Advertisement

ಪ್ರಾಯೋಗಿಕ ತರಬೇತಿಯೂ ಸಿಗುವಂತಾಗಲಿ

04:38 PM May 21, 2018 | Team Udayavani |

ಹುಬ್ಬಳ್ಳಿ: ಶಿಕ್ಷಣ ಸಂಸ್ಥೆಗಳು ಕೇವಲ ಪದವೀಧರರನ್ನು ಉತ್ಪಾದಿಸುವ ಕೇಂದ್ರಗಳಾಗುತ್ತಿರುವುದು ಆತಂಕದ ಸಂಗತಿ ಎಂದು ಲೆಕ್ಕಪರಿಶೋಧಕ ಎಸ್‌.ಬಿ. ಶೆಟ್ಟಿ ಹೇಳಿದರು. ಆರ್‌.ಎನ್‌. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ರವಿವಾರ ರೋಟರಿ ಕ್ಲಬ್‌ ಆಫ್ ಹುಬ್ಬಳ್ಳಿ, ರುಡ್‌ಸೆಟಿ, ಧಾರವಾಡ ಬಂಟರ ಸಂಘದ ಸಹಯೋಗದಲ್ಲಿ ನಡೆದ ನಿರುದ್ಯೋಗಿ ಯುವಜನರಿಗೆ ಕೌಶಲಾಭಿವೃದ್ಧಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

Advertisement

ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ನೀಡಲಾಗುತ್ತಿದೆ. ಆದರೆ ಶಾಲಾ-ಕಾಲೇಜುಗಳಲ್ಲಿ ವ್ಯಕ್ತಿತ್ವ ನಿರ್ಮಾಣದ ಕಾರ್ಯವಾಗುತ್ತಿಲ್ಲ. ಪದವೀಧರರು ಉದ್ಯೋಗ ನಿರೀಕ್ಷಿಸುವ ಕೌಶಲಗಳನ್ನು ಹೊಂದಿರುವುದಿಲ್ಲ. ಕೇವಲ ಪುಸ್ತಕ ಜ್ಞಾನ ನೀಡಿದರೆ ಸಾಲದು, ಪ್ರಾಯೋಗಿಕ ತರಬೇತಿಯೂ ಸಿಗುವಂತಾಗಬೇಕು. ಪಠ್ಯಕ್ರಮ ಹಾಗೂ ಉದ್ಯಮ ಕ್ಷೇತ್ರದ ಅಂತರ ಹೆಚ್ಚಾಗುತ್ತಿದೆ. ಅವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಸಾಕಷ್ಟಿದೆ. ಆದರೆ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಕೂಡ ಹೆಚ್ಚುತ್ತಿರುವ ಬಗ್ಗೆ ಚಿಂತನೆ ಅಗತ್ಯ ಎಂದರು.

ಕಾರ್ಯಾಗಾರಕ್ಕೆ ಚಾಲನೆ ನೀಡಿದ ಮಹಾಪೌರ ಸುಧೀರ ಸರಾಫ‌ ಮಾತನಾಡಿ, ಹಲವು ಸಂಘ-ಸಂಸ್ಥೆಗಳು ಕೌಶಲಾಭಿವೃದ್ಧಿ ತರಬೇತಿ ನೀಡುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಎಸ್‌.ಆರ್‌. ಕ್ರಾಸ್ಟಾ ಮಾತನಾಡಿ, ಉದ್ಯಮಿಗಳಿಗೆ ಹಾಗೂ ಇತರರಿಗೆ ಯಾವ ವ್ಯತ್ಯಾಸವಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ಆಗ ನಮಗೆ ಉದ್ಯಮಶೀಲತೆ ಬಗ್ಗೆ ತಿಳಿವಳಿಕೆ ಮೂಡಲು ಸಾಧ್ಯ ಎಂದರು. ಪ್ರಕಾಶ ರಾವ್‌, ಅರವಿಂದ ಕುಬಸದ, ರತ್ನಾಕರ ಶೆಟ್ಟಿ , ಜಗದೀಶ ಪೂಜಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next