Advertisement
ಗ್ಯಾರಂಟಿಯೂ ಸೇರಿದಂತೆ ಕಲ್ಯಾಣ ಕಾರ್ಯಕ್ರಮಗಳಿಗೆ 1.20 ಲಕ್ಷ ಕೋಟಿ ರೂ. ಗಳನ್ನು ತೊಡಗಿಸುವ ಪ್ರಸ್ತಾಪ ಮಾಡುವ ಮೂಲಕ ಒಟ್ಟಾರೆ ಬಜೆಟ್‌ನ ಶೇ.32.60ರಷ್ಟನ್ನು ಬಳಕೆ ಮಾಡುತ್ತಿದ್ದಾರೆ. ರಾಜ್ಯವನ್ನು ಹೆಚ್ಚು ಅಭಿವೃದ್ಧಿಯತ್ತ ಕೊಂಡೊಯ್ಯಬಹುದಾದ ಬಂಡವಾಳ ವೆಚ್ಚಕ್ಕಾಗಿ 55877 ಕೋಟಿ ರೂ. ಅಂದರೆ ಶೇ.15.15 ರಷ್ಟನ್ನು ಮಾತ್ರ ತೆಗೆದಿರಿಸಿದ್ದು, ಬಜೆಟ್‌ನ 1.05 ಲಕ್ಷ ಕೋಟಿ ರೂ. (ಶೇ.28.57) ಸಾಲ ಪಡೆಯುತ್ತಿದ್ದಾರೆ. ಹಳೆ ಸಾಲ ಮರುಪಾವತಿಗೆ 24974 ಕೋಟಿ ರೂ. ಮೀಸಲಿಟ್ಟಿದೆ. ಇದೆಲ್ಲವೂ ಗ್ಯಾರಂಟಿಸಹಿತ ಇತರೆ ಕಲ್ಯಾಣ ಕಾರ್ಯಕ್ರಮಗಳ ತೆಗೆದುಕೊಂಡಿರುವ ಸವಾಲನ್ನು ತೋರಿಸುತ್ತಿದೆ. ಎಲ್ಲ ಸವಾಲುಗಳ ನಡುವೆ ಕರ್ನಾಟಕವು ಜಿಎಸ್‌ಟಿ ಸಂಗ್ರಹಣೆಯಲ್ಲಿ 2ನೇ ಸ್ಥಾನದಲ್ಲಿದೆ. ಜನವರಿ ಅಂತ್ಯದವರೆಗೆ 58180 ಕೋಟಿ ರೂ. ಎಸ್‌ಜಿಎಸ್‌ಟಿ ಸಂಗ್ರಹವಾಗಿದ್ದು, ಕಳೆದ ಸಾಲಿಗಿಂತ ಜಿಎಸ್‌ಟಿ ಸಂಗ್ರಹಣೆಯ ಬೆಳವಣಿಗೆ ದರವು ಶೇ.14 ರಷ್ಟಾಗಿದೆ. ಬರಗಾಲದಿಂದ 35 ಸಾವಿರ ಕೋಟಿ ರೂ.ಗೂ ಅಧಿಕ ನಷ್ಟ ಸಂಭವಿಸಿದೆ ಹಾಗೂ ಕೇಂದ್ರ ಸರ್ಕಾರಕ್ಕೆ 18 ಸಾವಿರ ಕೋಟಿ ರೂ.ಗಳ ಪರಿಹಾರ ಕೇಳಿರುವುದಾಗಿ ಅವರೇ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್ನಿಂದ ಬರ ಪರಿಹಾರ ಸಿಕ್ಕರೆ ರಾಜ್ಯ ಸರ್ಕಾರ ಕೊಂಚ ಉಸಿರಾಡಬಹುದು.
Related Articles
Advertisement