Advertisement
* ಮಾಸ್ಕ್ ಧರಿಸುವುದು, ಸ್ಯಾನಿಟೈಜೇಷನ್, ಸಾಮಾಜಿಕ ಅಂತರ 8.42 ಲಕ್ಷ ವಿದ್ಯಾರ್ಥಿಗಳಿಗೆ ಅನ್ವಯಿಸಿದ್ದು ಮತ್ತು ಇದರ ಬಗ್ಗೆ ವಿದ್ಯಾರ್ಥಿಗಳು ಭಯ, ಆತಂಕಪಡದೆ, ನಿರ್ಭೀತಿಯಿಂದ ಪರೀಕ್ಷೆ ಬರೆಯಬೇಕು.
Related Articles
Advertisement
*ಪರೀಕ್ಷೆ ಕೊಠಡಿ ಅಥವಾ ಪರೀಕ್ಷೆ ಮುಗಿದು ಮನೆ ಸೇರುವವರೆಗೂ ಬಾಯಿ, ಮೂಗು ಇತ್ಯಾದಿ ಮುಟ್ಟಿಕೊಳ್ಳದಂತೆ ಎಚ್ಚರವಹಿಸಿ.-ಡಾ.ಬಿ.ಎನ್.ಗಂಗಾಧರ್, ನಿರ್ದೇಶಕ ನಿಮ್ಹಾನ್ಸ್ *** * ವಿದ್ಯಾರ್ಥಿಗಳು ಅಥವಾ ಪಾಲಕ, ಪೋಷಕರಿಗೆ ಪರೀಕ್ಷಾ ಕೇಂದ್ರದ ಭದ್ರತೆ, ಸುರಕ್ಷತೆಯ ಬಗ್ಗೆ ಚಿಂತೆ ಬೇಡ. ಅದನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ, ಆಯಾ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮಾಡುತ್ತದೆ. ದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಬರೆಯಲು ಎಲ್ಲ ವ್ಯವಸ್ಥೆಯಾಗಿದೆ. * ಪರೀಕ್ಷಾ ಕೇಂದ್ರದಲ್ಲೇ ಮಾಸ್ಕ್, ಸ್ಯಾನಿಟೈಜೇಷನ್ ಮತ್ತು ಸಾಮಾಜಿಕ ಅಂತರದ ಸಂಪೂರ್ಣ ವ್ಯವಸ್ಥೆಯಾಗಿದೆ. ಹೀಗಾಗಿ ಈ ಬಗ್ಗೆ ಯಾವುದೇ ಆತಂಕ ಬೇಡ * ಪರೀಕ್ಷಾ ಕೇಂದ್ರದೊಳಗೆ ನಿಮಗಾಗಿ ವ್ಯವಸ್ಥೆ ಮಾಡಿರುವ ಸ್ಥಳದಲ್ಲಿ ಬೇರೆ ಯಾವುದೇ ಆಲೋಚನೆಗಳು ಇಲ್ಲದೇ ಪ್ರಶ್ನೆ ಪತ್ರಿಕೆಗಳನ್ನು ಚೆನ್ನಾಗಿ ಓದಿ, ಅರ್ಥಮಾಡಿಕೊಂಡು ಬರೆಯುವುದೇ ನಿಮ್ಮ ಗುರಿಯಾಗಲಿ. * ಬೇರೆ ಬೇರೆ ಆಲೋಚನೆಗಳನ್ನು ಮಾಡಿ ಓದಿರುವ ಅಂಶಗಳನ್ನು ಮರೆತು ಬಿಡಬೇಡಿ, ಪ್ರಶ್ನೆ ಮತ್ತು ಉತ್ತರದ ಬಗ್ಗೆಯೇ ಗಮನ ಇರಲಿ.
-ವಿ.ಸುಮಂಗಳಾ, ನಿರ್ದೇಶಕಿ, ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ *** * ಪ್ರತಿ ವಿದ್ಯಾರ್ಥಿಯು ಗೆಲ್ಲುತ್ತೇನೆ ಎಂಬ ಸ್ವಯಂ ನಿರ್ಧಾರ ಮಾಡಬೇಕು. ಶಾಲಾ ಜೀವನದ ಸಕಾರಾತ್ಮಕ ಅಂಶಗಳನ್ನು ನೆನಪಿಗೆ ತಂದುಕೊಳ್ಳಿ, ಪರೀಕ್ಷೆ ಗೆಲ್ಲುತ್ತೇನೆ ಎಂಬ ಧೈರ್ಯ ಮೊದಲು ನಿಮ್ಮಲ್ಲಿ ಹುಟ್ಟಿಸಿಕೊಳ್ಳಿ * ಇದೇ ಪರೀಕ್ಷೆ ಅಂತಿಮವಲ್ಲ, ಪೂರಕ ಪರೀಕ್ಷೆಯಿದೆ. ಸಮಚಿತ್ತ ಭಾವದಿಂದ ಪರೀಕ್ಷೆ ಎದುರಿಸುವ ನಿಲುವು ನಿಮ್ಮದಾಗಿರಲಿ. * ಪರೀಕ್ಷಾ ಕೇಂದ್ರ ಮತ್ತು ಕೊಠಡಿ ಹೇಗಿರಲಿದೆ ಎಂಬುದನ್ನು ನಿಮ್ಮಲ್ಲೇ ಮನನ ಮಾಡಿಕೊಳ್ಳಿ, ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರ ಇತ್ಯಾದಿಗಳ ಬಗ್ಗೆ ನಿಮ್ಮಲ್ಲೇ ಕಲ್ಪನೆ ಇರಲಿ. ಇದ್ಯಾವುದರ ಬಗ್ಗೆಯೂ ಭಯ ಮತ್ತು ಪರೀಕ್ಷಾ ಕೇಂದ್ರದಲ್ಲಿ ಅತಿಯಾದ ಚಿಂತನೆ ಬೇಡವೇ ಬೇಡ!
-ನಾಗಸಿಂಹ ಜಿ.ರಾವ್, ನಿರ್ದೇಶಕ ಚೈಲ್ಡ್ ರೈಟ್ ಟ್ರಸ್ಟ್