ಹಾಕಲಾಗಿದೆ.

ತಗ್ಗು ಪ್ರದೇಶದಲ್ಲಿ ಈ ಮೊದಲು ತ್ಯಾಜ್ಯವಸ್ತುಗಳನ್ನು ಹಾಕುತ್ತಿದ್ದರು. ಇದೀಗ ಇದೇ ಜಾಗದಲ್ಲಿ ಕಾರ್ಮಿಕರು ಕೂಡ ಕಸದ ರಾಶಿ ಹಾಕಿ ಸುಟ್ಟು ಹಾಕುತ್ತಿದ್ದರು. ಮಂಗಳವಾರ ಸಹ ಕಾರ್ಮಿಕರು ಕಸದ ರಾಶಿ ಹಾಕಿ ಬೆಂಕಿ ಹಾಕಿದ್ದಾರೆ. ಪರಿಣಾಮ ಕೆಳಭಾಗದಲ್ಲಿದ್ದ ಜಿಲೆಟಿನ್‌ ಕಡ್ಡಿಗಳು ಸ್ಫೋಟಗೊಂಡಿದೆ. ಸ್ಫೋಟದ ಶಬ್ಧಕ್ಕೆ ಪಕ್ಕದಲ್ಲೇ ಇದ್ದ ಸಾವಿರಾರು ಲೀಟರ್‌ ನೀರು ಸಂಗ್ರಹ ಸಾಮರ್ಥಯದ ಸಿಂಥಟಿಕ್‌ ಟ್ಯಾಂಕ್‌ ಸ್ಫೋಟಗೊಂಡಿದೆ ಎಂದು ವೈಟ್‌ಫೀಲ್ಡ್‌ ಡಿಸಿಪಿ ಅಬ್ದುಲ್‌ ಅಹದ್‌ ಹೇಳಿದ್ದಾರೆ. 

ಸ್ಥಳಕ್ಕೆ ಶ್ವಾನದಳ, ಬಾಂಬ್‌ ನಿಷ್ಕ್ರಿಯ ದಳ ಹಾಗೂ ವಿಧಿವಿಜ್ಞಾನ ಪರೀûಾ ಕೇಂದ್ರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನಾ ಸ್ಥಳದಲ್ಲಿ ಜಿಲೆಟಿನ್‌ ಕಡ್ಡಿಗಳು, ಪುಡಿ ಪತ್ತೆಯಾಗಿದ್ದು, ಇದರಿಂದಲೇ ಸ್ಫೋಟ ಸಂಭವಿಸಿದೆ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಇದನ್ನು ಹೊರತು ಪಡಿಸಿ ಬೇರೆ ಯಾವುದೇ ರೀತಿಯ ವಿಧ್ವಂಸಕ ಕೃತ್ಯದ ಕುರುಹು ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂಬಂಧ ನಿರ್ಲಕ್ಷ್ಯದ ಆರೋಪದ ಮೇಲೆ ಕಟ್ಟಡ ನಿರ್ಮಾಣ ಗುತ್ತಿಗೆದಾರ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಆರೋಪದ ಮೇಲೆ ಎಚ್‌ಎಎಲ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಬ್ದುಲ್‌ ಅಹದ್‌ ತಿಳಿಸಿದರು.

Advertisement

ಒಂದೂವರೆ ಕಿ.ಮೀಟರ್‌ ಕಂಪಿಸಿದ ಭೂಮಿ: ಸಂಜೆ 5 ಗಂಟೆ ಸುಮಾರಿಗೆ ಇದಕ್ಕಿದ್ದಂತೆ ಭಾರೀ ಪ್ರಮಾಣದಲ್ಲಿ ಸ್ಫೋಟಗೊಂಡರಿಂದ ಎಚ್‌ಎಎಲ್‌ ಆವರಣದಲ್ಲೇ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅಲ್ಲದೆ, ಘಟನಾ ಸœಳದಿಂದ ಸುತ್ತಲು ಸುಮಾರು ಒಂದೂವರೆ ಕಿ.ಮೀಟರ್‌ವರೆಗೂ ಭೂಮಿ ಕಂಪಿಸಿದ್ದರಿಂದ ಹೆದರಿದ ಸಾರ್ವಜನಿಕರು ಮನೆಯಿಂದ ಹೊರ ಓಡಿಬಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next