Advertisement

ಬೇಕಾಬಿಟ್ಟಿ ಬಿಲ್‌ಗೆ ಗ್ರಾಹಕರ “ಶಾಕ್‌’

04:21 AM May 14, 2020 | Suhan S |

ಧಾರವಾಡ: ಕೋವಿಡ್ ಲಾಕ್‌ಡೌನ್‌ನಿಂದ ಕಂಗಾಲಾಗಿರುವ ಜನತೆಗೆ ಹೆಸ್ಕಾಂ ಬೇಕಾಬಿಟ್ಟಿ ಬಿಲ್‌ ನೀಡುವ ಮೂಲಕ ಶಾಕ್‌ ನೀಡುತ್ತಿರುವ ಬಗ್ಗೆ ಗ್ರಾಹಕರಿಂದ ದೂರುಗಳು ಕೇಳಿ ಬಂದಿವೆ. ಹೊಸಯಲ್ಲಾಪುರದ ಆರೇರ್‌ ಓಣಿಯ ರಾಜು ಬಿರ್ಜೆಣ್ಣವರ ಅವರ ಮನೆಗೆ 7,64,581ರೂ., ಇನ್ನೊಂದು ಮನೆಗೆ 10,590 ರೂ. ಬಿಲ್‌ನ್ನು ಹೆಸ್ಕಾಂ ನೀಡಿದೆ.

Advertisement

ಇದೇ ರೀತಿ ನಗರದ ವಿವಿಧೆಡೆಗಳಲ್ಲಿ ಸರಾಸರಿ ಬಿಲ್‌ 500 ರೂ. ದಿಂದ 1000 ರೂ. ಬರುತ್ತಿದ್ದರೆ, 2000, 3000 ರೂ. ಬಿಲ್‌ ನೀಡಿದ್ದೂ ಇದೆ. ಗ್ರಾಮೀಣ ಭಾಗದ ಮನೆಗಳಿಗೂ ಎರಡು ತಿಂಗಳ ಬಿಲ್‌ 1ರಿಂದ 2 ಸಾವಿರ ಗಡಿ ದಾಟಿದ್ದು ಇದು ಗ್ರಾಹಕರಿಗೆ ಬರೆ ಎಳೆದಂತಾಗಿದೆ.

ಪ್ರತಿ ತಿಂಗಳು ಸರಾಸರಿ 1 ಸಾವಿರ ಬಿಲ್‌ ಬರುತ್ತಿತ್ತು. ಅದರ ಪ್ರಕಾರ ಎರಡು ತಿಂಗಳ ಬಿಲ್‌ ಅಂದಾಜು 2500 ಬರಬಹುದೆಂದು ಅಂದಾಜಿಸಲಾಗಿತ್ತು. ಆದರೆ ವಿದ್ಯುತ್‌ ಬಿಲ್‌ ಲಕ್ಷಗಟ್ಟಲೆ ಬಂದಿದ್ದು ನೋಡಿ ಶಾಕ್‌ ಆಗುವಂತಾಗಿದೆ. ಈ ಕುರಿತು ಹೆಸ್ಕಾಂ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಬಿಲ್‌ ಅನ್ನು ತಾವೇ ತೆಗೆದುಕೊಂಡು ಮತ್ತೂಂದು ಹೊಸ ಬಿಲ್‌ ನೀಡುವುದಾಗಿ ಹೇಳಿ ಹೋಗಿದ್ದಾರೆಂದು ಲಕ್ಷ್ಮಣ ಬಿರ್ಜೆಣ್ಣವರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next